AIR INDIA-VISTARA MERGER DEAL: ಏರ್ ಇಂಡಿಯಾ- ವಿಸ್ತಾರಾ ವಿಲೀನಕ್ಕೆ ಅನುಮೋದನೆ

Air India-Vistara merger deal: ಈ ಅನುಮೋದನೆಯೊಂದಿಗೆ ಇಂಡಿಗೋ ನಂತರ ಏರ್ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಾಹಕ ಮತ್ತು 2ನೇ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Written by - Puttaraj K Alur | Last Updated : Sep 2, 2023, 10:10 AM IST
  • ಏರ್ ಇಂಡಿಯಾ ಮತ್ತು ವಿಸ್ತಾರಾ ಟಾಟಾ SIA ಏರ್‌ಲೈನ್ಸ್ ವಿಲೀನಕ್ಕೆ ಅನುಮೋದನೆ
  • ಕೆಲವು ಷರತ್ತುಗಳಿಗೆ ಒಳಪಟ್ಟು ವಿಲೀನ ಪ್ರಕ್ರಿಯೆಗೆ ಭಾರತೀಯ ಸ್ಪರ್ಧಾತ್ಮಕ ಆಯೋಗದಿಂದ ಅನುಮತಿ
  • ಈ ವಿಲೀನದೊಂದಿಗೆ ಸಿಂಗಾಪುರ್ ಏರ್‌ಲೈನ್ಸ್ ಏರ್ ಇಂಡಿಯಾಕ್ಕೆ 2,059 ಕೋಟಿ ರೂ. ನೀಡಲಿದೆ
AIR INDIA-VISTARA MERGER DEAL: ಏರ್ ಇಂಡಿಯಾ- ವಿಸ್ತಾರಾ ವಿಲೀನಕ್ಕೆ ಅನುಮೋದನೆ title=
Air India-Vistara merger deal

ನವದೆಹಲಿ: ಏರ್ ಇಂಡಿಯಾ ಮತ್ತು ವಿಸ್ತಾರಾ ಟಾಟಾ SIA ಏರ್‌ಲೈನ್ಸ್ ವಿಲೀನಕ್ಕೆ ಭಾರತೀಯ ಸ್ಪರ್ಧಾತ್ಮಕ ಆಯೋಗವು(CCI) ಅನುಮೋದನೆ ನೀಡಿದೆ. ಈ ಅನುಮೋದನೆಯೊಂದಿಗೆ ಇಂಡಿಗೋ ನಂತರ ಏರ್ ಇಂಡಿಯಾ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ವಾಹಕ ಮತ್ತು 2ನೇ ಅತಿದೊಡ್ಡ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೆಲವು ಷರತ್ತುಗಳಿಗೆ ಒಳಪಟ್ಟು ಈ ವಿಲೀನ ಪ್ರಕ್ರಿಯೆ ನಡೆದಿದೆ. ಟಾಟಾ SIA ಏರ್‌ಲೈನ್ಸ್ ಅನ್ನು ಏರ್ ಇಂಡಿಯಾದಲ್ಲಿ ವಿಲೀನಗೊಳಿಸುವುದನ್ನು ಸಿಸಿಐ ಅನುಮೋದಿಸುತ್ತದೆ ಮತ್ತು ಪಾರ್ಟಿಗಳು ನೀಡುವ ಸ್ವಯಂಪ್ರೇರಿತ ಬದ್ಧತೆಗಳ ಅನುಸರಣೆಗೆ ಒಳಪಟ್ಟು ಏರ್ ಇಂಡಿಯಾದಲ್ಲಿ ಸಿಂಗಾಪುರ್ ಏರ್‌ಲೈನ್ಸ್ (SIA) ಕೆಲವು ಷೇರುಗಳನ್ನು ಸ್ವಾಧೀನಪಡಿಸಿಕೊಂಡಿದೆ’ ಎಂದು ಟ್ವೀಟ್ ಮೂಲಕ ಸಂಸ್ಥೆಯು ತಿಳಿಸಿದೆ.

ಇದನ್ನೂ ಓದಿ: ಇಂದಿನಿಂದ ಮೋದಿ ಸರ್ಕಾರ ಆರಂಭಿಸಿದೆ ಈ ಅದ್ಬುತ ಯೋಜನೆ, ತಿಂಗಳಿಗೆ 10,000 ಗಳಿಕೆ ಮಾಡುವ ಸುವರ್ಣಾವಕಾಶ!

ವಿಮಾನಯಾನ ಕ್ಷೇತ್ರದಲ್ಲಿನ ಸ್ಪರ್ಧೆಯ ಬಗ್ಗೆ ಕಳವಳಗಳ ಕುರಿತು ವಿಸ್ತಾರಾ ಜೊತೆಗಿನ ಅದರ ಉದ್ದೇಶಿತ ವಿಲೀನವನ್ನು ಏಕೆ ತನಿಖೆ ಮಾಡಬಾರದು ಎಂಬುದರ ಕುರಿತು ಸ್ಪಷ್ಟೀಕರಣವನ್ನು ಕೋರಿ ಜೂನ್‌ನಲ್ಲಿ CCI ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಿತ್ತು. ಇದಾದ ತಿಂಗಳ ನಂತರ ಅನುಮೋದನೆ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಬೆಳವಣಿಗೆಯು ತನ್ನ ವಾಯುಯಾನ ವ್ಯವಹಾರವನ್ನು ಕ್ರೋಢೀಕರಿಸುವಲ್ಲಿ ಟಾಟಾ ಸಮೂಹಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ.  

ವಿಸ್ತಾರಾ ಏರ್ ಇಂಡಿಯಾದೊಂದಿಗೆ ವಿಲೀನಗೊಳ್ಳುವ ಸಂದರ್ಭದಲ್ಲಿ, ಸಿಂಗಾಪುರ್ ಏರ್‌ಲೈನ್ಸ್ ಏರ್ ಇಂಡಿಯಾಕ್ಕೆ 2,059 ಕೋಟಿ ರೂ. ನೀಡಲಿದ್ದು, ಆ ಮೂಲಕ ಶೇ.25.1ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಟಾಟಾ ಸನ್ಸ್ ಉಳಿದ ಶೇ.74.9ರಷ್ಟು ಪಾಲನ್ನು ಹೊಂದಿರುತ್ತದೆ ಎಂದು ಹೇಳಲಾಗಿದೆ. ವಿಸ್ತಾರಾ ಮತ್ತು ಏರ್ ಇಂಡಿಯಾ 2 ಪೂರ್ಣ-ಸೇವಾ ವಿಮಾನಯಾನ ಸಂಸ್ಥೆಗಳು ಟಾಟಾ ಸಮೂಹದ ಭಾಗವಾಗಿದೆ. ಸಿಂಗಾಪುರ್ ಏರ್‌ಲೈನ್ಸ್ (SIA) ವಿಸ್ತಾರಾದಲ್ಲಿ ಶೇ.49ರಷ್ಟು ಪಾಲನ್ನು ಹೊಂದಿದೆ.

ಇದನ್ನೂ ಓದಿ: ಜನವರಿಯಿಂದ 50% ಡಿಎ ಹೆಚ್ಚಳ! ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರೀ ಹೆಚ್ಚಳ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News