ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕವು ಚಿನ್ನದ ಹೂಡಿಕೆದಾರರಿಗೆ ವರದಾನವಾಗಿ ಸಾಬೀತಾಗಿದೆ. ಸುರಕ್ಷಿತ ಹೂಡಿಕೆ ಎಂಬ ಕಾರಣಕ್ಕೆ ಚಿನ್ನದ ಹೂಡಿಕೆಯಲ್ಲಿ ಹಣದ ಸುರಿಮಳೆಯೇ ಆಗಿದೆ. ಈ ಅವಧಿಯಲ್ಲಿ  ಚಿನ್ನದ ಬೆಲೆ ಅದರ ದಾಖಲೆಯ ಮಟ್ಟವನ್ನು ತಲುಪಲು ಕಾರಣವಾಗಿದೆ. ಆದರೆ ಕ್ರಮೇಣ ಕರೋನಾ ಲಸಿಕೆಯ ಸುದ್ದಿ ಬರುತ್ತಿದ್ದಂತೆ ಚಿನ್ನದ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ರೂಪಾಯಿ ಮೌಲ್ಯ ಬಲವರ್ಧನೆ, ಷೇರುಮಾರುಕಟ್ಟೆಯಲ್ಲಿನ ಚೇತರಿಕೆಯಿಂದ ಹೂಡಿಕೆದಾರರು ಚಿನ್ನದ ಹೂಡಿಕೆಯಲ್ಲಿ ತಮ್ಮ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಚಿನ್ನದ ಬೆಲೆ ವೇಗವಾಗಿ ಇಳಿಕೆಯಾಗುತ್ತಿದೆ.  ಕಳೆದ ಮೂರು ವಾರಗಳಲ್ಲಿ ಚಿನ್ನದ ಬೆಲೆ 4000 ರೂ. ಇಳಿಕೆಯಾಗಿದೆ. ಇನ್ನೊಂದೆಡೆ ದಾಖಲೆಯ ಗರಿಷ್ಠ ಮಟ್ಟದಿಂದ, 10 ಗ್ರಾಂಗೆ  ಚಿನ್ನದ ಬೆಲೆ 8000 ರೂ.ಗಳಷ್ಟು ಕುಸಿದಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Gold-Silver ಬೆಲೆಯಲ್ಲಿ ಭಾರಿ ಕುಸಿತ... ಮದುವೆ ಸೀಜನ್ ನಲ್ಲಿ ಖರೀದಿಗೆ ಉತ್ತಮ ಅವಕಾಶ


ಪ್ರತಿ 10 ಗ್ರಾಂ.ಚಿನ್ನದ ಬೆಲೆ 42 ಸಾವಿರಕ್ಕೆ ಕುಸಿಯುವ ಸಾಧ್ಯತೆ
ಪ್ರಸ್ತುತ ಚಿನ್ನದ (gold rate) ಬೆಲೆ ಪುನಃ ವೇಗಪಡೆದುಕೊಳ್ಳುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ತಜ್ಞರು ಹೇಳುವ ಪ್ರಕಾರ ಫೆಬ್ರವರಿ 2021ರವರೆಗೆ ಪ್ರತಿ 10 ಗ್ರಾಂ. ಚಿನ್ನದ ಬೆಲೆ 42.000ಕ್ಕೆ ತಲುಪುವ ಸಾಧ್ಯತೆ ಇದೆ. ಇನ್ನೊಂದೆಡೆ ಬೆಳ್ಳಿಯ ಬೆಲೆಯಲ್ಲಿಯೂ ಕೂಡ ಭಾರಿ ಇಳಿಕೆಯನ್ನು ಗಮನಿಸಲಾಗಿದೆ. ಆಗಸ್ಟ್ 2020ರಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ.ಗೆ 56,200 ರೂ.ಗೆ ತಲುಪಿತ್ತು. ಇದು ಚಿನ್ನದ ಬೆಲೆಯ ಅತ್ಯಂತ ಗರಿಷ್ಠ ಮಟ್ಟವಾಗಿದೆ. ಕಳೆದ ಶುಕ್ರವಾರ ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 48,142 ಪ್ರತಿ 10 ಗ್ರಾಂ.ಗೆ ತಲುಪಿ ತನ್ನ ದಿನದ ವಹಿವಾಟು ಅಂತ್ಯಗೊಳಿಸಿತ್ತು. ಗರಿಷ್ಠಮಟ್ಟಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ರೂ.8.058 ರಷ್ಟು ಕುಸಿತ ಸಂಭವಿಸಿದೆ.


ಇದನ್ನು ಓದಿ- Gold Price Today: ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ


ವ್ಯಾಕ್ಸಿನ್ ಸುದ್ದಿಯ ಪ್ರಭಾವ
ಹಬ್ಬದ ಸೀಜನ್ ಬಳಿಕ ಇದೀಗ ವಿವಾಹದ ಸೀಸನ್ ಆರಂಭವಾಗಿದೆ. ವ್ಯಾಪಾರಿಗಳು ಬೆಲೆಗಳಲ್ಲಿ ಸ್ವಲ್ಪ ಸುಧಾರಣೆ ಕಾಣುವ ನಿರೀಕ್ಷೆಯಲ್ಲಿದ್ದಾರೆ. ಆದರೆ ಫೆಬ್ರವರಿ ವೇಳೆಗೆ ಚಿನ್ನದ ಬೆಲೆಗಳು ಗಮನಾರ್ಹವಾಗಿ ಕುಸಿಯಬಹುದು. ವಾಸ್ತವವಾಗಿ, ಕೇಂದ್ರ ಸರ್ಕಾರವು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಸುಮಾರು 40 ಕೋಟಿ ಡೋಸ್ ಕರೋನಾ ಲಸಿಕೆ ಖರೀದಿಸಲು ಮಾತುಕತೆ ನಡೆಸಿದೆ. ಅದೇ ಸಮಯದಲ್ಲಿ, ಶೀಘ್ರದಲ್ಲೇ ಇತರ ಕಂಪನಿಗಳು ಸಹ ಲಸಿಕೆ ತಯಾರಿಸುತ್ತಿವೆ ಎಂದು ನಿರೀಕ್ಷಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರುತ್ತದೆ ಮತ್ತು ಜನರು ಇತರ ಆಯ್ಕೆಗಳಲ್ಲಿ ಹೂಡಿಕೆ ಮಾಡಬಹುದು. 


ಇದನ್ನು ಓದಿ- ದಾಖಲೆಯ ಮಟ್ಟ ತಲುಪಿದ ಚಿನ್ನ, ಇತ್ತೀಚಿನ ದರದ ಬಗ್ಗೆ ಇಲ್ಲಿದೆ ಮಾಹಿತಿ


ಚಿನ್ನದ ಬೆಲೆಯಲ್ಲಿ ರಿವರ್ಸ್ ಗಿಯರ್ ಮುಂದುವರೆಯಲಿದೆ
ಕರೋನಾ ಲಸಿಕೆಯ ಕುರಿತಾದ ಸಕಾರಾತ್ಮಕ ಸುದ್ದಿಗಳಿಂದಾಗಿ ಚಿನ್ನದ ಬೆಲೆ ನಿರೀಕ್ಷೆಗಿಂತಲೂ ಕಡಿಮೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ -19 ಲಸಿಕೆಯತ್ತ ಪ್ರಗತಿ ಹೆಚ್ಚಾದಂತೆ, ವಿಶ್ವಾದ್ಯಂತ ಆರ್ಥಿಕ ಪರಿಸ್ಥಿತಿಗಳುಚೇತರಿಸಿಕೊಳ್ಳಲಿವೆ. ಹೂಡಿಕೆದಾರರು ಚಿನ್ನದಿಂದ ಬಂಡವಾಳವನ್ನು ಹಿಂತೆಗೆದುಕೊಳ್ಳುವ ಮೂಲಕ ಷೇರು ಮಾರುಕಟ್ಟೆಯಲ್ಲಿ ಅಥವಾ ಇತರ ಆಯ್ಕೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದು ಚಿನ್ನದ ಬೆಲೆಯಲ್ಲಿ ರಿವರ್ಸ್ ಗೇರ್ ಮುಂದುವರಿಕೆಗೆ ಕಾರಣವಾಗಲಿದೆ.