Gold Price Today : ಕರೋನಾಸುರನ ಆರ್ಭಟದ ನಡುವೆಯೂ ಬಂದಿದೆ ಚಿನ್ನದಂಥ ಸುದ್ದಿ
ವಾಯಿದಾ ಮಾರುಕಟ್ಟೆಯಲ್ಲಿ ಜೂನ್ ತಿಂಗಳ ಚಿನ್ನದ ಬೆಲೆ ಧಾರಣೆಯಲ್ಲಿ ಬಹಳಷ್ಟು ಏರಿಳಿತ ದಾಖಲಾಗಿದೆ. ಸೋಮವಾರ ಇಂಟ್ರಾ ಡೇಯ ವಹಿವಾಟಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 47650 ರಿಂದ 47,250ಕ್ಕೆ ಇಳಿದಿದೆ.
ಮುಂಬಯಿ : ಕರೋನಾ ರಕ್ಕಸನ ಅಟ್ಟಹಾಸದ ನಡುವೆಯೂ, ಚಿನಿವಾರ ಪೇಟೆಯಿಂದ ಚಿನ್ನದಂಥ ಸುದ್ದಿ ಬಂದಿದೆ. ಬಂಗಾರದ ಬೆಲೆಯಲ್ಲಿ (Gold Rate) ಮತ್ತೆ ಕುಸಿತ ದಾಖಲಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಚಿನ್ನದ ಬೆಲೆಯಲ್ಲಿ ಸರಿಸುಮಾರು 450 ರೂಪಾಯಿ ಕಡಿಮೆಯಾಗಿದೆ.
ಚಿನ್ನದ ವಾಯಿದಾ ಮಾರುಕಟ್ಟೆಯ ಟ್ರೆಂಡ್ :
ನೆನಪಿರಲಿ.. ಚಿನ್ನದ ವಾಯಿದಾ ಮಾರುಕಟ್ಟೆಯೆಂದರೆ ಚಿನ್ನದ ಫ್ಯೂಚರ್ ಟ್ರೇಡಿಂಗ್. ಇಲ್ಲಿ ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ವಸ್ತುಗಳ ಧಾರಣೆ ನಿರ್ಧಾರಿತವಾಗುತ್ತದೆ. ವಾಯಿದಾ ಮಾರುಕಟ್ಟೆಯಲ್ಲಿ ಜೂನ್ ತಿಂಗಳ ಚಿನ್ನದ ಬೆಲೆ ಧಾರಣೆಯಲ್ಲಿ ಬಹಳಷ್ಟು ಏರಿಳಿತ ದಾಖಲಾಗಿದೆ. ಸೋಮವಾರ ಇಂಟ್ರಾ ಡೇಯ ವಹಿವಾಟಿನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 47650 ರಿಂದ 47,250ಕ್ಕೆ ಇಳಿದಿದೆ. ಚಿನ್ನದ ವಾಯಿದಾ ಮಾರುಕಟ್ಟೆ ಅಂದರೆ MCX ಟ್ರೇಡಿಂಗ್ ನಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 47420 ರ ಅಜೂಬಾಜಿನಲ್ಲಿದೆ. ಅಂದರೆ ಈ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ (Gold rate) ಸುಮಾರು 2800 ರೂಪಾಯಿ ಏರಿಕೆ ದಾಖಲಾಗಿದೆ.
ಇದನ್ನೂ ಓದಿ : PPF ಗಿಂತ VPF ನಲ್ಲಿ ಹೂಡಿಕೆಗೆ ಯಾವುದು ಉತ್ತಮ? ಇಲ್ಲಿದೆ ನೋಡಿ
ಸುಮಾರು ಹತ್ತು ಸಾವಿರ ರೂಪಾಯಿ ಕುಸಿದ ಚಿನ್ನ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ಚಿನ್ನದ ಬೆಲೆಯಲ್ಲಿ ಹೆಚ್ಚುಕಡಿಮೆ 10ಸಾವಿರ ರೂಪಾಯಿ ಕಡಿಮೆಯಾಗಿದೆ. ಹೋದ ವರ್ಷ ಕರೋನಾ (Coroanvirus) ಆಕ್ರಮಣ ಗೈದಾಗ ಹೂಡಿಕೆದಾರರು ಭರ್ಜರಿಯಲ್ಲಿ ಚಿನ್ನದ ಮೇಲೆ ಹೂಡಿಕೆ (Investment) ಮಾಡಿದ್ದರು. ಹಾಗಾಗಿ ಚಿನ್ನದ ಧಾರಣೆ ಹತ್ತು ಗ್ರಾಮಿಗೆ 56 ಸಾವಿರದ ತನಕ ಏರಿಕೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ಕುಸಿದ ಚಿನ್ನ ಸುಮಾರು 46 ಸಾವಿರದ ತನಕ ಹೋಗಿತ್ತು. ಇದೀಗ ಸ್ವಲ್ಪ ಚೇತರಿಸಿಕೊಂಡಿರುವ ಬಂಗಾರ, ಸ್ವಲ್ಪ ಏರಿಕೆಯ ನಡೆ ದಾಖಲಿಸಿದೆ.
ಇದನ್ನೂ ಓದಿ : NPS : ಸರ್ಕಾರದ ಈ ಯೋಜನೆಯಲ್ಲಿ ಪ್ರತಿದಿನ ₹ 74 ಹೂಡಿಕೆ ಮಾಡಿ ನಿವೃತ್ತಿ ನಂತ್ರ ಪಡೆಯಿರಿ ₹ 1 ಕೋಟಿ! ಹೇಗೆ ಇಲ್ಲಿದೆ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.