ಆಧಾರ್ ಕಾರ್ಡ್ ಅಪ್ಡೇಟ್ : ಸೆ .14 ರೊಳಗೆ ಈ ಕೆಲಸ ಮಾಡಿದರೆ ಸಂಪೂರ್ಣ ಉಚಿತ, ಇಲ್ಲವಾದರೆ ನೀಡಬೇಕಾಗುತ್ತದೆ ಹಣ

Aadhaar Card Update:ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸವನ್ನು ಸೆಪ್ಟೆಂಬರ್ ತಿಂಗಳಿನಲ್ಲಿಯೇ ಮಾಡಿ ಮುಗಿಸಿದರೆ ಹಣ ಪಾವತಿಸಬೇಕಾಗಿಲ್ಲ. ಇಲ್ಲವಾದರೆ ಪ್ರತಿ ಕೆಲಸಕ್ಕೂ ಹಣ  ಪಾವತಿಸಬೇಕಾಗುತ್ತದೆ. 

Written by - Ranjitha R K | Last Updated : Sep 1, 2023, 02:41 PM IST
  • ಇಂದಿನ ಯುಗದಲ್ಲಿ ಆಧಾರ್ ಕಾರ್ಡ್ ಬಳಕೆ ಸಾಕಷ್ಟು ಹೆಚ್ಚಾಗಿದೆ.
  • ಸರ್ಕಾರದ ಹಲವು ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ
  • ಆಧಾರ್ ಕಾರ್ಡ್ ಅನ್ನು ಇಂದು ಭಾರತದಲ್ಲಿ ಪ್ರಮುಖ ಗುರುತಿನ ದಾಖಲೆ
ಆಧಾರ್ ಕಾರ್ಡ್ ಅಪ್ಡೇಟ್ : ಸೆ .14 ರೊಳಗೆ ಈ ಕೆಲಸ ಮಾಡಿದರೆ ಸಂಪೂರ್ಣ ಉಚಿತ, ಇಲ್ಲವಾದರೆ ನೀಡಬೇಕಾಗುತ್ತದೆ ಹಣ  title=

Aadhaar Card Update : ಇಂದಿನ ಯುಗದಲ್ಲಿ ಆಧಾರ್ ಕಾರ್ಡ್ ಬಳಕೆ ಸಾಕಷ್ಟು ಹೆಚ್ಚಾಗಿದೆ. ಸರ್ಕಾರದ ಹಲವು ಯೋಜನೆಗಳಿಗೆ ಆಧಾರ್ ಕಾರ್ಡ್ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆಧಾರ್ ಕಾರ್ಡ್ ಅನ್ನು ಇಂದು ಭಾರತದಲ್ಲಿ ಪ್ರಮುಖ ಗುರುತಿನ ದಾಖಲೆಯಾಗಿ ಬಳಸಲಾಗುತ್ತದೆ. ಇದೇ ವೇಳೆ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಮಹತ್ವದ ವಿಚಾರವನ್ನು ಜನರು ತಿಳಿದುಕೊಳ್ಳುವುದು ಬಹಳ ಮುಖ್ಯ. ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸವನ್ನು ಸೆಪ್ಟೆಂಬರ್ ತಿಂಗಳಿನಲ್ಲಿಯೇ ಮಾಡಿ ಮುಗಿಸಿದರೆ ಹಣ ಪಾವತಿಸಬೇಕಾಗಿಲ್ಲ. ಇಲ್ಲವಾದರೆ ಪ್ರತಿ ಕೆಲಸಕ್ಕೂ ಹಣ  ಪಾವತಿಸಬೇಕಾಗುತ್ತದೆ. 

ಆಧಾರ್ ಕಾರ್ಡ್ ಫ್ರೀ ಅಪ್ಡೇಟ್ : 
UIDAI ಪರವಾಗಿ, ಆಧಾರ್ ಕಾರ್ಡ್‌ನಲ್ಲಿರುವ ದಾಖಲೆಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಜನರಿಗೆ ಅವಕಾಶವನ್ನು ನೀಡಲಾಗುತ್ತಿದೆ. ಇದರೊಂದಿಗೆ,  ಸೆಪ್ಟೆಂಬರ್ 14, 2023 ರೊಳಗೆ ಉಚಿತವಾಗಿ ಆಧಾರ್ ಅನ್ನು ಅಪ್ಡೇಟ್ ಮಾಡಬಹುದು ಎಂದು UIDAI ಹೇಳುತ್ತದೆ. ಈ ಮೊದಲು ಉಚಿತ ಸೇವೆಯು ಜೂನ್ 14, 2023 ರವರೆಗೆ ಮಾತ್ರ ಲಭ್ಯವಿತ್ತು. ಆದರೆ ಈಗ ಅದನ್ನು ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ. 

ಇದನ್ನೂ ಓದಿ : Good News: ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ!

myAadhaar : 
ಉಚಿತ ಸೇವೆಯು myAadhaar ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ. ಆಧಾರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಭೌತಿಕವಾಗಿ ಅಪ್ಡೇಟ್ ಮಾಡಿದರೆ, ಅಗತ್ಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ.  ಆನ್‌ಲೈನ್ ಮಾಧ್ಯಮದ ಮೂಲಕ ಸೆಪ್ಟೆಂಬರ್ 14 ರವರೆಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಬಹುದು.

ಆಧಾರ್ ಕಾರ್ಡ್ ನವೀಕರಣ : 
- ನಿವಾಸಿಗಳು ತಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು https://myaadhaar.uidai.gov.in/ ಗೆ ಲಾಗ್ ಇನ್ ಮಾಡಬಹುದು .
- 'ವಿಳಾಸವನ್ನು ನವೀಕರಿಸಲು  continue ಆಯ್ಕೆಯನ್ನು ಆರಿಸಿ.
ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
'ಅಪ್‌ಡೇಟ್ ಡಾಕ್ಯುಮೆಂಟ್' ಮೇಲೆ ಕ್ಲಿಕ್ ಮಾಡಿ. ಇಲ್ಲಿ ಪ್ರಸ್ತುತ ವಿವರಗಳು ಕಾಣಿಸಿಕೊಳ್ಳುತ್ತವೆ.
- ಆಧಾರ್ ಹೊಂದಿರುವವರು ವಿವರಗಳನ್ನು ಪರಿಶೀಲಿಸಬೇಕು, ಸರಿಯಾಗಿ ಕಂಡುಬಂದರೆ, ಮುಂದಿನ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಿ.
- ಮುಂದಿನ ಹಂತದಲ್ಲಿ, ಡ್ರಾಪ್‌ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳ ಪುರಾವೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
- ವಿಳಾಸ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
- ಅಂತಿಮವಾಗಿ ಆಧಾರ್  ಅಪ್ಡೇಟ್ ರಿಕ್ವೆಸ್ಟ್  ಬರುತ್ತದೆ. 14 ಅಂಕೆಗಳ ಅಪ್ಡೇಟ್ ರಿಕ್ವೆಸ್ಟ್ ನಂಬರ್  (URN) ಜನರೇಟ್ ಆಗುತ್ತದೆ.   

ಇದನ್ನೂ ಓದಿ :  ಕೇಂದ್ರ ಸರ್ಕಾರ ನೀಡುವ ಈ ಕಾರ್ಡ್ ನಿಂದ ಜನ ಸಾಮಾನ್ಯರಿಗೆ ಸಿಗುವುದು 5ಲಕ್ಷ ರೂ.ಗಳ ಪ್ರಯೋಜನ !

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News