ನವದೆಹಲಿ: ಕಳೆದ ದಿನ ದೇಶದೆಲ್ಲೆಡೆ ಸಂಭ್ರಮದಿಂದ ಹಿಂದೂ ಬಾಂಧವರು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಿದ್ದಾರೆ. ಅಕ್ಷಯ ತೃತೀಯದ ಸಂದರ್ಭದಲ್ಲಿ ಚಿನ್ನ ಖರೀದಿಗೆ ಮುಂದಾಗಿದ್ದ ಜನರಿಗೆ ಶುಭ ಸುದ್ದಿಯಂತೆ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಅಂತೆಯೇ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡಿತ್ತು. ಇಂದು ಬಂಗಾರದ ಬೆಲೆ ಸ್ಥಿರವಾಗಿ ಉಳಿದಿದ್ದು, ಬೆಳ್ಳಿ ಬೆಲೆಯಲ್ಲಿ ಮಾತ್ರ ಇಳಿಕೆ ಕಂಡಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: ಅದೃಷ್ಟವಂತರ ಅಂಗೈಯಲ್ಲಿ ಈ ಶನಿ ರೇಖೆ : ಶನಿ ದೇವನ ಕೃಪೆಯಿಂದ ಹಣದ ಹೊಳೆ!


ಕಳೆದ ದಿನದಂತೆ ಇಂದು ಸಹ 10 ಗ್ರಾಂ 24-ಕ್ಯಾರೆಟ್ ಚಿನ್ನದ ಬೆಲೆ 52,790 ರೂ. ಆಗಿದೆ. ಆದರೆ ಕೆಜಿ ಬೆಳ್ಳಿ ಬೆಲೆಯಲ್ಲಿ 400 ರೂ ಇಳಿಕೆ ಕಂಡು ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇಂದು ಬೆಳ್ಳಿಯು 62,300 ರೂ.ಗೆ ಮಾರಾಟವಾಗುತ್ತಿದೆ. 


ಮೇಕಿಂಗ್ ಚಾರ್ಜ್‌ಗಳು, ರಾಜ್ಯ ತೆರಿಗೆಗಳು ಮತ್ತು ಅಬಕಾರಿ ಸುಂಕದಂತಹ ಅಂಶಗಳಿಂದಾಗಿ ಹಳದಿ ಲೋಹದ ದರವು ಪ್ರತಿದಿನ ಭಿನ್ನವಾಗಿರುತ್ತದೆ. ಇಂದು ದೇಶಾದ್ಯಂತ ಕೆಲವು ನಗರಗಳ ಚಿನ್ನದ ದರಗಳು ಇಲ್ಲಿವೆ:


ಗುಡ್ ರಿಟರ್ನ್ಸ್ ವೆಬ್‌ಸೈಟ್ ಪ್ರಕಾರ, ಬೆಂಗಳೂರು, ಹೈದರಾಬಾದ್‌ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವನ್ನು 47,200ರೂ.ಗೆ ಮಾರಾಟ ಮಾಡಲಾಗುತ್ತಿದೆ. ಚೆನ್ನೈನಲ್ಲಿ 48,160 ರೂ.ಗೆ ಹಳದಿ ಲೋಹ ಮಾರಾಟವಾಗುತ್ತಿದೆ. ಇನ್ನು 24 ಗ್ರಾಂ ಚಿನ್ನದ ಬೆಲೆ ಬೆಂಗಳೂರು, ಹೈದರಾಬಾದ್‌ ಕೇರಳ, ಮುಂಬೈ, ನವದೆಹಲಿ ಮತ್ತು ಕೋಲ್ಕತ್ತಾದಲ್ಲಿ 51,510 ರೂ. ಇದ್ದು, ಚೆನ್ನೈನಲ್ಲಿ 52,540 ರೂ. ಇದೆ. 


ಮಧುರೈನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,160 ರೂ. ಇದ್ದು, 24 ಕ್ಯಾರೆಟ್‌ ಚಿನ್ನದ ಬೆಲೆ 52,54 ರೂ. ಇದೆ. ಇನ್ನು ಪಾಟ್ನಾದಲ್ಲಿ 24-ಕ್ಯಾರೆಟ್ ಶುದ್ಧತೆಯ ಚಿನ್ನಕ್ಕೆ 51,590 ರೂ. ಇದ್ದರೆ, 22 ಕ್ಯಾರೆಟ್‌ ಚಿನ್ನದ ಬೆಲೆ 47,280 ರೂ. ಇದೆ. ಮೈಸೂರು, ಮಂಗಳೂರು, ವಿಜಯವಾಡದಲ್ಲಿ ಇದೇ ಪ್ರಮಾಣದ 22 ಕ್ಯಾರೆಟ್ ಶುದ್ಧತೆ 47,200 ರೂ.ಗೆ ಮಾರಾಟವಾಗುತ್ತಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 51,510 ರೂ. ಇದೆ. 


ಇದನ್ನು ಓದಿ: GT vs PBKS, IPL 2022: ಟೈಟಾನ್ಸ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪಂಜಾಬ್ ಕಿಂಗ್ಸ್


ಇನ್ನು ಒಡಿಶಾದ ಭುವನೇಶ್ವರ ಮತ್ತು ಆಂಧ್ರಪ್ರದೇಶ ವಿಶಾಖಪಟ್ಟಣಂನಲ್ಲಿ 22 ಕ್ಯಾರೆಟ್‌ ಚಿನ್ನದ ಬೆಲೆ 47,200 ರೂ.ಆದರೆ, 24 ಕ್ಯಾರೆಟ್‌ ಚಿನ್ನದ ಬೆಲೆ 51,510 ರೂ. ಇದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.