LPG Subsidy : ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ದರ ಇಳಿಸಿದೆ. ಬೆನ್ನಲ್ಲೇ ಪಡಿತರ ಚೀಟಿದಾರರಿಗೆ ಸರ್ಕಾರ ಮತ್ತೊಂದು ಉಡುಗೊರೆ ನೀಡಿದೆ. ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡಿದ ರಾಜ್ಯ ಸರ್ಕಾರ ಭರ್ಜರಿ ಘೋಷಣೆ ಮಾಡಿದೆ. ರಾಜ್ಯ ಸರ್ಕಾರದ ಈ ಘೋಷಣೆಯ ನಂತರ ಅಂತ್ಯೋದಯ ಅನ್ನ ಯೋಜನೆಯ ಕಾರ್ಡ್ ಹೊಂದಿರುವವರಿಗೆ 428 ರೂ.ಗೆ ಸಿಲಿಂಡರ್ ಸಿಗಲಿದೆ. 


COMMERCIAL BREAK
SCROLL TO CONTINUE READING

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಕೇಂದ್ರ ಸಚಿವ ಶಿರ್ಪಾದ್ ವೈ ನಾಯಕ್ ಅವರು ಪಣಜಿಯಲ್ಲಿ ಎಲ್‌ಪಿಜಿ ಸಿಲಿಂಡರ್  ರಿಫಿಲ್ಲಿಂಗ್ ಗಾಗಿ ಮುಖ್ಯಮಂತ್ರಿ ಹಣಕಾಸು ನೆರವು ಯೋಜನೆ'ಯನ್ನು ಪ್ರಾರಂಭಿಸಿದ್ದಾರೆ. 


ಇದನ್ನೂ ಓದಿ : AIR INDIA-VISTARA MERGER DEAL: ಏರ್ ಇಂಡಿಯಾ- ವಿಸ್ತಾರಾ ವಿಲೀನಕ್ಕೆ ಅನುಮೋದನೆ


ರಾಜ್ಯದಲ್ಲಿ 275 ರೂ.ಗಳ ಸಹಾಯಧನ : 
ಈ ಯೋಜನೆಯಡಿಯಲ್ಲಿ, ರಾಜ್ಯದ ಅಂತ್ಯೋದಯ ಅನ್ನ ಯೋಜನೆ ಕಾರ್ಡ್ ಹೊಂದಿರುವವರಿಗೆ ಗೋವಾ ರಾಜ್ಯ ಸರ್ಕಾರದಿಂದ ಸಿಲಿಂಡರ್ ಮೇಲೆ 275 ರೂ. ಸಬ್ಸಿಡಿ ನೀಡಲಾಗುವುದು. ಎಲ್‌ಪಿಜಿ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡುವುದಾಗಿ ಈ ಹಿಂದೆ ಪ್ರಧಾನಿ ಮೋದಿ ಘೋಷಿಸಿದ್ದರು. ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂ.ಗಳ ಕೇಂದ್ರ ಸಹಾಯಧನವನ್ನು ನೀಡಲಾಗುತ್ತಿದೆ. ಇದಲ್ಲದೆ, ಎಎವೈ ಪಡಿತರ ಚೀಟಿದಾರರಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 275 ರೂ ನೀಡುವುದಾಗಿ ಗೋವಾ ಸರ್ಕಾರ ಘೋಷಿಸಿದೆ.


200 ಉಜ್ವಲ ಯೋಜನೆಯ ಸಹಾಯಧನ:
ರಾಜ್ಯದಲ್ಲಿ 11 ಸಾವಿರಕ್ಕೂ ಹೆಚ್ಚು ಜನರು ಎಎವೈ (ಅಂತ್ಯೋದಯ) ಕಾರ್ಡ್ ಹೊಂದಿದ್ದಾರೆ. ಅಂತಹ ಕಾರ್ಡ್ ಹೊಂದಿರುವವರು ಉಜ್ವಲ ಯೋಜನೆಯಡಿ 200 ರೂ ಮತ್ತು ಗೋವಾ ಸರ್ಕಾರ ನೀಡುವ  275 ರೂ.  ಸಹಾಯಧನ ಪಡೆಯುವುದು ಸಾಧ್ಯವಾಗುತ್ತದೆ. ಅಂದರೆ ಪಡಿತರ ಚೀಟಿದಾರರಿಗೆ ಒಟ್ಟಾರೆಯಾಗಿ 475 ರೂ.ಗಳ ಸಹಾಯಧನ ಸಿಕ್ಕಿದಂತಾಗುತ್ತದೆ. 


ಇದನ್ನೂ ಓದಿ : ಜನವರಿಯಿಂದ 50% ಡಿಎ ಹೆಚ್ಚಳ! ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರೀ ಹೆಚ್ಚಳ


428 ರೂ.ಗೆ ಸಿಲಿಂಡರ್ ಹೇಗೆ ಸಿಗುವುದು ? : 
ರಕ್ಷಾಬಂಧನದ ಸಂದರ್ಭದಲ್ಲಿ ಸಿಲಿಂಡರ್ ಬೆಲೆಯನ್ನು 200 ರೂ. ಕಡಿತಗೊಳಿಸಿ ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಈ ಇಳಿಕೆಯ ನಂತರ  ಪಣಜಿಯಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 903 ರೂ. ಆಗಿತ್ತು. ಈ ರೀತಿ 903 ರೂ.ನಲ್ಲಿ ಉಜ್ವಲ ಯೋಜನೆಯಿಂದ ಸಿಗುವ 200 ರೂ. ಮತ್ತು ರಾಜ್ಯ ಸರ್ಕಾರದಿಂದ  ಘೋಷಣೆಯಾದ 275 ರೂ.ಗಳ ಸಬ್ಸಿಡಿ ನಂತರ ಸಿಲಿಂಡರ್ ಬೆಲೆ 428 ರೂ.ಗೆ ಇಳಿಯುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.