Gold-Silver ಬೆಲೆಯಲ್ಲಿ ಭಾರಿ ಕುಸಿತ... ಮದುವೆ ಸೀಜನ್ ನಲ್ಲಿ ಖರೀದಿಗೆ ಉತ್ತಮ ಅವಕಾಶ

ದೇಶಾದ್ಯಂತ ಇನ್ನೇನು ಕಾರ್ತಿಕ ಏಕಾದಶಿ, ತುಳಸಿ ಲಗ್ನ ಹಾಗೂ ವಿವಾಹ ಸೀಸನ್ ಆರಂಭಗೊಳ್ಳುತ್ತಿದೆ. ಅದಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.

Last Updated : Nov 24, 2020, 07:34 PM IST
  • ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ.
  • ಹೂಡಿಕೆದಾರರು ಮಾರಾಟ ಪ್ರಕ್ರಿಯೆ ಆರಂಭಿಸಿರುವುದೇ ಇದಕ್ಕೆ ಕಾರಣ.
  • ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ರೂ.1500 ರಷ್ಟು ಇಳಿಕೆ
Gold-Silver ಬೆಲೆಯಲ್ಲಿ ಭಾರಿ ಕುಸಿತ... ಮದುವೆ ಸೀಜನ್ ನಲ್ಲಿ ಖರೀದಿಗೆ ಉತ್ತಮ ಅವಕಾಶ title=

ನವದೆಹಲಿ: ದೇಶಾದ್ಯಂತ ಇನ್ನೇನು ಕಾರ್ತಿಕ ಏಕಾದಶಿ, ತುಳಸಿ ಲಗ್ನ ಹಾಗೂ ವಿವಾಹ ಸೀಸನ್ ಆರಂಭಗೊಳ್ಳುತ್ತಿದೆ. ಅದಕ್ಕೂ ಮುನ್ನವೇ ಮಾರುಕಟ್ಟೆಯಲ್ಲಿ ಮಂಗಳವಾರ ಚಿನ್ನ-ಬೆಳ್ಳಿ ಬೆಲೆಯಲ್ಲಿ (Gold-Silver Prices Today) ಭಾರಿ ಇಳಿಕೆಯಾಗಿದೆ. ನಿಮ್ಮ ಮನೆಯಲ್ಲಿಯೂ ಕೂಡ ಮದುವೆ ಸಮಾರಂಭ ಇದ್ದಾರೆ ಇದಕ್ಕಿಂತ ಉತ್ತಮ ಅವಕಾಶ ಬೇರೊಂದಿಲ್ಲ.  ಕೊರೊನಾ ವೈರಸ್ ವ್ಯಾಕ್ಸಿನ್ ನ ನಿರೀಕ್ಷೆಯ ನಡುವೆ ವಿಶ್ವಾದ್ಯಂತ ಹೂಡಿಕೆದಾರರು ಮಾರಾಟ ಪ್ರಕ್ರಿಯೆ ಆರಂಭಿಸಿದ್ದಾರೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರೂ.1500 ವರೆಗೆ ಇಳಿಕೆಯಾಗಿದೆ.

ಇದನ್ನು ಓದಿ- Gold Price Today: ಚಿನ್ನದಲ್ಲಿ ಹೂಡಿಕೆ ಮಾಡಿದವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ

ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಇದು
ಮಂಗಳವಾರ ನವೆಂಬರ್ 24ರಂದು ದೆಹಲಿ ಸರಾಫ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾ. ಚಿನ್ನದ ಬೆಲೆಯಲ್ಲಿ ರೂ.1049 ರಷ್ಟು ಇಳಿಕೆಯಾಗಿದೆ. ಇದೇ ವೇಳೆ ಬೆಳ್ಳಿಯ ಬೆಲೆಯೂ ಕೂಡ ಪ್ರತಿ ಕೆ.ಜಿಗೆ 1588 ರಷ್ಟು ಇಳಿಕೆಯಾಗಿದೆ. ಶೀಘ್ರವೇ ಮಾರುಕಟ್ಟೆಗೆ ಕೊರೊನಾ ವ್ಯಾಕ್ಸಿನ್ ಬರಲಿದೆ ಎಂಬ ಸುದ್ದಿಗಳ ಹಿನ್ನೆಲೆ ಚಿನ್ನದ ಬೆಲೆಗಳ ಮೇಲೆ ಒತ್ತಡ ಹೆಚ್ಚಾಗಿದೆ. ಇದಲ್ಲದೆ ಈ ತಿಂಗಳು ಗೋಲ್ಡ್ ETF ನ ಹೋಲ್ಡಿಂಗ್ ನಲ್ಲಿ 10 ಲಕ್ಷ ಔನ್ಸ್ ಕುಸಿತ ಗಮನಿಸಲಾಗಿದೆ.

ಇದನ್ನು ಓದಿ- ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯ ಮೇಲೆ ಹೂಡಿಕೆ ಮಾಡಿ

ರಾಷ್ಟ್ರರಾಜಧಾನಿಯಲ್ಲಿ ಪ್ರತಿ 10 ಗ್ರಾಂ. ಚಿನ್ನದ ಬೆಲೆ 1049 ರೂ. ಕುಸಿತದೊಂದಿಗೆ 48, 569ಕ್ಕೆ ತಲುಪಿದೆ. ಈ ಹಿಂದೆ ಪ್ರತಿ 10 ಗ್ರಾಂ. ಚಿನ್ನ 49,618  ರೂ.ಗೆ ತನ್ನ ವಹಿವಾಟು ಅಂತ್ಯಗೊಳಿಸಿತ್ತು. HDFC ಸಿಕ್ಯೋರಿಟಿ ಮೂಲಕ ನೀಡಲಾಗಿರುವ ಮಾಹಿತಿ ಪ್ರಕಾರ ದೆಹಲಿ ಸರಾಫ್ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಪ್ರತಿ ಕೆ.ಜಿಗೆ ರೂ.1588 ರಷ್ಟು ಕುಸಿದು 59,301 ರೂ.ಗೆ ಇಂದಿನದ ತನ್ನ ದಿನದ ವಹಿವಾಟು ಅಂತ್ಯಗೊಳಿಸಿದೆ. ಸೋಮವಾರ ಬೆಳ್ಳಿ ಪ್ರತಿ ಕೆ.ಜಿಗೆ 60,889 ರೂ.ಗೆ ತನ್ನ ವಹಿವಾಟು ಮುಕ್ತಾಯಗೊಳಿಸಿತ್ತು.

ಇದನ್ನು ಓದಿ- ಮದುವೆಗಾಗಿ ಚಿನ್ನ ಖರೀದಿಸಬೇಕೆ? ಮದುವೆ ಸೀಜನ್ ಗೆ ಸಂಬಂಧಿಸಿದ ಈ ಮಾಹಿತಿ ತಪ್ಪದೆ ಓದಿ

ಜಾಗತಿಕ ಮಾರುಕಟ್ಟೆಯಲ್ಲಿ ದರ ಎಷ್ಟು
ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 1830 ಡಾಲರ್ ರಷ್ಟಿತ್ತು. ಇನ್ನೊಂದೆಡೆ ಬೆಳ್ಳಿ ಬೆಲೆ ಪ್ರತಿ ಔನ್ಸ್ ಗೆ 23.42 ರಷ್ಟಿತ್ತು. ಈ ಕುರಿತು ಹೇಳಿಕೆ ನೀಡಿರುವ HDFC ಸಿಕ್ಯೋರಿಟಿಸ್ ವರಿಷ್ಠ ವಿಶ್ಲೇಷಕ (ಕಮೊಡಿಟಿ) ತಪನ್ ಪಟೇಲ್, ಹೆಚ್ಚಾದ ವ್ಯಾಕ್ಸಿನ್ ನಿರೀಕ್ಷೆಗಳು ಹಾಗೂ ಬಿಡೆನ್ ಅವರ ವೈಟ್ ಹೌಸ್ ಟ್ರಾನ್ಸಿಷನ್ ಕಾರಣ ಇಂದು ಬೆಳಗ್ಗೆಯೇ ಚಿನ್ನದ ಬೆಲೆ ಇಳಿಕೆಯಾಗಿದೆ ಎಂದಿದ್ದಾರೆ.

Trending News