ಮಾರುತಿಯ ಈ ಕಾರಿನ ಮೇಲೆ ಸಿಗುತ್ತಿದೆ 65 ಸಾವಿರದವರೆಗೆ ರಿಯಾಯಿತಿ
Maruti Car Discount Offers:ಇಗ್ನಿಸ್, ಬಲೆನೊ ಮತ್ತು ಸಿಯಾಜ್ ಮೇಲೆ ರಿಯಾಯಿತಿ ನೀಡುತ್ತಿದೆ. ಈ ಕಾರುಗಳ MY22 ಮಾಡೆಲ್ ಮತ್ತು MY23 ಮಾಡೆಲ್ ಮೇಲೆ ರಿಯಾಯಿತಿ ನೀಡುತ್ತಿದೆ.
Maruti Car Discount Offers: ಜನವರಿ ತಿಂಗಳಲ್ಲಿ, ಮಾರುತಿ ತನ್ನ ನೆಕ್ಸಾ ಶ್ರೇಣಿಯ ಕೆಲವು ಮಾದರಿಗಳ ಮೇಲೆ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಇಗ್ನಿಸ್, ಬಲೆನೊ ಮತ್ತು ಸಿಯಾಜ್ ಮೇಲೆ ರಿಯಾಯಿತಿ ನೀಡುತ್ತಿದೆ. ಈ ಕಾರುಗಳ MY22 ಮಾಡೆಲ್ ಮತ್ತು MY23 ಮಾಡೆಲ್ ಮೇಲೆ ರಿಯಾಯಿತಿ ನೀಡುತ್ತಿದೆ. MY22 ಮಾಡೆಲ್ ಮೇಲೆ ಹೆಚ್ಚಿನ ಡಿಸ್ಕೌಂಟ್ ನೀಡುತ್ತಿದ್ದು, MY23 ಮಾಡೆಲ್ ಮೇಲೆ ಕಡಿಮೆ ರಿಯಾಯಿತಿಯನ್ನು ನೀಡಲಾಗುತ್ತಿದೆ. MY22 ಮಾಡೆಲ್ ಮೇಲಿನ ನಗದು ರಿಯಾಯಿತಿಯು ಜನವರಿ 16, 2023 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಆದರೆ MY23 ಮಾದರಿ ಮೇಲಿನ ಆಫರ್ ತಿಂಗಳ ಅಂತ್ಯದವರೆಗೆ ಇರಲಿದೆ.
ಮಾರುತಿ ಇಗ್ನಿಸ್ ಮೇಲಿನ ಆಫರ್ :
ಮಾರುತಿ ಇಗ್ನಿಸ್‌ನಲ್ಲಿ MY22 ಮಾಡೆಲ್ ಮೇಲೆ 30,000 ರೂಪಾಯಿ ಮತ್ತು MY23 ಮಾಡೆಲ್ ಮೇಲೆ 15,000 ರೂಪಾಯಿವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. ಎರಡೂ ಕಾರುಗಳ ಮೇಲೆ ಕ್ರಮವಾಗಿ 15,000 ಮತ್ತು 5,000 ರೂ. ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳ ಸಿಗಲಿವೆ. ಹೀಗಾಗಿ, MY22 ಮಾದರಿ ಖರೀದಿಸಿದರೆ 50,000 ರೂಪಾಯಿ ಮತ್ತು MY23 ಮಾದರಿ ಮೇಲೆ 35,000 ರೂಪಾಯಿಗಳ ಲಾಭವಾಗಲಿದೆ.
ಇದನ್ನೂ ಓದಿ : Big Shock: 17,000 ಉದ್ಯೋಗಿಗಳ ವಜಾ ಮಾಡಲು ಅಮೆಜಾನ್ ನಿರ್ಧಾರ!
ಮಾರುತಿ ಬಲೆನೊ ಮೇಲಿನ ಆಫರ್ :
ಮಾರುತಿ ಬಲೆನಾ MY22 ಮೇಲೆ ಮಾತ್ರ ರಿಯಾಯಿತಿ ನೀಡಲಾಗುತ್ತಿದೆ. ಇದರ ಮೇಲೆ 15,000 ರೂ.ವರೆಗೆ ಮಾತ್ರ ನಗದು ರಿಯಾಯಿತಿ ನೀಡಲಾಗುತ್ತಿದೆ. ಈ ರಿಯಾಯಿತಿ ಕೂಡಾ ಟಾಪ್ ಆಲ್ಫಾ ಎಂಟಿ ರೂಪಾಂತರದ ಮೇಲೆ ಸಿಗಲಿದೆ. ಅದರ MY23 ಮಾಡೆಲ್ ಮೇಲೆ ಯಾವುದೇ ರೀತಿಯ ಆಫರ್ ಇರುವುದಿಲ್ಲ.
ಮಾರುತಿ ಸಿಯಾಜ್ ಮೇಲಿನ ಆಫರ್ :
ಮಾರುತಿ ಸಿಯಾಜ್ MY22 ಮೇಲೆ 35,000 ರೂ.ವರೆಗೆ ನಗದು ರಿಯಾಯಿತಿ ನೀಡಲಾಗುತ್ತಿದೆ. MY23 ಮಾದರಿಯಲ್ಲಿ ಯಾವುದೇ ನಗದು ರಿಯಾಯಿತಿ ಇರುವುದಿಲ್ಲ. ಎರಡರಲ್ಲೂ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಕ್ರಮವಾಗಿ 25,000 ಮತ್ತು 5,000 ರೂ. ಆಗಿರಲಿದೆ. ಈ ಮೂಲಕ MY22 ಮಾದರಿಯಲ್ಲಿ 65,000 ರೂಪಾಯಿ ಮತ್ತು MY23 ಮಾದರಿ ಮೇಲೆ 30,000 ರೂಪಾಯಿ ಒಟ್ಟು ಲಾಭ ಸಿಗಲಿದೆ.
ಇದನ್ನೂ ಓದಿ : Arecanut price: ಇಂದಿನ ಅಡಿಕೆ ದರ, ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.