Narendra Modi Viral Image : ಪಿಎಂ ಮೋದಿ ಯುರೋಪ್ ಪ್ರವಾಸದ ನಡುವೆ ಅವರ 30 ವರ್ಷದ ಹಳೆ ಫೋಟೋ ವೈರಲ್

ಪ್ರಧಾನಿ ಮೋದಿಯವರ ಈ ಭೇಟಿಗೆ ಜರ್ಮನಿಯಲ್ಲಿ ಲಕ್ಷಾಂತರ ಜನ ನೆರೆದಿದ್ದರು. ಬಹುತೇಕ ಭಾರತೀಯರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಉತ್ಸುಕರಾಗಿದ್ದರು. ಇದೇ ವೇಳೆ ಅವರು ವಲಸೆಗಾರರನ್ನು ಉದ್ದೇಶಿಸಿ ಮಾತನಾಡುವಾಗ ಇಡೀ ಸಭಾಂಗಣ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳಿಂದ ಮೊಳಗಿತು.

Written by - Channabasava A Kashinakunti | Last Updated : May 3, 2022, 10:36 PM IST
Narendra Modi Viral Image : ಪಿಎಂ ಮೋದಿ ಯುರೋಪ್ ಪ್ರವಾಸದ ನಡುವೆ ಅವರ 30 ವರ್ಷದ ಹಳೆ ಫೋಟೋ ವೈರಲ್ title=

PM Modi 30 Year Old Picture : ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಮೂರು ದಿನಗಳ ಯುರೋಪ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಎರಡನೇ ದಿನವಾದ ಇಂದು ಅವರು ಡೆನ್ಮಾರ್ಕ್ ತಲುಪಿದ್ದಾರೆ. ಇಲ್ಲಿ ಪಿಎಂ ಮೋದಿಯವರ ಹಾಗೆ ಪ್ರಧಾನಿಯಾಗಿ ಕೆಲಸ ಮಾಡುತ್ತಿರುವ ಫ್ರೆಡೆರಿಕ್ಸನ್ ಅವರನ್ನು ಭೇಟಿಯಾದರು. ಇದು ಈ ವರ್ಷದ ಪ್ರಧಾನಿ ಮೋದಿಯವರ ಮೊದಲ ವಿದೇಶಿ ಭೇಟಿ ಮತ್ತು ಪ್ರವಾಸವಾಗಿದೆ. ಈ ಭೇಟಿಯ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಸೋಮವಾರ ಬರ್ಲಿನ್ ಗೆ ಹೋಗಿದ್ದರು. ಈ ಮಧ್ಯ ಪಿಎಂ ಮೋದಿಯವರ ಹಳೆ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಪ್ರಧಾನಿಯವರ ಹಳೆಯ ಜರ್ಮನಿ ಪ್ರವಾಸದ ಫೋಟೋ

ಇದೇ ವೇಳೆ ಪ್ರಧಾನಿ ಮೋದಿಯವರ ಹಳೆ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ನರೇಂದ್ರ ಮೋದಿಯವರ ಮೂವತ್ತು ವರ್ಷಗಳ ಹಳೆಯ ಫೋಟೋ. ಅವರು 30 ವರ್ಷಗಳ ಹಿಂದೆ ಜರ್ಮನಿಗೆ ಹೋಗಿದ್ದರು. ಆಗ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರಾಗಿದ್ದರು ಮತ್ತು ಅಮೆರಿಕದಿಂದ ಹಿಂದಿರುಗುವಾಗ ಜರ್ಮನಿ ತಲುಪಿದ್ದರು. ತೆಗಿಸಿಕೊಂಡ ಫೋಟೋ ಅದು.

ಇದನ್ನೂ ಓದಿ : 

30 ವರ್ಷದ ಫೋಟೋ ವೈರಲ್

30 ವರ್ಷದ ಮೋದಿಯವರ ಫೋಟೋದಲ್ಲಿ ಅವರು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ವೈರಲ್ ಆಗಿರುವ ಈ ಫೋಟೋ 1993ರದ್ದು. ಆ ಸಮಯದಲ್ಲಿ ಮೋದಿ ನೀಲಿ ಜಾಕೆಟ್ ಮತ್ತು ಬಿಳಿ ಶರ್ಟ್‌ನಲ್ಲಿ ತಮ್ಮ ಜೇಬಿನಲ್ಲಿ ಕೈಗಳನ್ನು ಹಿಡಿದುಕೊಂಡಿರುವುದನ್ನಂ ನೀವು ಕಾಣಬಹುದು.

ಜರ್ಮನಿಯಲ್ಲಿ ಪ್ರಧಾನಿ ಮೋದಿ ಕ್ರೇಜ್

ಪ್ರಧಾನಿ ಮೋದಿಯವರ ಈ ಭೇಟಿಗೆ ಜರ್ಮನಿಯಲ್ಲಿ ಲಕ್ಷಾಂತರ ಜನ ನೆರೆದಿದ್ದರು. ಬಹುತೇಕ ಭಾರತೀಯರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಉತ್ಸುಕರಾಗಿದ್ದರು. ಇದೇ ವೇಳೆ ಅವರು ವಲಸೆಗಾರರನ್ನು ಉದ್ದೇಶಿಸಿ ಮಾತನಾಡುವಾಗ ಇಡೀ ಸಭಾಂಗಣ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳಿಂದ ಮೊಳಗಿತು.

ಪ್ರಧಾನಿ ಮೋದಿಯವರ ವಿದೇಶ ಪ್ರವಾಸದ ವೇಳಾಪಟ್ಟಿ

ಪ್ರಧಾನಿ ಮೋದಿಯವರ ಈ ಭೇಟಿ ಮೇ 4 ರವರೆಗೆ ನಡೆಯಲಿದೆ. ಕೊನೆಯದಾಗಿ, ಪ್ರಧಾನಿ ಮೋದಿ ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಲಿದ್ದಾರೆ. ಈ ಸಭೆಯಲ್ಲಿ ಮೋದಿ ಉಕ್ರೇನ್ ಬಗ್ಗೆ ಚರ್ಚಿಸಬಹುದು.

ಇದನ್ನೂ ಓದಿ : 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News