ಗಣೇಶ ಹಬ್ಬಕ್ಕೂ ಮುನ್ನ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ…! 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?

Gold Rate Today 11-09-2023: ಸರ್ಕಾರವು 2023-24 (ಸರಣಿ II) ಸಾವರಿನ್ ಗೋಲ್ಡ್ ಬಾಂಡ್‌’ಗಳ ಬೆಲೆಯನ್ನು ರೂ 5923 ಕ್ಕೆ ನಿಗದಿಪಡಿಸಿದೆ. SGB ಯ ಆನ್‌’ಲೈನ್ ಚಂದಾದಾರಿಕೆಗೆ ರೂ 50 ರ ಹೆಚ್ಚುವರಿ ರಿಯಾಯಿತಿಯನ್ನು ಒದಗಿಸಿದ್ದು, ಈ ಮೂಲಕ ರೂ. 5873 ಕ್ಕೆ ಬಂಗಾರ ನಿಮ್ಮ ಪಾಲಾಗಲಿದೆ.

Written by - Bhavishya Shetty | Last Updated : Sep 11, 2023, 09:05 AM IST
    • ಇಂದಿನಿಂದ ಸೋವೆರಿನ್ ಗೋಲ್ಡ್ ಬಾಂಡ್‌’ಗಳ ಮೂಲಕ ಚಿನ್ನದ ಮೇಲೆ ಹೂಡಿಕೆ ಮಾಡಲು ಅವಕಾಶ
    • ಸಾವರಿನ್ ಗೋಲ್ಡ್ ಬಾಂಡ್‌’ಗಳ ಬೆಲೆಯನ್ನು ರೂ 5923 ಕ್ಕೆ ನಿಗದಿಪಡಿಸಿದೆ
    • ಈ ಯೋಜನೆ ಮೂಲಕ ಗ್ರಾಹಕರ ಕೈ ಸೇರುವಾಗ ಬಂಗಾರದ ಬೆಲೆಯಲ್ಲಿ 1000 ರೂ. ಇಳಿಕೆ
ಗಣೇಶ ಹಬ್ಬಕ್ಕೂ ಮುನ್ನ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ…! 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ? title=
gold price

Gold Rate Today 11-09-2023: ಇಂದು ದೇಶದಾದ್ಯಂತ 24 ಕ್ಯಾರೆಟ್ ಚಿನ್ನದ ದೇಶೀಯ ಬೆಲೆ ಸುಮಾರು 6000 ರೂ. ಸಮೀಪಕ್ಕೆ ಬಂದಿದೆ. ಇನ್ನು ಪ್ರಸಕ್ತ ಹಬ್ಬದ ಋತುವಿನಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವವರು ಇಂದಿನಿಂದ ಸೋವೆರಿನ್ ಗೋಲ್ಡ್ ಬಾಂಡ್‌’ಗಳ ಮೂಲಕ (SGBs) ಮಾಡಲು ಅವಕಾಶವಿದೆ.

ಇದನ್ನೂ ಓದಿ: ರೈತ ಬಾಂಧವರೆ ಸೆಪ್ಟೆಂಬರ್ 30 ನೆನಪಿನಲ್ಲಿಟ್ಟುಕೊಳ್ಳಿ, ಈ ಕೆಲಸ ಮಾಡದೆ ಹೋದಲ್ಲಿ ಖಾತೆಗೆ ಬರಲ್ಲ 2000 ರೂ.!

ಸರ್ಕಾರವು 2023-24 (ಸರಣಿ II) ಸಾವರಿನ್ ಗೋಲ್ಡ್ ಬಾಂಡ್‌’ಗಳ ಬೆಲೆಯನ್ನು ರೂ 5923 ಕ್ಕೆ ನಿಗದಿಪಡಿಸಿದೆ. SGB ಯ ಆನ್‌’ಲೈನ್ ಚಂದಾದಾರಿಕೆಗೆ ರೂ 50 ರ ಹೆಚ್ಚುವರಿ ರಿಯಾಯಿತಿಯನ್ನು ಒದಗಿಸಿದ್ದು, ಈ ಮೂಲಕ ರೂ. 5873 ಕ್ಕೆ ಬಂಗಾರ ನಿಮ್ಮ ಪಾಲಾಗಲಿದೆ. ಇದು ನಗರಗಳಲ್ಲಿರುವ ಇಂದಿನ ಚಿನ್ನದ ದೇಶೀಯ ಚಿಲ್ಲರೆ ಬೆಲೆಗಿಂತ ಸುಮಾರು 100 ರೂ (ಪ್ರತೀ ಗ್ರಾಂ) ಕಡಿಮೆಯಾದಂತಾಗಿದೆ. (ಸಾಮಾನ್ಯ ದಿನಗಳಲ್ಲಿ ಚಿನ್ನದ ದರ 6000 ರೂ. ಇದ್ದರೆ, ಈ ಯೋಜನೆ ಮೂಲಕ ಗ್ರಾಹಕರ ಕೈ ಸೇರುವಾಗ ಸುಮಾರು 1000 ರೂ. ಇಳಿಕೆಯಾದಂತಾಗುತ್ತದೆ)

SGB ಅಗತ್ಯತೆ ಏನು?

SGB ಅನ್ನು ಚಿನ್ನದ ಮೇಲೆ ಹೂಡಿಕೆ ಮಾಡುವ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. SGB ಗಳು 2.5% ವಾರ್ಷಿಕ ಆದಾಯವನ್ನು ನೀಡುವುದು ಮಾತ್ರವಲ್ಲದೆ ಖರೀದಿದಾರರಿಗೆ ಅಂದಿನ ಮಾರುಕಟ್ಟೆ ಬೆಲೆಗೆ ಮುಕ್ತಾಯದ ಮೇಲೆ ಬಾಂಡ್‌ಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತದೆ.

SGB ಯ ಅವಧಿಯು 8 ವರ್ಷಗಳು. ಆದರೆ ಐದು ವರ್ಷಗಳು ಪೂರ್ಣಗೊಂಡ ನಂತರ ಕೂಡ ನಿರ್ಗಮಿಸುವ ಆಯ್ಕೆ ಇರುತ್ತದೆ. ಈ ಯೋಜನೆಯಡಿಯಲ್ಲಿ, ಒಂದು ಗ್ರಾಂ ಚಿನ್ನದಲ್ಲಿ ಕನಿಷ್ಠ ಹೂಡಿಕೆಯನ್ನು ಸಹ ಮಾಡಬಹುದು ಮತ್ತು ಗರಿಷ್ಠ ಮಿತಿ ನಾಲ್ಕು ಕಿಲೋಗ್ರಾಂಗಳವರೆಗೆ ಇರುತ್ತದೆ.

ಖರೀದಿಸುವುದು ಎಲ್ಲಿ?

SGB ಅನ್ನು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌’ಗಳು (ಸಣ್ಣ ಹಣಕಾಸು ಬ್ಯಾಂಕ್‌ಗಳು, ಪಾವತಿ ಬ್ಯಾಂಕ್‌ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (SHCIL), ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL), ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳ ಮೂಲಕ ಖರೀದಿಸಬಹುದು.

ಇದನ್ನೂ ಓದಿ: ಅಬ್ಬಬ್ಬಾ.. ಹಿಂದೆಂದೂ ಸಂಭವಿಸಿರದಷ್ಟು ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ: 10 ಗ್ರಾಂ ಬಂಗಾರದ ದರ ಎಷ್ಟಿದೆ ಗೊತ್ತಾ?

ಸಾವರಿನ್ ಗೋಲ್ಡ್ ಬಾಂಡ್ನ ಮಾರಾಟ ಸೆಪ್ಟೆಂಬರ್ 11 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News