Gold Price Today, 4 September : ವಾರದ ಮೊದಲ ವಹಿವಾಟಿನ ದಿನದಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇದಲ್ಲದೇ ಇಂದು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ದಾಖಲಾಗಿದೆ. ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX ಚಿನ್ನದ ಬೆಲೆ) ಚಿನ್ನದ ಬೆಲೆ 59500 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯ ಪರಿಣಾಮ ದೇಶಿಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. 10 ಗ್ರಾಂ ಚಿನ್ನದ ಇತ್ತೀಚಿನ ಬೆಲೆ  ಎಷ್ಟು ನೋಡೋಣ.  


COMMERCIAL BREAK
SCROLL TO CONTINUE READING

MCX ನಲ್ಲಿ ಬೆಲೆ ಎಷ್ಟು? : 
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ, ಶೇಕಡಾ 0.21 ರಷ್ಟು ಏರಿಕೆ ಯೊಂದಿಗೆ 10 ಗ್ರಾಂ ಚಿನ್ನದ ಬೆಲೆ 59,520 ರೂಪಾಯಿಗಳ ಮಟ್ಟದಲ್ಲಿದೆ.  ಇದಲ್ಲದೇ ಬೆಳ್ಳಿಯ ಬೆಲೆಯಲ್ಲಿ ಶೇ.0.16ರಷ್ಟು ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 74968 ರೂ. ಆಗಿದೆ.


ಇದನ್ನೂ ಓದಿ : ವೇತನ ನಿಯಮಗಳಲ್ಲಿ ಬದಲಾವಣೆ : ಈ ತಿಂಗಳಿನಿಂದಲೇ ಕೈ ಸೇರುವುದು ಅಧಿಕ ವೇತನ


ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಎಷ್ಟು? :
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಕಾಮ್ಯಾಕ್ಸ್‌ನಲ್ಲಿ ಚಿನ್ನದ ಬೆಲೆ ಒಂದು ತಿಂಗಳ ದಾಖಲೆಯ ಮಟ್ಟವನ್ನು ತಲುಪಿದೆ. ಇಲ್ಲಿ ಬೆಳ್ಳಿ ಪ್ರತಿ ಔನ್ಸ್‌ಗೆ  24.5 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.


22 ಕ್ಯಾರೆಟ್ ಚಿನ್ನದ ದರ : 
ದೇಶದ ರಾಜಧಾನಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 55,350 ರೂ. ಚೆನ್ನೈನಲ್ಲಿ 55,450 ರೂ., ಕೋಲ್ಕತ್ತಾದಲ್ಲಿ 55,200 ರೂ. ಮತ್ತು ಮುಂಬೈನಲ್ಲಿ 10 ಗ್ರಾಂಗೆ 55,200 ರೂ. ಆಗಿದೆ. 


ಇದನ್ನೂ ಓದಿ : Success Story: ಕೇವಲ 70 ಸಾವಿರ ಹೂಡಿಕೆ ಮಾಡಿ, 20 ಲಕ್ಷ ರೂ.ಗಳಿಸಿದ ಈ ಯುವ ರೈತನ ಸಕ್ಸೆಸ್ ಸ್ಟೋರಿ ನೀವೂ ಓದಿ!


ಬೆಳ್ಳಿಯ ಬೆಲೆ ಎಷ್ಟು? :
ಇದಲ್ಲದೇ ಬೆಳ್ಳಿ ಬೆಲೆಯ ಬಗ್ಗೆ ಹೇಳುವುದಾದರೆ ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ 76,900 ರೂ. ಕೋಲ್ಕತ್ತಾದಲ್ಲಿ 76,900 ರೂ., ಚೆನ್ನೈನಲ್ಲಿ 80,000 ರೂ., ಮುಂಬೈನಲ್ಲಿ ಕೆಜಿಗೆ 76,900 ರೂ. ಆಗಿದೆ. 


ನಿಮ್ಮ ನಗರದ ದರವನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ತಿಳಿದುಕೊಳ್ಳಬಹುದು. ನೀವು ಯಾವ ನಂಬರ್ ನಿಂದ ಮಿಸ್ ಕಾಲ್ ಕೊಡುತ್ತಿರೋ ಅದೇ ಸಂಖ್ಯೆಗೆ  ನಿಮಗೆ ಚಿನ್ನದ ದರದ ಬಗ್ಗೆ  ಸಂದೇಶವನ್ನು ಕಳುಹಿಸಲಾಗುತ್ತದೆ. 


ಇದನ್ನೂ ಓದಿ : Car Sales In August 2023: ಆಗಸ್ಟ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 5 ಕಾರುಗಳು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.