ಚಾಮರಾಜನಗರ: ಕರ್ನಾಟಕ ಸರ್ಕಾರ ಸ್ವಾಮ್ಯದ ಎಂಎಸ್ಐಎಲ್ ನ ಚಿಟ್ ಫಂಡ್ಸ್ ನೂತನ ಶಾಖೆಯು ಚಾಮರಾಜನಗರದಲ್ಲಿ ಶುಕ್ರವಾರ ಆರಂಭಗೊಂಡಿತು. ಅಂದಹಾಗೆ, ಇದು ಚಿಟ್ ಫಂಡ್ಸ್ ನ 28ನೇ ಶಾಖೆಯಾಗಿದೆ.
ಚಾಮರಾಜನಗರ ಶಾಸಕ ಹಾಗೂ ಎಂಎಸ್ಐಎಲ್ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ (C PuttarangaShetty) ನೂತನ ಶಾಖೆ ಉದ್ಘಾಟಿಸಿ ಮಾತನಾಡಿ, ಚೀಟಿ ವ್ಯವಹಾರದಲ್ಲಿ ಹಣ ಹಾಕಿ ಮೋಸ ಹೋಗುತ್ತಿದ್ದಾರೆ. ಆದರೆ, ಎಂಎಸ್ಐಎಲ್ ನ ಚಿಟ್ ಫಂಡ್ಸ್ (MSIL Chit Funds) ಸರ್ಕಾರಿ ಸಂಸ್ಥೆಯಾಗಿದ್ದು ಇಲ್ಲಿ ಹಣಕ್ಕೆ ಭದ್ರತೆ ಇರಲಿದೆ. ವ್ಯವಹಾರ ಪಾರದರ್ಶಕವಾಗಿರಲಿದೆ ಎಂದರು.
ಚಾಮರಾಜನಗರ ಜನರ ಆರ್ಥಿಕ ಅಭಿವೃದ್ಧಿಗಾಗಿ ಈ ಶಾಖೆ ತೆರೆದಿದ್ದು ಖಾಸಗಿ ಕಂಪನಿ ಹಾಗೂ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತಿದ್ದ ಜನರಿಗಾಗಿ ನಮ್ಮ ಸಂಸ್ಥೆ ಪರಿಹಾರವಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ (MLA C. Puttarangshetty) ತಿಳಿಸಿದರು.
ಇದನ್ನೂ ಓದಿ- Bank Holidays in September 2024: ಗೌರಿ-ಗಣೇಶ ಹಬ್ಬ ಸೇರಿ ಸೆಪ್ಟೆಂಬರ್‌ನಲ್ಲಿ 15 ದಿನ ಬ್ಯಾಂಕ್‌ಗಳಿಗೆ ರಜೆ
ಗ್ರಾಹಕರಿಗೆ ಗುಡ್ ನ್ಯೂಸ್:
ಇನ್ನು, ಎಂಎಸ್ಐಎಲ್ ಎಂಡಿ ಮನೋಜ್ ಕುಮಾರ್ ಗ್ರಾಹಕರಿಗೆ ಗುಡ್ ನ್ಯೂಸ್ (Good News for Customers) ಕೊಟ್ಟಿದ್ದಾರೆ. ಕೇರಳ ಮಾದರಿಯಲ್ಲಿ ಸಂಸ್ಥೆಯನ್ನು ಅಭಿವೃದ್ಧಿಪಡಿಸಲು ಟಾರ್ಗೆಟ್ ಹಾಕಿಕೊಂಡಿದ್ದೇವೆ. ಕಳೆದ ವರ್ಷ 412 ಕೋಟಿ ವ್ಯವಹಾರ ನಡೆದಿದ್ದು ಈ ವರ್ಷ 500 ಕೋಟಿ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಇನ್ನು, ಚಿಟ್ ಫಂಡ್ ನ ಆ್ಯಪ್ (Chit Fund App) ಕೂಡ ಅಭಿವೃದ್ಧಿ ಮಾಡುತ್ತಿದ್ದು ಅಕ್ಟೋಬರ್ ಮೊದಲ ವಾರದಲ್ಲಿ ಟ್ರಯಲ್ ರನ್ ಮಾಡಿದ ಬಳಿಕ ಅಕ್ಟೋಬರ್ ಅಂತ್ಯದಲ್ಲಿ ಗ್ರಾಹಕರು ಆ್ಯಪ್ ಮೂಲಕವೇ ವ್ಯವಹಾರ ನಡೆಸಬಹುದಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ- ಹೆಣ್ಣು ಮಕ್ಕಳ ಪೋಷಕರೇ ತಿಳಿದುಕೊಳ್ಳಿ !ಅಕ್ಟೋಬರ್ 1 ರಿಂದ ಸುಕನ್ಯ ಸಮೃದ್ದಿಗೆ ಹೊಸ ನಿಯಮ !ಶೂನ್ಯವಾಗುವುದು ಬಡ್ಡಿ
ಆ್ಯಪ್ ಮೂಲಕ ಸದಸ್ಯತ್ವ, ಕಂತು ಪಾವತಿ ಸೇರಿದಂತೆ ಎಲ್ಲವನ್ನೂ ನಿರ್ವಗಿಸ ಬಹುದಾಗಿದ್ದು ಗ್ರಾಹಕ ಸ್ನೇಹಿಯತ್ತ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. 5 ವರ್ಷದಲ್ಲಿ 100 ಶಾಖೆಗಳನ್ನು ತೆರೆದು ವಾರ್ಷಿಕ 5000 ಕೋಟಿ ವಹಿವಾಟು ನಡೆಸುವ ಗುರಿ ಹೊಂದಲಾಗಿದೆ ಎಂದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.