ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ : ಕೇಂದ್ರ ಸರ್ಕಾರದಿಂದ ಜಾರಿಯಾಗಲಿದೆ ಆಯುಷ್ಮಾನ್ ಭವ ಕಾರ್ಯಕ್ರಮ
Ayushman Bhava Program : ಮೋದಿಯವರ ಜನ್ಮದಿನದ ಸಂದರ್ಭದಲ್ಲಿ, ನಾವು `ಆಯುಷ್ಮಾನ್ ಭವ` ಕಾರ್ಯಕ್ರಮ ಆರಂಭವಾಗಲಿದೆ. 60,000 ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ನೀಡಲಾಗುವುದು.
Ayushman Bhava Program : ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಈ ದಿನದಂದು ಕೇಂದ್ರ ಸರ್ಕಾರ ‘ಆಯುಷ್ಮಾನ್ ಭವ’ ಕಾರ್ಯಕ್ರಮ ಆರಂಭಿಸಲಿದೆ. 'ಈ ವರ್ಷ ಪ್ರಧಾನಿ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ, ನಾವು 'ಆಯುಷ್ಮಾನ್ ಭವ' ಕಾರ್ಯಕ್ರಮವನ್ನು ಪ್ರಾರಂಭಿಸುತ್ತೇವೆ, ಇದರಿಂದಾಗಿ ಪ್ರತಿಯೊಬ್ಬ ಉದ್ದೇಶಿತ ಫಲಾನುಭವಿಗೂ ಯೋಜನೆಯ ಲಾಭ ತಲುಪಿಸುವುದು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶಿಬಿರಗಳನ್ನು ಆಯೋಜಿಸಲಾಗುವುದು ಮತ್ತು 60,000 ಜನರಿಗೆ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ನೀಡಲಾಗುವುದು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಗಳು ಮತ್ತು ಕಾರ್ಯಕ್ರಮಗಳ ಲಾಭ ಸಿಗುವಂತಾಗಲು ಈ ಕಾರ್ಯಕ್ರಮವನ್ನು ಹೆಚ್ಚಾಗಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪಾವತಿಸುವುದು ಕೇವಲ 2000 ರೂಪಾಯಿ, ಕೈ ಸೇರುವುದು 43 ಲಕ್ಷ ! ಭಾರೀ ಲಾಭ ನೀಡುತ್ತದೆ LICಯ ಈ ಪ್ಲಾನ್
ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ವಿಶ್ವದ ಅತಿದೊಡ್ಡ ಆರೋಗ್ಯ
ರಕ್ಷಣಾ ಯೋಜನೆಯಾಗಿದ್ದು, ಪ್ರತಿ ಫಲಾನುಭವಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಕ್ಷಯರೋಗ (ಟಿಬಿ) ರೋಗಕ್ಕೆ ಒತ್ತು ನೀಡಲಾಗಿತ್ತು ಎಂದು ಮಾಂಡವಿಯಾ ಹೇಳಿದರು. ಕ್ಷಯರೋಗವನ್ನು (ಟಿಬಿ) ತೊಡೆದುಹಾಕಲು ವಿಶ್ವದ ಗುರಿ 2030 ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ 2025 ರ ಅಂತ್ಯದ ವೇಳೆಗೆ ಟಿಬಿಯನ್ನು ತೊಡೆದುಹಾಕುವುದು ಭಾರತದ ಗುರಿಯಾಗಿದೆ ಎಂದು ಅವರು ಹೇಳಿದ್ದರು.
ಇದನ್ನೂ ಓದಿ : ಗಣೇಶ ಹಬ್ಬಕ್ಕೂ ಮುನ್ನ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ…! 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?
ಬಿಜೆಪಿ ದೇಶಾದ್ಯಂತ ಅಭಿಯಾನವನ್ನು ಆರಂಭಿಸಿತ್ತು :
2022 ರಲ್ಲಿ, ಭಾರತೀಯ ಜನತಾ ಪಕ್ಷವು (ಬಿಜೆಪಿ) ದೇಶವನ್ನು ಕ್ಷಯರೋಗ (ಟಿಬಿ) ಮುಕ್ತಗೊಳಿಸಲು ಒಂದು ವರ್ಷದ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದರ ಅಡಿಯಲ್ಲಿ ಪ್ರತಿಯೊಬ್ಬರೂ ಟಿಬಿ ರೋಗಿಯನ್ನು ದತ್ತು ತೆಗೆದುಕೊಂಡು ಆರೈಕೆ ಮಾಡಲಾಗಿತ್ತು.
2025 ರ ವೇಳೆಗೆ ಟಿಬಿ ಮುಕ್ತ ಭಾರತ ಎಂಬ ಪ್ರಧಾನಿ ಮೋದಿಯವರ ದೃಷ್ಟಿಯನ್ನು ಈಡೇರಿಸಲು ಒಂದು ವರ್ಷದವರೆಗೆ ಕ್ಷಯ ರೋಗಿಯನ್ನು ದತ್ತು ತೆಗೆದುಕೊಳ್ಳುವ ಯೋಜನೆಯನ್ನು ಆಯೋಜಿಸಲಾಗಿದೆ.
ಇದನ್ನೂ ಓದಿ : 10, 20, 50, 100, 200 ಮತ್ತು 500 ರೂಪಾಯಿ ನೋಟುಗಳ ಬಗ್ಗೆ RBI ಹೊಸ ನಿಯಮ !
ಪ್ರಧಾನಿ ಮೋದಿಯವರು 17 ಸೆಪ್ಟೆಂಬರ್ 1950 ರಂದು ಗುಜರಾತ್‌ನ ವಡ್ನಗರದಲ್ಲಿ ಜನಿಸಿದರು. ಇದು ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಸಣ್ಣ ಪಟ್ಟಣವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ