SBI ಗ್ರಾಹಕರಿಗೆ ಸಿಹಿ ಸುದ್ದಿ: ಈ ಖಾತೆದಾರರಿಗೆ ಸಿಗುತ್ತೆ '₹ 2 ಲಕ್ಷ ವಿಮೆ ಸೌಲಭ್ಯ'!

'ಎಸ್ ಬಿಐ ರುಪೇ ಜನ್ ಧನ್ ಕಾರ್ಡ್'ಗೆ ಅರ್ಜಿ ಹಾಕಿದ್ರೆ, ಗ್ರಾಹಕರು 2 ಲಕ್ಷ ರೂ.ಗಳವರೆಗೆ ಅಪಘಾತ ವಿಮೆಯನ್ನ ಪಡೆಯುತ್ತಾರೆ ಎಂದು ಘೋಷಿಸಿದೆ.

Last Updated : Mar 16, 2021, 04:01 PM IST
  • ದೇಶದ ಅತಿ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಲಕ್ಷಾಂತರ ಜನಧನ್ ಖಾತೆದಾರರು ಗುಡ್ ನ್ಯೂಸ್ ನೀಡಿದ್ದು
  • 'ಎಸ್ ಬಿಐ ರುಪೇ ಜನ್ ಧನ್ ಕಾರ್ಡ್'ಗೆ ಅರ್ಜಿ ಹಾಕಿದ್ರೆ, ಗ್ರಾಹಕರು 2 ಲಕ್ಷ ರೂ.ಗಳವರೆಗೆ ಅಪಘಾತ ವಿಮೆಯನ್ನ ಪಡೆಯುತ್ತಾರೆ ಎಂದು ಘೋಷಿಸಿದೆ.
  • ಜನ್ ಧನ್ ಖಾತೆಯೊಂದಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನೂ ಸಹ ಒದಗಿಸಲಾಗಿದೆ.
SBI ಗ್ರಾಹಕರಿಗೆ ಸಿಹಿ ಸುದ್ದಿ: ಈ ಖಾತೆದಾರರಿಗೆ ಸಿಗುತ್ತೆ '₹ 2 ಲಕ್ಷ ವಿಮೆ ಸೌಲಭ್ಯ'! title=

ನವದೆಹಲಿ:‌ ದೇಶದ ಅತಿ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಲಕ್ಷಾಂತರ ಜನಧನ್ ಖಾತೆದಾರರು ಗುಡ್ ನ್ಯೂಸ್ ನೀಡಿದ್ದು, 'ಎಸ್ ಬಿಐ ರುಪೇ ಜನ್ ಧನ್ ಕಾರ್ಡ್'ಗೆ ಅರ್ಜಿ ಹಾಕಿದ್ರೆ, ಗ್ರಾಹಕರು 2 ಲಕ್ಷ ರೂ.ಗಳವರೆಗೆ ಅಪಘಾತ ವಿಮೆಯನ್ನ ಪಡೆಯುತ್ತಾರೆ ಎಂದು ಘೋಷಿಸಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಲಕ್ಷಾಂತರ ಜನಧನ್ ಖಾತೆದಾರರು ಗುಡ್ ನ್ಯೂಸ್ ನೀಡಿದೆ. ಗ್ರಾಹಕರಿಗೆ ಅಧಿಕೃತ ಟ್ವಿಟರ್ ಹ್ಯಾಂಡಲ್ʼನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 'ಎಸ್ ಬಿಐ ರುಪೇ ಜನ್ ಧನ್ ಕಾರ್ಡ್'(SBI RuPay Jandhan Card)ಗೆ ಅರ್ಜಿ ಹಾಕಿದರೆ, ಗ್ರಾಹಕರು 2 ಲಕ್ಷ ರೂ.ಗಳವರೆಗೆ ಅಪಘಾತ ವಿಮೆಯನ್ನು ಪಡೆಯುತ್ತಾರೆ' ಎಂದು ಇತ್ತೀಚೆಗೆ ಘೋಷಣೆ ಮಾಡಿದೆ.

Health Insurance: ಏಪ್ರಿಲ್ 1 ರಿಂದ ದುಬಾರಿಯಾಗಲಿದೆ ಆರೋಗ್ಯ ವಿಮೆ

2) ಜನಧನ್ ಖಾತೆಯ ಪ್ರಯೋಜನಗಳು:

ಜನ್ ಧನ್ ಖಾತೆಯಿಂದ ಹಲವಾರು ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:

- ಸರಕಾರದ ಹಲವು ಯೋಜನೆಗಳ ಲಾಭನೇರವಾಗಿ ಖಾತೆಗೆ ಬರುತ್ತದೆ.

- ಜನ್ ಧನ್ ಖಾತೆಯೊಂದಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್(Mobile Banking) ಸೌಲಭ್ಯವನ್ನೂ ಸಹ ಒದಗಿಸಲಾಗಿದೆ.

- ಖಾತೆ ತೆರೆದ 6 ತಿಂಗಳ ನಂತರ ಸಾಗರೋತ್ತರ ಸೌಲಭ್ಯ

- ಆಕಸ್ಮಿಕ ವಿಮೆ 2 ಲಕ್ಷ ರೂ.

- ಲೈಫ್ ಕವರ್ 30,000 ರೂ.

- ಖಾತೆದಾರನಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ, ಇದರಿಂದ ಖಾತೆಯಿಂದ ಹಣ(Money) ವನ್ನು ಹಿಂತೆಗೆದುಕೊಳ್ಳಬಹುದು ಅಥವಾ ಖರೀದಿ ಮಾಡಬಹುದು.

- ಠೇವಣಿಗೆ ಬಡ್ಡಿ ಯನ್ನು ಪಡೆಯಲಾಗುತ್ತದೆ.

- ದೇಶಾದ್ಯಂತ ಹಣ ವರ್ಗಾವಣೆ ಸೌಲಭ್ಯ

- ಖಾತೆಗಳ ಮೂಲಕ ವಿಮೆ, ಪಿಂಚಣಿ ಉತ್ಪನ್ನಗಳನ್ನು ಖರೀದಿಸಲು ಸುಲಭ.

- ಜಾನ್ ಧನ್ ಖಾತೆದಾರರು ಪಿಎಂ ಕಿಸಾನ್ ಮತ್ತು ಶ್ರಮಯೋಗಿ ಮಧನ್(Shram Yogi Mandhan Yojana) ನಂತಹ ಯೋಜನೆಗಳಲ್ಲಿ ಪಿಂಚಣಿಗಾಗಿ ಖಾತೆಯನ್ನೂ ತೆರೆಯಬಹುದು.

ಇನ್ನು ಚೆಕ್ ಕ್ಲಿಯರೆನ್ಸ್ ಗೆ ಕಾಯಬೇಕಿಲ್ಲ : ಫಟಾಫಟ್ ಆಗುತ್ತೆ ಬ್ಯಾಂಕ್ ಕೆಲಸ

3) ಜನ್ ಧನ್ ಖಾತೆಯನ್ನ ಯಾರು ತೆರೆಯಬಹುದು?

10 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ಪ್ರಜೆ ಜನ್ ಧನ್ ಖಾತೆ(Jandhan Account) ತೆರೆಯಲು ಅರ್ಹನಾಗಿದ್ದಾರೆ. ನೀವು ನಿಮ್ಮ ಮೂಲ ಉಳಿತಾಯ ಖಾತೆಯನ್ನು ಜನಧನ್ ಯೋಜನೆ ಖಾತೆಗೆ ವರ್ಗಾಯಿಸಬಹುದು. ಇದಕ್ಕಾಗಿ ನಿಮ್ಮ ಖಾತೆಯನ್ನ ಜನಧನ್ ಯೋಜನೆಗೆ ವರ್ಗಾಯಿಸಬೇಕು ಎಂದು ಬ್ಯಾಂಕ್ ಮ್ಯಾನೇಜರ್ʼಗೆ ನೀವು ಅರ್ಜಿ ಸಲ್ಲಿಸಬೇಕು.

Bread Making Business : ಮನೆಯಲ್ಲಿಯೇ ಕುಳಿತು ಕೇವಲ ರೂ.10000 ಹೂಡಿಕೆಯಲ್ಲಿ ಈ ಬಿಸಿನೆಸ್ ಆರಂಭಿಸಿ ಲಕ್ಷಾಂತರ ಸಂಪಾದಿಸಿ

4) ಜನಧನ್ ಖಾತೆ ತೆರೆಯಲು ಅಗತ್ಯವಿರುವ ದಾಖಲೆಗಳು

- ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್(DL) ಮತ್ತು ಕೆವೈಸಿ ಅಗತ್ಯಗಳನ್ನು ಪೂರೈಸುವ ಇತರ ಯಾವುದೇ ದಾಖಲೆ.

-ನಿಮ್ಮ ಬಳಿ ದಾಖಲೆಗಳಿಲ್ಲದಿದ್ದರೆ, ನೀವು ಸಣ್ಣ ಖಾತೆಯನ್ನ ತೆರೆಯಬಹುದು.

- ಈ ಸಂದರ್ಭದಲ್ಲಿ, ನೀವು ಸ್ವಯಂ ದೃಢೀಕರಿಸಿದ ಭಾವಚಿತ್ರ ಮತ್ತು ನಿಮ್ಮ ಸಹಿಯನ್ನು ಬ್ಯಾಂಕ್ ಅಧಿಕಾರಿ(Bank Office)ಗೆ ತುಂಬಬೇಕು.

- ಜನಧನ್ ಖಾತೆ ತೆರೆಯಲು ನೀವು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ.

ಶೀಘ್ರದಲ್ಲೇ Taj Mahal ಟಿಕೆಟ್ ದರ ಏರಿಕೆ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News