Gold-Silver Rate: ಚಿನ್ನ-ಬೆಳ್ಳಿ ಬೆಲೆಯಲ್ಲಿ ಮತ್ತೆ ಏರಿಳಿತ, ಇಲ್ಲಿದೆ ಇಂದಿನ ಬೆಲೆ!
ಬುಧವಾರ ಬೆಳಗಿನ ವೇಳೆಯಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ಇಳಿಕೆ ಕಂಡು ₹4,484ರೂಪಾಯಿ ದಾಖಲಾಗಿದೆ.
ಬೆಂಗಳೂರು: ಕಳೆದ ಕೆಲದಿನಗಳಿಂದ ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಬಂಗಾರದ ದರ ಚಿನ್ನಾಭರಣ ಪ್ರಿಯರ ಮೊಗದಲ್ಲಿ ಸಂತಸದ ನಗೆ ಮೂಡಿಸಿತ್ತು. ಆದರೆ 1 ವಾರದಿಂದ ಬೆಲೆಯಲ್ಲಿ ಏರಿಳಿತ ಕಂಡಿತ್ತು. ಬುಧವಾರ ಬೆಳಗಿನ ವೇಳೆಯಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ಇಳಿಕೆ ಕಂಡು ₹4,484ರೂಪಾಯಿ ದಾಖಲಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆ(Gold Rate)ಗೆ 10 ರೂ ಏರಿಕೆ ಕಂಡು, ₹42,010 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹45,830 ರೂಪಾಯಿಗೆ ತಲುಪಿದೆ.
March 31ರ ಮೊದಲು ತಪ್ಪದೇ ಮಾಡಿ ಈ 10 ಕೆಲಸ
ಬೆಳ್ಳಿ ದರ: ದೇಶದಲ್ಲಿ ಬೆಳ್ಳಿ ಬೆಲೆ(Silver Rate)ಯಲ್ಲಿ ಇಂದು ಒಂದು ಕೆಜಿಗೆ ₹66,900 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹66,900 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹70,700 ರೂ ನಿಗದಿಯಾಗಿದೆ.
LIC ತಂದಿದೆ ಹೊಸ ಉಳಿತಾಯ ಯೋಜನೆ ; ಕಷ್ಟದ ಸಮಯದಲ್ಲಿ ಕೈ ಹಿಡಿಯಲಿದೆ ಈ policy
ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹42,010 (22 ಕ್ಯಾರಟ್) ₹45,830(24 ಕ್ಯಾರಟ್)
ಚೆನ್ನೈ: ₹42,280 (22 ಕ್ಯಾರಟ್) ₹46,120 (24 ಕ್ಯಾರಟ್)
ದಿಲ್ಲಿ: ₹44,150 (22 ಕ್ಯಾರಟ್), ₹48,160 (24 ಕ್ಯಾರಟ್)
SBI ಗ್ರಾಹಕರಿಗೆ ಸಿಹಿ ಸುದ್ದಿ: ಈ ಖಾತೆದಾರರಿಗೆ ಸಿಗುತ್ತೆ '₹ 2 ಲಕ್ಷ ವಿಮೆ ಸೌಲಭ್ಯ'!
ಹೈದರಾಬಾದ್: ₹42,010 (22 ಕ್ಯಾರಟ್) ₹45,830 (24 ಕ್ಯಾರಟ್)
ಕೋಲ್ಕತಾ: ₹44,300 (22 ಕ್ಯಾರಟ್), ₹46,940 (24 ಕ್ಯಾರಟ್)
ಮಂಗಳೂರು: ₹42,010 (22 ಕ್ಯಾರಟ್) ₹45,830 (24 ಕ್ಯಾರಟ್)
ಮುಂಬಯಿ: ₹43,840(22 ಕ್ಯಾರಟ್), ₹44,830 (24 ಕ್ಯಾರಟ್)
ಮೈಸೂರು: ₹42,010(22 ಕ್ಯಾರಟ್) ₹45,830 (24 ಕ್ಯಾರಟ್)
Health Insurance: ಏಪ್ರಿಲ್ 1 ರಿಂದ ದುಬಾರಿಯಾಗಲಿದೆ ಆರೋಗ್ಯ ವಿಮೆ
ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
ಇನ್ನು ಚೆಕ್ ಕ್ಲಿಯರೆನ್ಸ್ ಗೆ ಕಾಯಬೇಕಿಲ್ಲ : ಫಟಾಫಟ್ ಆಗುತ್ತೆ ಬ್ಯಾಂಕ್ ಕೆಲಸ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.