Moody's Predictions: ಕೊರೊನಾ 2ನೇ ಅಲೆಯ ಮಧ್ಯೆಯೂ ಕೂಡ ಭಾರತದ ಆರ್ಥಿಕ ಪ್ರಗತಿ ದರ ಎರಡಂಕಿಯಲ್ಲಿರಲಿದೆ

Moody's Predictions: ಹೆಚ್ಚಾಗುತ್ತಿರುವ ಕೊರೊನಾ ಬಿಕ್ಕಟ್ಟು ವಿಶ್ವದಾದ್ಯಂತ ಆರ್ಥಿಕ ಚಟುವಟಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡಿಸ್ (Moody's Rating Agency) ಹೇಳಿದೆ. 2020 ರ ವರ್ಷದಲ್ಲಿ ಕಡಿಮೆ ಮಟ್ಟದ ಆರ್ಥಿಕ ಚಟುವಟಿಕೆಯನ್ನು ಗಮನಿಸಿದರೆ, ಇದೀಗ ಅದು ಜಿಡಿಪಿಯ (India GDP)ಎರಡು ಅಂಕೆಗಳಲ್ಲಿ (Double Digit Growth) ಬೆಳೆಯುವ ನಿರೀಕ್ಷೆಯಿದೆ. ಕೋವಿಡ್ -19 ರ ಎರಡನೇ ಅಲೆ ಇದೀಗ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ, ಆದರೆ ತಡೆಗಟ್ಟುವ ಕ್ರಮಗಳು ಮತ್ತು ವ್ಯಾಕ್ಸಿನೇಷನ್ ಅಭಿಯಾನಗಳ ಹಿನ್ನೆಲೆ ಪ್ರಭಾವ ಕಡಿಮೆ ಇರಲಿದೆ ಎಂದು Moody's ಹೇಳಿದೆ.

Written by - Nitin Tabib | Last Updated : Apr 13, 2021, 09:53 PM IST
  • ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ ಹಿನ್ನೆಲೆ.
  • ಪ್ರಸ್ತುತ ಆರ್ಥಿಕ ವರ್ಷದಲ್ಲಿ ಭಾರತಿಯ ಅರ್ಥ ವ್ಯವಸ್ಥೆಯ ಕುರಿತು Moodys ಭವಿಷ್ಯ.
  • ಭಾರತೀಯ ಆರ್ಥಿಕ ಪ್ರಗತಿ ದರ ಎರಡಂಕಿಯಲ್ಲಿ ಇರಲಿದೆ ಎಂದ Moodys.
Moody's Predictions: ಕೊರೊನಾ 2ನೇ ಅಲೆಯ ಮಧ್ಯೆಯೂ ಕೂಡ ಭಾರತದ ಆರ್ಥಿಕ ಪ್ರಗತಿ ದರ ಎರಡಂಕಿಯಲ್ಲಿರಲಿದೆ title=
Moody's Predictions (File Photo)

ನವದೆಹಲಿ:  Moody's Predictions - ಕರೋನಾ ವೈರಸ್‌ನ ಎರಡನೇ ಅಲೆಯಿಂದ (Coronavirus 2nd Wave) ಉದ್ಭವಿಸಿರುವ ಎಲ್ಲಾ ಸವಾಲುಗಳ ನಡುವೆ ಭಾರತೀಯ ಆರ್ಥಿಕತೆಗೆ ಉತ್ತಮ ಸೂಚನೆಗಳು ಇವೆ. ಕೋವಿಡ್ -19 ಸೋಂಕಿನ ಎರಡನೇ ಅಲೆ ಭಾರತದ ಆರ್ಥಿಕತೆಯ (Indian Economy) ಕುರಿತು ನಡೆಸಲಾಗಿರುವ ಎಲ್ಲಾ ಅನುಮಾನಗಳನ್ನು ಅಪಾಯಕ್ಕೆ ತಳ್ಳುತ್ತಿದೆ ಎಂದು ಜಾಗತಿಕ ರೇಟಿಂಗ್ ಸಂಸ್ಥೆಯಾಗಿರುವ ಮೋಡಿಜ್ ಹೇಳಿದೆ. ಅದೇನೇ ಇದ್ದರೂ, ಕಳೆದ ವರ್ಷದಲ್ಲಿ ಕಡಿಮೆ ಮಟ್ಟದ ಆರ್ಥಿಕ ಚಟುವಟಿಕೆಯನ್ನು ಗಮನಿಸಿದರೆ, ಒಟ್ಟು ದೇಶೀಯ ಉತ್ಪನ್ನದ (GDP) ಬೆಳವಣಿಗೆಯ ದರವು ಎರಡು ಅಂಕೆಗಳಲ್ಲಿ ಉಳಿಯುವ ಸಾಧ್ಯತೆ ಇದೆ ಎಂದು ಮೂಡಿಜ್ ಅಂದಾಜು ವ್ಯಕ್ತಪಡಿಸಿದೆ. ಕರೋನಾ ವೈರಸ್ ಹರಡುವುದರಿಂದ ಈ ವರ್ಷ ಆರ್ಥಿಕ ಚಟುವಟಿಕೆಯ ಮೇಲೂ ಅದು ಪರಿಣಾಮ ಬೀರಲಿದೆ ಎಂದು ಅದು ಹೇಳಿದೆ. 

ಇದನ್ನೂ ಓದಿ- Economic Growth Rate - 2021ರಲ್ಲಿ ಭಾರತದ ಆರ್ಥಿಕ ವಿಕಾಸ ದರ ಶೇ.11.5 ರಷ್ಟು ಇರಲಿದೆ: IMF

ಲಾಕ್ ಡೌನ್ (Lockdown) ಬದಲಾಗಿ ಈ ಉಪಾಯಗಳನ್ನು ಅನುಸರಿಸಿದರೆ ಉತ್ತಮ. ಪ್ರಸ್ತುತ ಉದ್ಭವಿಸಿರುವ ಅಲೆಯನ್ನು ಎದುರಿಸಲು ದೇಶಾದ್ಯಂತ ಲಾಕ್ ಡೌನ್ ಹೇರುವ ಬದಲು ಸಣ್ಣಸಣ್ಣ ಕಂಟೆನ್ಮೆಂಟ್ ಝೋನ್ ಗಳ ನಿರ್ಮಾಣದ ಮೇಲೆ ಹೆಚ್ಚು ಒತ್ತು ನೀಡಬೇಕು. ಇದರಿಂದ 2020ರ ಹೋಲಿಕೆಯಲ್ಲಿ ಆರ್ಥಿಕ ಚಟುವಟಿಕೆಗಳ (Business Activities) ಮೇಲೆ ಕಡಿಮೆ ಪ್ರಭಾವ ಉಂಟಾಗಲಿದೆ ಎಂದು ಮೂಡಿಜ್ ಹೇಳಿದೆ. ಭಾರತದಲ್ಲಿ ಕೊರೊನಾ ವೈರಸ್ ನ ಅತ್ಯಂತ ಕಡಿಮೆ ಮೃತ್ಯುದರ (Low Death Rate) ಹಾಗೂ ಅಪೇಕ್ಷಿತ ಯುವ ಜನಸಂಖ್ಯೆಯ ಪ್ರಮಾಣ ಅಪಾಯವನ್ನು ಕಡಿಮೆ ಮಾಡಲು ಸಹಾಯಕಾರಿ ಸಾಬೀತಾಗಲಿದೆ. 2020 ರಲ್ಲಿ ಕಡಿಮೆ ಮಟ್ಟದ ಆರ್ಥಿಕ ಚಟುವಟಿಕೆಯನ್ನು ಗಮನಿಸಿದರೆ, ಜಿಡಿಪಿ ಇನ್ನೂ ಎರಡು ಅಂಕೆಗಳಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ಮೂಡಿಜ್ ಇನ್ವೆಸ್ಟರ್ಸ್ ಸರ್ವಿಸ್ ಹೇಳಿದೆ.

ಇದನ್ನೂ ಓದಿ- ಭಾರತೀಯ ಆರ್ಥಿಕತೆ ಬಗ್ಗೆ ಕಹಿ ಸುದ್ದಿ! ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ವರದಿಯಿಂದ ಬಹಿರಂಗ

ಸೋಂಕಿನ ಎರಡನೇ ಅಲೆಯು ಆರ್ಥಿಕ ಚೇತರಿಕೆಗೆ ಕೆಲವು  ಅಪಾಯಗಳನ್ನುಂಟುಮಾಡುತ್ತದೆ, ಆದರೆ ತಡೆಗಟ್ಟುವ ಕ್ರಮಗಳು ದುಷ್ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದೇ ವೇಳೆ, ಕರೋನಾ ವೈರಸ್ ವಿರುದ್ಧ ವ್ಯಾಕ್ಸಿನೇಷನ್ ಅಭಿಯಾನದ ವೇಗ ಹೆಚ್ಚಿಸುವುದರ ಮೂಲಕ ಕೂಡ ಅಪಾಯವನ್ನು ಮತ್ತಷ್ಟು ಸಕಾರಾತ್ಮಕವಾಗಿಸಬಹುದು ಎಂದು ಮೂಡಿಜ್ ಅಭಿಪ್ರಾಯಪಟ್ಟಿದೆ.  ಈ ಮೊದಲು, ಮೂಡಿಸ್ ಫೆಬ್ರವರಿ 2021 ರಲ್ಲಿ ಭಾರತದ ಬೆಳವಣಿಗೆಯ ದರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 13.7 ರಷ್ಟು ಇರಲಿದೆ ಎಂದು ಅಂದಾಜು ವ್ಯಕ್ತಪಡಿಸಿತ್ತು. ನಂತರ ಮಾರ್ಚ್ನಲ್ಲಿ, ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್, 2021-22ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 12.8 ರಷ್ಟು ಬೆಳೆಯವ ಸಾಧ್ಯತೆ ಇದೆ  ಎಂದು ಹೇಳಿತ್ತು. ರೇಟಿಂಗ್ ಏಜೆನ್ಸಿ ಈ ಹಿಂದೆ 2022 ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇ.11 ರಷ್ಟು ಇರುವ ಸಾಧ್ಯತೆ ಇದೆ ಎಂದು ಊಹಿಸಿತ್ತು.

ಇದನ್ನೂ ಓದಿ- Indian Economy 2020: ವರ್ಷ 2030ರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ... No.1 ಯಾರು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News