Ayodhya Ram Mandir: ಸೋಮವಾರ ಅಯೋಧ್ಯೆಯಲ್ಲಿ ರಾಮಲಲ್ಲಾ ವಿಗ್ರಹವನ್ನು ಭವ್ಯ ದೇವಸ್ಥಾನದಲ್ಲಿ ಸಾಕಷ್ಟು ವಿಜೃಂಭಣೆಯಿಂದ ಪ್ರತಿಷ್ಠಾಪಿಸಲಾಗಿದೆ. ಇದರ ವಿಜೃಂಭಣೆಯನ್ನು ದೇಶಾದ್ಯಂತ ಸಂಭ್ರಮಿಸಲಾಗಿದೆ. ಪ್ರಾಣ-ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ದೇಶದ ವಿವಿಧ ಮೂಲೆಗಳಿಂದ ಬಂದ ಅತಿಥಿಗಳು ಭಾಗವಹಿಸಿದ್ದರು. ಈ ಅತಿಥಿಗಳಲ್ಲಿ ರಾಜಕೀಯ ವ್ಯಕ್ತಿಗಳಿಂದ ಹಿಡಿದು ಬಾಲಿವುಡ್ ತಾರೆಯರು ಮತ್ತು ವಾಣಿಜ್ಯ ಕ್ಷೇತ್ರದ ಹಲವು ಗಣ್ಯರು ಶಾಮೀಳಾಗಿದ್ದರು. ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರು ತಮ್ಮ ಇಡೀ ಕುಟುಂಬ ಸಮೇತ ಆಗಮಿಸಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.(Business News In Kannada)
ಅಂಬಾನಿ ಕುಟುಂಬ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಮುಕೇಶ್ ಅಂಬಾನಿ ತಮ್ಮ ಕುಟುಂಬ ಸದಸ್ಯರೊಂದಿಗೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 2.51 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ, ಮುಖೇಶ್ ಅಂಬಾನಿ ಅವರ ಪತ್ನಿ ನೀತಾ, ಮಗಳು ಇಶಾ ಮತ್ತು ಅಳಿಯ ಆನಂದ್ ಪಿರಾಮಲ್, ಪುತ್ರರಾದ ಆಕಾಶ್ ಮತ್ತು ಅನಂತ್, ಸೊಸೆ ಶ್ಲೋಕಾ ಮೆಹ್ತಾ ಮತ್ತು ಭಾವಿ ಸೊಸೆರಾಧಿಕಾ ಮರ್ಚೆಂಟ್ ಜೊತೆಗಿದ್ದರು. ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಯಾವ ಉದ್ಯಮಿ ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಉತ್ಸುಕತೆ ಎಲ್ಲರ ಮನಸಿನಲ್ಲಿದೆ, ಅಂಬಾನಿ ಕುಟುಂಬ ಇದುವರೆಗೆ 10 ಕೋಟಿ ರೂಪಾಯಿ ದೇಣಿಗೆ ನೀಡಿದೆ ಎಂದು ಹೇಳಲಾಗುತ್ತಿದೆ.
ಸೂರತ್‌ನ ಉದ್ಯಮಿಯೊಬ್ಬರು ಇದುವರೆಗೆ ರಾಮ ಮಂದಿರಕ್ಕೆ ಗರಿಷ್ಠ ದೇಣಿಗೆ ನೀಡಿದ್ದಾರೆ. ಈ ವಜ್ರದ ವ್ಯಾಪಾರಿಯ ಹೆಸರು ದಿಲೀಪ್ ಕುಮಾರ್ ಲಾಖಿ ಮತ್ತು ಅವರು 101 ಕೆಜಿ ಚಿನ್ನವನ್ನು ದಾನ ಮಾಡಿದ್ದಾರೆ. ಇದರ ಬೆಲೆ ಸುಮಾರು 68 ಕೋಟಿ ಎಂದು ಅಂದಾಜಿಸಲಾಗಿದೆ. ದಿಲೀಪ್ ಕುಮಾರ್ ವಿ ಲಾಖಿ ಮತ್ತು ಅವರ ಕುಟುಂಬದವರು ಸೂರತ್‌ನಲ್ಲಿ ಅತಿ ದೊಡ್ಡ ವಜ್ರದ ಕಾರ್ಖಾನೆಯನ್ನು ಹೊಂದಿದ್ದಾರೆ. ಈ ಚಿನ್ನವನ್ನು ಬಾಗಿಲು, ತ್ರಿಶೂಲ ಮತ್ತು ಡಮರುಗಳಲ್ಲಿ ಬಳಸಲಾಗಿದೆ.
ನ್ಯೂಸ್ 18 ವರದಿ ಪ್ರಕಾರ, ಗುಜರಾತ್‌ನ ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ ಅವರು ರಾಮಮಂದಿರ ನಿರ್ಮಾಣಕ್ಕೆ 11 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ. ಗೋವಿಂದಭಾಯಿ ಧೋಲಾಕಿಯಾ ವಜ್ರ ಕಂಪನಿ ಶ್ರೀರಾಮಕೃಷ್ಣ ಎಕ್ಸ್‌ಪೋರ್ಟ್ಸ್‌ನ ಮಾಲೀಕರಾಗಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಗೌತಮ್ ಅದಾನಿ ಎಷ್ಟು ದೇಣಿಗೆ ನೀಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಅವರು ದೇಣಿಗೆ ನೀಡಿದ್ದಾರೆಯೇ ಎಂಬ ಮಾಹಿತಿಯೂ ಬಹಿರಂಗವಾಗಿಲ್ಲ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಅದಾನಿ ಗ್ರೂಪ್ ಕಂಪನಿಯಾದ ಅದಾನಿ ವಿಲ್ಮಾರ್ ಫಾರ್ಚೂನ್ ಬ್ರಾಂಡ್‌ನೊಂದಿಗೆ ಪ್ರಸಾದವನ್ನು ಸಮರ್ಪಣಾ ಸಮಾರಂಭಕ್ಕೆ ಸಿದ್ಧಪಡಿಸಿದೆ.
ಇದಲ್ಲದೇ ದೇವಸ್ಥಾನದಲ್ಲಿ ದೀಪಾಲಂಕಾರ ಮಾಡುವ ಜವಾಬ್ದಾರಿಯನ್ನು ಹ್ಯಾವೆಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಹಿಸಿಕೊಂಡಿದೆ. ಹ್ಯಾವೆಲ್ಸ್ ಇಂಡಿಯಾದ ಅಧ್ಯಕ್ಷ ಪರಾಗ್ ಭಟ್ನಾಗರ್ ಮಾತನಾಡಿ, ರಾಮಮಂದಿರದ ಬೆಳಕಿನ ವ್ಯವಸ್ಥೆಯ ಐತಿಹಾಸಿಕ ಯೋಜನೆಯನ್ನು ನಮ್ಮ ಕಂಪನಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದಿದ್ದಾರೆ.
ಇದನ್ನೂ ನೋಡಿ-
ಅಸೋಸಿಯೇಟ್ ವೆಬ್‌ಸೈಟ್ ಡಿಎನ್‌ಎಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮೊರಾರಿ ಬಾಪು ಅವರು ಅಧಿಕಾರಿಗಳಿಗೆ 16.3 ಕೋಟಿ ರೂ. ದೇಣಿಗೆ ನೀಡಿದಾರೆ ಎನ್ನಲಾಗಿದೆ. ಇದಲ್ಲದೇ ರಾಮಮಂದಿರಕ್ಕೆ ದೇವಸ್ಥಾನಗಳು ದೇಣಿಗೆ ನೀಡುವ ಬಗ್ಗೆ ಮಾತನಾಡಿದರೆ ಪಾಟ್ನಾದ ಮಹಾವೀರ ಮಂದಿರ ಮುಂಚೂಣಿಯಲ್ಲಿದೆ. ಪಾಟ್ನಾದ ಮಹಾವೀರ ದೇವಸ್ಥಾನವು ರಾಮ ಮಂದಿರ ನಿರ್ಮಾಣಕ್ಕೆ 10 ಕೋಟಿ ರೂ.ದೇಣಿಗೆ ನೀಡಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ