ಬೆಂಗಳೂರು : Gold Price Today : ಪ್ರತಿ ದಿನ ಚಿನ್ನ ಬೆಳ್ಳಿ ದರದಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಕೆ ಇಳಿಕೆ ಕಾಣುತ್ತಲೇ ಇದೆ. ಇಂದು ಕೂಡಾ ಬಂಗಾರದ ಬೆಲೆಯಲ್ಲಿ 100 ರೂಪಾಯಿಗಳಷ್ಟು ಇಳಿಕೆಯಾಗಿದೆ. ಈ ಇಳಿಕೆಯೊಂದಿಗೆ  24 ಕ್ಯಾರೆಟ್ ಚಿನ್ನದ ಬೆಲೆ 52,880 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ  48,460 ರೂ. ಆಗಿದೆ.


COMMERCIAL BREAK
SCROLL TO CONTINUE READING

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್  ಚಿನ್ನದ ಬೆಲೆ ಹೀಗಿದೆ. :


ಚೆನ್ನೈಯಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 53,630 ರೂಪಾಯಿ ಆಗಿದ್ದು, ಮುಂಬಯಿಯಲ್ಲಿ 52,880, ದೆಹಲಿಯಲ್ಲಿ 53,040 ರೂ.   
ಕೋಲ್ಕತ್ತಾದಲ್ಲಿ  52,880 ರೂಪಾಯಿ ಆಗಿದೆ. ಇನ್ನು ಬೆಂಗಳೂರಿನಲ್ಲಿ52,930 ರೂಪಾಯಿ ಆಗಿದ್ದರೆ,  ಹೈದರಾಬಾದ್ ನಲ್ಲಿ  52, 880ರೂಪಾಯಿ ಆಗಿದೆ. ಕೇರಳದಲ್ಲಿಯೂ 10 ಗ್ರಾಂ ಚಿನ್ನದ ಬೆಲೆ  52,880 ರೂಪಾಯಿ ಆಗಿದೆ. 


ಇದನ್ನೂ ಓದಿ : ನಾಳೆಯಿಂದ ಈ ಬ್ಯಾಂಕ್‌ಗಳಲ್ಲಿ ಡಿಜಿಟಲ್ ರೂಪಾಯಿ ಪ್ರಾಯೋಗಿಕ ಪರೀಕ್ಷೆ.! ಡಿಜಿಟಲ್ ಕರೆನ್ಸಿ ಬಳಕೆ ಹೇಗೆ ತಿಳಿಯಿರಿ


 ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.


ಚೆನ್ನೈಯಲ್ಲಿ 68,100 ರೂಪಾಯಿ ಆಗಿದ್ದರೆ, ಮುಂಬಯಿಯಲ್ಲಿ  61,400 ರೂಪಾಯಿ ಆಗಿದೆ. ಇನ್ನು ದೆಹಲಿಯಲ್ಲಿ  61,400  ರೂಪಾಯಿ, 
ಕೋಲ್ಕತ್ತಾದಲ್ಲಿಯೂ   61,400 ರೂಪಾಯಿ ಆಗಿದೆ. ಬೆಂಗಳೂರಿನ ಬೆಲೆ ನೋಡುವುದಾದರೆ 68,100 ರೂಪಾಯಿ, ಹೈದರಾಬಾದ್ ನಲ್ಲಿ  68,100 ರೂಪಾಯಿ, ಕೇರಳದಲ್ಲಿಯೂ 68,100 ರೂಪಾಯಿ ಆಗಿದೆ. 


ಇದನ್ನೂ ಓದಿ :ಈ ಅಪ್ಲಿಕೇಶನ್‌ನಲ್ಲಿ LPG ಸಿಲಿಂಡರ್ ಬುಕ್ ಮಾಡಿ, ಬಂಪರ್ ಕ್ಯಾಶ್‌ಬ್ಯಾಕ್ ಪಡೆಯಿರಿ


ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.