ಇನ್ನು ಚೆಕ್ ಕ್ಲಿಯರೆನ್ಸ್ ಗೆ ಕಾಯಬೇಕಿಲ್ಲ : ಫಟಾಫಟ್ ಆಗುತ್ತೆ ಬ್ಯಾಂಕ್ ಕೆಲಸ

ಸೆಪ್ಟೆಂಬರ್ 30, 2021 ರ ವೇಳೆಗೆ, ಎಲ್ಲಾ ಬ್ಯಾಂಕ್ ಗಳೂ  ಇಮೇಜ್ ಆಧಾರಿತ ಸಿಟಿಎಸ್ ವ್ಯವಸ್ಥೆಯ ವ್ಯಾಪ್ತಿಗೆ ಬರುವುದು ಅನಿವಾರ್ಯವಾಗಿದೆ.  ಎಲ್ಲಾ ಶಾಖೆ ಗಳಲ್ಲು ಸಿಟಿಎಸ್ ಅಳವಡಿಸಿರುವ ಬಗ್ಗೆ ಬ್ಯಾಂಕ್ ಖಚಿತಪಡಿಸಿಕೊಳ್ಳಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ

Written by - Ranjitha R K | Last Updated : Mar 16, 2021, 01:57 PM IST
  • ಇನ್ನು ತಡವಾಗುವುದಿಲ್ಲ ಬ್ಯಾಂಕ್ ಕೆಲಸ
  • ಸೆಪ್ಟೆಂಬರ್ 30 ಒಳಗೆ ಎಲ್ಲಾ ಶಾಖೆ ಗಳಲ್ಲು ಸಿಟಿಎಸ್
  • ಸಿಟಿಎಸ್ ನಿಂದ ಸುಲಭವಾಗಲಿದೆ ಚೆಕ್ ಕ್ಲಿಯರೆನ್ಸ್
ಇನ್ನು ಚೆಕ್ ಕ್ಲಿಯರೆನ್ಸ್ ಗೆ ಕಾಯಬೇಕಿಲ್ಲ : ಫಟಾಫಟ್ ಆಗುತ್ತೆ ಬ್ಯಾಂಕ್ ಕೆಲಸ title=
ಇನ್ನು ತಡವಾಗುವುದಿಲ್ಲ ಬ್ಯಾಂಕ್ ಕೆಲಸ (file photo)

ನವದೆಹಲಿ: Cheque Truncation System : ಇಮೇಜ್ ಬೇಸ್ಡ್ Cheque Truncation System (CTS) ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಲ್ಲಾ ಬ್ಯಾಂಕುಗಳಿಗೆ ಸೂಚನೆ ನೀಡಿದೆ. 2021 ರ ಸೆಪ್ಟೆಂಬರ್ 30 ರೊಳಗೆ ಸಿಟಿಎಸ್ ವ್ಯವಸ್ಥೆಯನ್ನು ತನ್ನ ಎಲ್ಲಾ ಶಾಖೆಗಳಲ್ಲಿ ಜಾರಿಗೆ ತರಲು ಆರ್‌ಬಿಐ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ಪ್ರಸ್ತುತ 1.5 ಲಕ್ಷ ಬ್ಯಾಂಕ್ ಶಾಖೆಗಳಲ್ಲಿದೆ  CTS: 
ಸದ್ಯ ದೇಶದಲ್ಲಿ  ಸುಮಾರು 18 ಸಾವಿರ ಬ್ಯಾಂಕ್ (Bank) ಶಾಖೆಗಳಿವೆ. ಅಲ್ಲಿ  ಔಪಚಾರಿಕವಾಗಿ ಚೆಕ್ ಕ್ಲಿಯರ್ ಮಾಡುವ ವ್ಯವಸ್ಥೆ ಇಲ್ಲ. ದೇಶದ ಎಲ್ಲಾ ಬ್ಯಾಂಕ್ ಶಾಖೆಗಳನ್ನು CTS ವ್ಯವಸ್ಥೆಯ ವ್ಯಾಪ್ತಿಗೆ ತರ ಬೇಕೆಂದು  ರಿಸರ್ವ್ ಬ್ಯಾಂಕ್ (RBI)  ಕಳೆದ ತಿಂಗಳು ಘೋಷಿಸಿತ್ತು. 2010 ರಿಂದಲೇ CTS ಚೆಕ್ ಕ್ಲಿಯರೆನ್ಸ್ ಬಳಕೆಯಲ್ಲಿದೆ.  ಪ್ರಸ್ತುತ ಇದು ದೇಶದ 1.5 ಲಕ್ಷ ಬ್ಯಾಂಕ್ ಶಾಖೆಗಳಲ್ಲಿ ಅಳವಡಿಸಲಾಗಿದೆ. 

ಇದನ್ನೂ ಓದಿ :  ಇನ್ಮುಂದೆ Android ಫೋನೇ ನಿಮ್ಮ POS ! SBI Payments-NPCIನಿಂದ ಹೊಸ ಸೇವೆ ಆರಂಭ

ಸೆಪ್ಟೆಂಬರ್ 30, 2021 ರ ವೇಳೆಗೆ CTS ಅಳವಡಿಸಲೇ ಬೇಕು : 
ಸೆಪ್ಟೆಂಬರ್ 30, 2021 ರ ವೇಳೆಗೆ, ಎಲ್ಲಾ ಬ್ಯಾಂಕ್ ಗಳೂ  ಇಮೇಜ್ ಆಧಾರಿತ ಸಿಟಿಎಸ್ ವ್ಯವಸ್ಥೆಯ ವ್ಯಾಪ್ತಿಗೆ ಬರುವುದು ಅನಿವಾರ್ಯವಾಗಿದೆ.  ಎಲ್ಲಾ ಶಾಖೆ ಗಳಲ್ಲು ಸಿಟಿಎಸ್ ಅಳವಡಿಸಿರುವ ಬಗ್ಗೆ ಬ್ಯಾಂಕ್ ಖಚಿತಪಡಿಸಿಕೊಳ್ಳಬೇಕು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಇದಕ್ಕಾಗಿ ಯಾವುದೇ ಮಾಡೆಲ್ (Model) ಅನ್ನು ಅನುಸರಿಸಲು ಬ್ಯಾಂಕ್ ಸ್ವತಂತ್ರವಾಗಿದೆ ಎಂದು ಆರ್ ಬಿಐ ಹೇಳಿದೆ. 

ಗ್ರಾಹಕರ ತೊಂದರೆ ತಪ್ಪಲಿದೆ :
ಔಪಚಾರಿಕ ಚೆಕ್ ಕ್ಲಿಯರೆನ್ಸ್ (Cheque clearance) ವ್ಯವಸ್ಥೆ ಇಲ್ಲದಿರುವ ಅನೇಕ ಶಾಖೆಗಳು ಇನ್ನೂ ಇವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಇದರಿಂದಾಗಿ  ಚೆಕ್  ಕ್ಲಿಯರ್ ಮಾಡಲು ಬಹಳ ಸಮಯ ಬೇಕಾಗುತ್ತದೆ. ಹೀಗಾಗಿ  ಗ್ರಾಹಕರು ತೊಂದರೆ ಎದುರಿಸಬೇಕಾಗುತ್ತದೆ.  ದೇಶಾದ್ಯಂತ ಸಿಟಿಎಸ್ ಜಾರಿಗೆ ತರಲು 2021 ಏಪ್ರಿಲ್ 30 ರ ಮೊದಲು ಮಾರ್ಗಸೂಚಿಯನ್ನು ಸಲ್ಲಿಸುವಂತೆ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ :  RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel

Cheque Truncation System  ಅಂದರೆ ಏನು ? :
Cheque Truncation System  ಚೆಕ್  ಕ್ಲಿಯರ್ ಮಾಡುವ ಸುಲಭವಾದ ಪ್ರಕ್ರಿಯೆಯಾಗಿದೆ. ಹಿಂದೆ, ಚೆಕ್‌ಗಳನ್ನು ಭೌತಿಕವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಲಾಗುತ್ತಿತ್ತು, ಈಗ ಚೆಕ್ Truncation System  ಮೂಲಕ  ಚೆಕ್ ನ ಎಲೆಕ್ಟ್ರಾನಿಕ್  ಫೋಟೋ ತೆಗೆದು ಬೇರೆ ಶಾಖೆಗಳಿಗೆ ಕಳುಹಿಸಲಾಗುತ್ತದೆ.  ಇದರಲ್ಲಿ MICR,  ಚೆಕ್ ಹಾಕುವ ದಿನಾಂಕ, ಚೆಕ್ ಪ್ರಸ್ತುತಪಡಿಸುವ ಬ್ಯಾಂಕಿನ ವಿವರಗಳಂತಹ ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡ ಬೇಕಾಗುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News