Gold Price Today : ಎರಡನೇ ದಿನವೂ ದುಬಾರಿಯಾದ ಚಿನ್ನ, ಬೆಳ್ಳಿ ಖರೀದಿ ಯೋಚನೆ ಸಾಧ್ಯವೇ ಇಲ್ಲ .!
Gold Price Today : ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿ ಕೂಡಾ ದಿನೇ ದಿನೇ ದುಬಾರಿಯಾಗುತ್ತಿದೆ.
ಬೆಂಗಳೂರು : Gold Price Today : ಚಿನ್ನ ಪ್ರಿಯರಿಗೆ ಕಹಿ ಸುದ್ದಿಯಿದು. ಸತತ ಎರಡನೇ ದಿನವೂ ಬಂಗಾರದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದಿನೇ ದಿನೇ ಬಂಗಾರದ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದು, ಆಭರಣ ಖರೀದಿ ಮಾಡಲು ಬಯಸುವವರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ. ಮಾರುಕಟ್ಟೆ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆ 51,660 ರೂ. ಆಗಿದ್ದರೆ, 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ.ಗೆ 47,350 ರೂ. ಆಗಿದೆ.
ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.
ನಗರ | 22 ಕ್ಯಾರೆಟ್ ಚಿನ್ನದ ಬೆಲೆ | 24 ಕ್ಯಾರೆಟ್ ಚಿನ್ನದ ಬೆಲೆ |
ಚೆನ್ನೈ | 47,750 | 52,100 |
ಮುಂಬಯಿ | 47,350 | 51,660 |
ದೆಹಲಿ | 47,500 | 51,820 |
ಕೋಲ್ಕತ್ತಾ | 47,350 | 51,660 |
ಬೆಂಗಳೂರು | 47,400 | 51,710 |
ಹೈದರಾಬಾದ್ | 47,350 | 51,660 |
ಕೇರಳ | 47,350 | 51,660 |
ಇದನ್ನೂ ಓದಿ : Gold Price: ಶೀಘ್ರದಲ್ಲಿಯೇ ಭಾರಿ ದುಬಾರಿಯಾಗಲಿದೆ ಚಿನ್ನ! ಹಬ್ಬ-ಮದುವೆ ಸೀಜನ್ ಗೆ ಇಂದೇ ಖರೀದಿಸಿಟ್ಟುಕೊಳ್ಳಿ
ಹಳದಿ ಲೋಹದಂತೆ ಬೆಳ್ಳಿ ಬೆಲೆಯಲ್ಲಿ ಕೂಡಾ ಏರಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ಏರಿಕೆ ಕಂಡು ಬಂದಿದೆ. ಕೆ.ಜಿ ಬೆಳ್ಳಿ ದರದಲ್ಲಿ 4,400 ರೂಪಾಯಿಯಷ್ಟು ಏರಿಕೆ ದಾಖಲಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.
ನಗರ | ಇಂದಿನ ಬೆಳ್ಳಿ ಬೆಲೆ |
ಚೆನ್ನೈ | 66,700 |
ಮುಂಬಯಿ | 61,800 |
ದೆಹಲಿ | 61,800 |
ಕೋಲ್ಕತ್ತಾ | 61,800 |
ಬೆಂಗಳೂರು | 66,700 |
ಹೈದರಾಬಾದ್ | 66,700 |
ಕೇರಳ | 66,700 |
ಇದನ್ನೂ ಓದಿ : Indian Railways: ರೈಲು ಯಾತ್ರಿಗಳಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ Modi ಸರ್ಕಾರ
ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.