ನವದೆಹಲಿ: ನೀವು ಖರೀದಿಸುತ್ತಿರುವ ಚಿನ್ನ ಎಷ್ಟು ಶುದ್ಧ, ಅದು ಶುದ್ಧವಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಹಾಲ್‌ಮಾರ್ಕಿಂಗ್ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. 2021 ರ ಜನವರಿ 15 ರಂದು ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಮೇಲೆ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾ ಗುವುದು ಎಂದು ಸರ್ಕಾರ 2019 ರ ನವೆಂಬರ್‌ನಲ್ಲಿ ಘೋಷಿಸಿತು. ಆದರೆ ಆಭರಣಕಾರರ ಮನವಿಯ ಮೇರೆಗೆ ಅದನ್ನು 2021 ಜೂನ್ 30 ರವರೆಗೆ ಗಡವು ವಿಸ್ತರಿಸಲಾಗಿದೆ.


COMMERCIAL BREAK
SCROLL TO CONTINUE READING

ಆಭರಣ ನೋಂದಣಿಗೆ ಸಿಕ್ಕಿತು ಟೈಮ್:
ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (Bureau of Indian Standards) ನಲ್ಲಿ ನೋಂದಾಯಿಸಲು ಆಭರಣ ವ್ಯಾಪಾರಿಗಳಿಗೆ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯವನ್ನು ನೀಡಲಾಗಿದೆ. ಕೋವಿಡ್ -19 ಮಧ್ಯೆ ಬುಲಿಯನ್ ವ್ಯಾಪಾರಿಗಳ ಬೇಡಿಕೆಯ ಮೇರೆಗೆ ಗಡುವನ್ನು ಜೂನ್ 2021 ಕ್ಕೆ ವಿಸ್ತರಿಸಲಾಗಿದೆ. ಅಂದರೆ, ಇಂದಿನಿಂದ ಜೂನ್ 30 ವರೆಗೆ ಯಾವುದೇ ಚಿನ್ನದ ಆಭರಣಗಳು ಅಥವಾ ಕಲಾಕೃತಿಗಳನ್ನು ಹಾಲ್ಮಾರ್ಕ್ ಮಾಡದೆ ಮಾರಾಟ ಮಾಡಲು ಸಾಧ್ಯವಿಲ್ಲ.


ಇದನ್ನೂ ಓದಿ- PM Jandhan Account: ಜನ ಧನ್ ಖಾತೆದಾರರೇ ಗಮನಿಸಿ, ಈ ಬಗ್ಗೆ ನಿಮಗೂ ತಿಳಿದಿದೆಯೇ


'ಜೂನ್‌ನಿಂದ ಹಾಲ್‌ಮಾರ್ಕಿಂಗ್ ಕಾರ್ಯಗತಗೊಳಿಸಲು ಸಿದ್ಧ'
ಗಡುವನ್ನು ಹೆಚ್ಚಿಸುವ ಬೇಡಿಕೆ ಇಲ್ಲ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಆಭರಣ ವ್ಯಾಪಾರಿಗಳಿಗೆ ಹಾಲ್ಮಾರ್ಕಿಂಗ್(Hallmarking) ಅನುಮೋದನೆಯನ್ನು ಬಿಐಎಸ್ ಹೆಚ್ಚಾಗಿ ಮಾಡುತ್ತಿದೆ. ಜೂನ್‌ನಿಂದ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲು ನಾವು ಸಿದ್ಧರಿದ್ದೇವೆ ಎಂದು ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಹೇಳಿದರು. ಈ ದಿನಾಂಕವನ್ನು ವಿಸ್ತರಿಸುವ ಯಾವುದೇ ಪ್ರಸ್ತಾಪವನ್ನು ನಾವು ಸ್ವೀಕರಿಸಿಲ್ಲ. ಈವರೆಗೆ 34,647 ಆಭರಣಕಾರರು ಬಿಐಎಸ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.


ಇದನ್ನೂ ಓದಿ- Bajaj Chetak Electric Scooter ಬುಕಿಂಗ್ ಆರಂಭ, ಹೊಸ ಅವತಾರದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್


 1 ಲಕ್ಷ ತಲುಪಲಿದೆ ನೋಂದಣಿದಾರರ ಸಂಖ್ಯೆ: 
ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ನೋಂದಣಿದಾರರ ಸಂಖ್ಯೆಯುವು ಒಂದು ಲಕ್ಷ ತಲುಪಲಿದೆ ಎಂದು ಹೇಳಿದ್ದಾರೆ. ನೋಂದಣಿ ಪ್ರಕ್ರಿಯೆಯನ್ನು ಆನ್‌ಲೈನ್(Online) ಮತ್ತು ಸ್ವಯಂಚಾಲಿತಗೊಳಿಸಲಾಗಿದೆ. ಜೂನ್ 1 ರಿಂದ ಬುಲಿಯನ್ ವ್ಯಾಪಾರಿಗಳಿಗೆ ಕೇವಲ 14, 18 ಮತ್ತು 22 ಕ್ಯಾರೆಟ್ ಚಿನ್ನದ ಆಭರಣಗಳನ್ನು ಮಾರಾಟ ಮಾಡಲು ಅವಕಾಶವಿರುತ್ತದೆ.


ಇದನ್ನೂ ಓದಿ- ಈ 9 Post Office ಯೋಜನೆಗಳಲ್ಲಿ ಹೂಡಿಕೆ ಮಾಡಿ, ಉತ್ತಮ ಆದಾಯ ನಿಮ್ಮದಾಗಿಸಿ


ಗ್ರಾಹಕರಿಗೆ ಶುದ್ಧ ಚಿನ್ನ:  
ಬಿಐಎಸ್ ಪ್ರಕಾರ, ಕಡ್ಡಾಯ ಹಾಲ್ಮಾರ್ಕಿಂಗ್ ಮಾಡುವುದರಿಂದ ಗ್ರಾಹಕರಿಗೆ ಗುಣಮಟ್ಟದ ಶುದ್ಧ ಆಭರಣ(Pure Gold Jewellery)ಗಳನ್ನು ನೀಡಲಾಗುತ್ತದೆ ಮತ್ತು ವಂಚನೆಗಳನ್ನು ಕಡಿಮೆ ಮಾಡಬಹುದು. ಭಾರತವು ವಿಶ್ವದಲ್ಲಿ ಅತೀ  ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶವಾಗಿದೆ. ಹೆಚ್ಚಿನ ಬೇಡಿಕೆ ಆಭರಣ ಉದ್ಯಮದಿಂದ ಬಂದಿದೆ. ಭಾರತವು ವಾರ್ಷಿಕವಾಗಿ 700–800 ಟನ್ ಚಿನ್ನವನ್ನು ರಫ್ತು ಮಾಡುತ್ತದೆ ಎಂದು ಹಳಲಾಗುತ್ತಿದೆ.


ಇದನ್ನೂ ಓದಿ- Moody's Predictions: ಕೊರೊನಾ 2ನೇ ಅಲೆಯ ಮಧ್ಯೆಯೂ ಕೂಡ ಭಾರತದ ಆರ್ಥಿಕ ಪ್ರಗತಿ ದರ ಎರಡಂಕಿಯಲ್ಲಿರಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.