ನವದೆಹಲಿ : ಈ ವಾರದ ಆರಂಭದಲ್ಲಿ ಭಾರತದಲ್ಲಿ ಚಿನ್ನದ ಬೆಲೆ ಕಳೆದ ಐದು ತಿಂಗಳಲ್ಲಿ ಕಡಿಮೆ ಆಗಿತ್ತು. ಅಂದರೆ ಬೆಲೆ 46,000 ರಿಂದ 46,500 ರೂ. ಇದು ಇಡೀ ವಾರದಲ್ಲಿ ಸಾರ್ವಕಾಲಿಕಕ್ಕಿಂತ  ಸುಮಾರು 10,000 ರೂ. ಇಳಿಕೆಗೆ ಕಾರಣವಾಗಿತ್ತು. ಈ ತಿಂಗಳಲ್ಲಿ ಇಲ್ಲಿಯವರೆಗೆ  ಚಿನ್ನದ ಬೆಲೆ 2,100 ರೂ.ಇಳಿಕೆ ಆಗಿತ್ತು.


COMMERCIAL BREAK
SCROLL TO CONTINUE READING

ಈ ವರ್ಷ ಏಪ್ರಿಲ್-ಜೂನ್ ತಿಂಗಳಲ್ಲಿ ಚಿನ್ನದ ಬೇಡಿಕೆಯು 19.2% ರಿಂದ 76.1 ಟನ್‌ಗಳಿಗೆ ಏರಿತು ಮತ್ತು ಕಡಿಮೆ ಚಿನ್ನ(Gold)ದ ಪರಿಣಾಮದಿಂದಾಗಿ ಇದು ಸಂಭವಿಸಿದೆ ಎಂದು ವಿಶ್ವ ಚಿನ್ನದ ಮಂಡಳಿ (WGC) ವರದಿ ಮಾಡಿದೆ. ಚಿನ್ನದ ಬೇಡಿಕೆಯು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 32,810 ಕೋಟಿಯಲ್ಲಿ 23% ಬೆಳವಣಿಗೆಯನ್ನು ಕಂಡಿದೆ.


ಇದನ್ನೂ ಓದಿ : Indian Railways: ನಿಮ್ಮ ರೈಲ್ವೆ ಟಿಕೆಟಿನಲ್ಲಿ ಬೇರೆ ವ್ಯಕ್ತಿಯೂ ಪ್ರಯಾಣಿಸಬಹುದೇ! ರೈಲ್ವೆಯ ಈ ಸೌಲಭ್ಯ ತಿಳಿಯಿರಿ


22 ಕ್ಯಾರೆಟ್ ಚಿನ್ನದ ಬೆಲೆ(Gold Rate) 10 ಗ್ರಾಂಗೆ 46,310 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ  .47,310 ರೂ. ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,300 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 50,510 ರೂ. ಇದೆ.


ಮುಂಬೈನಲ್ಲಿ, 22 ಕ್ಯಾರೆಟ್ ಚಿನ್ನದ ಬೆಲೆ(24 Carat Gold Rate) ಪ್ರತಿ 10 ಗ್ರಾಂಗೆ 46,310 ರೂ. ಆದರೆ 24 ಕ್ಯಾರೆಟ್ ಚಿನ್ನದ ಬೆಲೆ 47,310 ರೂ. ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 44,350 ರೂ. ಮತ್ತು 48,380 ರೂ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 44,000 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 48,000 ರೂ. ಇದೆ.


ಇದನ್ನೂ ಓದಿ : Kawasaki Vulcan S 2022 ಕ್ರೂಸರ್ ಬೈಕ್ ಭಾರತದಲ್ಲಿ ಬಿಡುಗಡೆ, ಇಲ್ಲಿವೆ ವೈಶಿಷ್ಟ್ಯಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.