Gold Price Today: ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ

US ಡಾಲರ್ ಮೌಲ್ಯದಲ್ಲಿ ಇಳಿಕೆಯಾದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದರ ಪ್ರಭಾವ ದೇಸಿ ಮಾರುಕಟ್ಟೆಯ ಮೇಲೂ ಕೂಡ ಉಂಟಾಗಿದ್ದು, ದೇಸೀಯ ಮಾರುಕಟ್ಟೆಯಲ್ಲಿಯೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.

Last Updated : Sep 11, 2020, 10:18 AM IST
  • ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ.
  • ಚಿನ್ನ ಹೂಡಿಕೆದಾರರಲ್ಲಿ ಸಂತಸದ ಅಲೆ
  • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ದೌರ್ಬಲ್ಯವೆ ಇದಕ್ಕೆ ಕಾರಣ ಎನ್ನಲಾಗಿದೆ.
Gold Price Today: ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ title=

ನವದೆಹಲಿ: US ಡಾಲರ್ ಮೌಲ್ಯದಲ್ಲಿ ಇಳಿಕೆಯಾದ ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ(Gold Rate)ಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದರ ಪ್ರಭಾವ ದೇಸಿ ಮಾರುಕಟ್ಟೆಯ ಮೇಲೂ ಕೂಡ ಉಂಟಾಗಿದ್ದು, ದೇಸೀಯ ಮಾರುಕಟ್ಟೆಯಲ್ಲಿಯೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಗುರುವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಶೇ.99.9 ರಷ್ಟು ಶುದ್ಧ ಚಿನ್ನದ ಬೆಲೆ ರೂ.287 (ಪ್ರತಿ 10 ಗ್ರಾಂ.ಗೆ )ರಷ್ಟು ಏರಿಕೆಯಾಗಿದೆ. ಇನ್ನೊಂದೆಡೆ ಬೆಳ್ಳಿಯ ಬೆಲೆಯಲ್ಲಿಯೂ ಕೂಡ ಪ್ರತಿ ಕೆ.ಜಿಗೆ ರೂ.875ರಸ್ತು ಏರಿಕೆಯಾಗಿದೆ.

ಚಿನ್ನದ ನೂತನ ಬೆಲೆ
ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಸತತ ನಾಲ್ಕನೆಯ ದಿನವೂ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ . 99.9 ರಷ್ಟು 10 ಗ್ರಾಂ ಚಿನ್ನದ ಬೆಲೆ 52,104 ರೂ.ಗಳಿಂದ 52,391 ರೂ.ಗೆ ಏರಿದೆ. ಅಂದರೆ ಈ ಅವಧಿಯಲ್ಲಿ, ಹತ್ತು ಗ್ರಾಮ್ ಚಿನ್ನದ ಬೆಲೆ ರೂ.287 ಏರಿಕೆಯಾಗಿದೆ. . ಪ್ರಸ್ತುತ ಮಟ್ಟದಿಂದ ಚಿನ್ನವನ್ನು ತೀವ್ರವಾಗಿ ಮಾರಾಟವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಾಮೆಕ್ಸ್ ನಲ್ಲಿ ಚಿನ್ನವು 1900 ಡಾಲರ್ ಪ್ರತಿ ಔನ್ಸ್ ಗೆ ಇಳಿಕೆಯಾಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಭಾರತೀಯ ಉದ್ಯಮಿಗಳು ಚಿನ್ನದ ಬೆಲೆಯಲ್ಲಿ ಕುಸಿತದ ಮುನ್ಸೂಚನೆ ನೀಡುತ್ತಿದ್ದಾರೆ.

ಬೆಳ್ಳಿಯ ನೂತನ ಬೆಲೆ
ನಾಲ್ಕನೇ ದಿನವೂ ಕೂಡ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಒಂದು ಕಿಲೋಗ್ರಾಂ ಬೆಳ್ಳಿಯ ಬೆಲೆ 69,075 ರೂ.ಗಳಿಂದ  69,950 ರೂ.ಗೆ ಏರಿದೆ. ಅಂದರೆ ಈ ಅವಧಿಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ 875 ರೂ. ಏರಿಕೆಯಾಗಿದೆ.

Trending News