Post Office Scheme: ಭಾರತೀಯ ಅಂಚೆ ಕಚೇರಿ ಎಂದರೆ ಪೋಸ್ಟ್ ಆಫೀಸ್​ನಲ್ಲಿ ಹಲವು ರೀತಿಯ ಉಳಿತಾಯ ಯೋಜನೆಗಳನ್ನು ಒದಗಿಸಲಾಗುತ್ತದೆ. ಅವುಗಳಲ್ಲಿ ಕೆಲವು ಭವಿಷ್ಯದ ಭದ್ರತೆಯ ದೃಷ್ಟಿಯಿಂದ ಅತ್ಯುತ್ತಮ ಹೂಡಿಕೆ ಯೋಜನೆಗಳು ಎಂದು ಸಾಬೀತುಪಡಿಸುತ್ತವೆ. ಅಂತಹ ಒಂದು ಯೋಜನೆಯ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ... 


COMMERCIAL BREAK
SCROLL TO CONTINUE READING

ಪೋಸ್ಟ್ ಆಫೀಸ್​ನ ಈ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000ಕ್ಕೂ ಹೆಚ್ಚು ಆದಾಯ: 
ನಿಮಗೆಲ್ಲರಿಗೂ ತಿಳಿದಿರುವಂತೆ ಪೋಸ್ಟ್ ಆಫೀಸ್​ನ ಉಳಿತಾಯ ಯೋಜನೆಗಳಲ್ಲಿ (Post Office Savings Scheme) ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ಗರಿಷ್ಠ ಬಡ್ಡಿಯನ್ನು ನೀಡಲಾಗುತ್ತದೆ.  ಅದರಲ್ಲಿ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್​ನಲ್ಲಿ (ಎಸ್​ಸಿಎಸ್​ಎಸ್)  ಒಮ್ಮೆಗೆ ಹಣ ಹೂಡಿಕೆ ಮಾಡುವುದರಿಂದ ತಿಂಗಳಿಗೆ ನಿಯಮಿತ ಆದಾಯವನ್ನು ಗಳಿಸಬಹುದು.  ಗಮನಾರ್ಹವಾಗಿ, ಈ ಯೋಜನೆಯಲ್ಲಿ ತಿಂಗಳಿಗೆ 20,000ಕ್ಕೂ ಅಧಿಕ ಆದಾಯವನ್ನು ಗಳಿಸಬಹುದು. ಅದು ಹೇಗೆ ಸಾಧ್ಯ ಎಂದು ಯೋಚಿಸುತ್ತಿದ್ದರೆ ಮುಂದೆ ಓದಿ... 


ಇದನ್ನೂ ಓದಿ- ಭಾರತೀಯ ರೈಲ್ವೇ: ಪ್ಯಾಸೆಂಜರ್ ರೈಲಿನಿಂದ ಸೂಪರ್‌ಫಾಸ್ಟ್‌ವರೆಗೆ ಯಾವ ಬಣ್ಣ ಏನನ್ನು ಸೂಚಿಸುತ್ತೆ? ಯಾವುದು ಹೆಚ್ಚು ಸೇಫ್!


ವಾಸ್ತವವಾಗಿ, ವೃತ್ತಿಪರರು, ಸರ್ಕಾರಿ ಉದ್ಯೋಗದಲ್ಲಿರುವವರು ತಮ್ಮ ನಿವೃತ್ತಿಯ ಜೀವನದಲ್ಲಿ ನಿಯಮಿತ ಆದಾಯವನ್ನು ಹೊಂದಲು ಬಯಸುತ್ತಾರೆ. ಅಂತಹವರಿಗಾಗಿ ಪೋಸ್ಟ್ ಆಫೀಸ್​ನ ಈ ಯೋಜನೆ ತುಂಬಾ ಲಾಭದಾಯಕವಾಗಿದೆ. ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿಯನ್ನು ಒದಗಿಸುವ ಈ ಯೋಜನೆಯ ಹೆಸರು ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ (Post Office Senior Citizen Scheme).


ವಿಶೇಷವಾಗಿ ಹಿರಿಯ ನಾಗರೀಕರಿಗಾಗಿ ಆರಂಭಿಸಲಾಗಿರುವ ಈ ಯೋಜನೆಯಲ್ಲಿ ಏನೆಲ್ಲಾ ಪ್ರಯೋಜನಗಳಿವೆ? 
* ಮೊದಲೇ ತಿಳಿಸಿದಂತೆ ವಯೋವೃದ್ಧರಿಗಾಗಿ ಆರಂಭಿಸಿರುವ ಈ ಯೋಜನೆಯಲ್ಲಿ ಹಿರಿಯ ನಾಗರೀಕರಷ್ಟೇ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. 
* 60 ವರ್ಷ ದಾಟಿದ ಹಿರಿಯ ನಾಗರೀಕರು (Senior Citizen), ಇಲ್ಲವೇ 55 ವರ್ಷ ವಯಸ್ಸು ದಾಟಿ ವಿಆರ್​ಎಸ್ ಪಡೆದವರು ಎಸ್​ಸಿಎಸ್​ಎಸ್ ಸ್ಕೀಮ್​ನಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡಲಾಗುತ್ತದೆ. 
* ಈ ಯೋಜನೆಯಲ್ಲಿ ಕನಿಷ್ಠ 1,000 ರೂನಿಂದ 30 ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶವಿದೆ. 
* ಎಸ್​ಸಿಎಸ್​ಎಸ್ ಸ್ಕೀಮ್ ಪೋಸ್ಟ್ ಆಫೀಸ್ ಸ್ಕೀಮ್​ಗಳಲ್ಲೇ ಅತಿಹೆಚ್ಚು ಬಡ್ಡಿ ಒದಗಿಸುವ ಹೂಡಿಕೆ ಯೋಜನೆ. ಇದರಲ್ಲಿ ಶೇ. 8.2ರಷ್ಟು ಬಡ್ಡಿ ನೀಡಲಾಗುತ್ತದೆ.
* ಈ ಸ್ಕೀಮ್ ಐದು ವರ್ಷಕ್ಕೆ ಮೆಚ್ಯೂರಿಟಿ ಆಗುತ್ತದೆ. ನಿಮಗೆ ಬೇಕೆಂದಲ್ಲಿ ಸ್ಕೀಮ್  ಅನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು. 
* ಹಿರಿಯ ನಾಗರೀಕರು ಇದರಲ್ಲಿ ಒಮ್ಮೆ ಹೂಡಿಕೆ ಮಾಡಿ ತಿಂಗಳಿಗೆ 20,000ಕ್ಕೂ ಅಧಿಕ ಆದಾಯ ಗಳಿಸಬಹುದು. 


ಇದನ್ನೂ ಓದಿ- ಈಗ ನೀವು ಎಟಿಎಂ ಕಾರ್ಡ್ ಇಲ್ಲದೆಯೂ ಹಣವನ್ನು ಹಿಂಪಡೆಯಬಹುದು, ಈ ಸರಳ ವಿಧಾನವನ್ನು ಅನುಸರಿಸಿ..!


ಈ ಯೋಜನೆಯಲ್ಲಿ ತಿಂಗಳಿಗೆ 20,000ಕ್ಕಿಂತ ಅಧಿಕ ಆದಾಯ ಗಳಿಸುವುದು ಹೇಗೆ? 
ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸ್ಕೀಮ್ (Post Office Senior Citizen Scheme) ನಲ್ಲಿ ಒಟ್ಟಿಗೆ 30,00,000 ರೂ. (30 ಲಕ್ಷ ರೂ.) ಹೂಡಿಕೆ ಮಾಡಿದರೆ ವರ್ಷಕ್ಕೆ 2,46,000 ರೂ. ಎಂದರೆ ತಿಂಗಳಿಗೆ 20,500 ರೂ. ಆದಾಯವನ್ನು ಗಳಿಸಬಹುದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.