ಬೆಂಗಳೂರು : Gold Price Today : ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಇನ್ನೂ ಮುಂದುವರೆದಿದೆ. ಇಂದು ಬಹು ಸರಕು ವಿನಿಮಯ ಕೇಂದ್ರದಲ್ಲಿ (MCX) ಚಿನ್ನದ ಬೆಲೆ 48 ರೂ.ಗಳಷ್ಟು ಕಡಿಮೆಯಾಗಿದೆ (Gold rate today). ಈ ಕುಸಿತದೊಂದಿಗೆ, ಇಂದು ಬೆಳಿಗ್ಗೆ ಚಿನ್ನದ ಬೆಲೆ 51485 ರೂ.  ಆಗಿದೆ. ಆದರೆ ಇಂದು ಬೆಳ್ಳಿ ಬೆಲೆಯಲ್ಲಿ 5 ರೂ.ಗಳಷ್ಟು ಏರಿಕೆ ದಾಖಲಾಗಿದೆ. 


COMMERCIAL BREAK
SCROLL TO CONTINUE READING

ಮಾರ್ಚ್ ಎರಡನೇ ವಾರದಲ್ಲಿ 10 ಗ್ರಾಂ ಚಿನ್ನ 55,600 ರೂ. ತಲುಪಿತ್ತು. ಅದರಂತೆ, ಒಂದು ತಿಂಗಳ ದಾಖಲೆಯ ಗರಿಷ್ಠ ಮಟ್ಟದಿಂದ ಚಿನ್ನ 4,115 ರೂ.ಗಳಷ್ಟು ಅಗ್ಗವಾಗುತ್ತಿದೆ.  


ಇದನ್ನೂ ಓದಿ : PM Free Silai Machine Yojana: ಸರ್ಕಾರದಿಂದ ಉಚಿತವಾಗಿ ಹೊಲಿಗೆ ಯಂತ್ರ ಪಡೆಯಲು ಇಲ್ಲಿದೆ ಸುಲಭ ಮಾರ್ಗ


ಬುಲಿಯನ್ ಮಾರುಕಟ್ಟೆಯಲ್ಲಿ ವಾತಾವರಣ ಹೇಗಿದೆ?
ಇದರೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಕುಸಿತ ಕಾಣುತ್ತಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಕುಸಿತ ಕಂಡಿದ್ದು,  48189 ರೂ. ಆಗಿದೆ (Gold Price today). ಅದೇ ಸಮಯದಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ 52570 ರೂ. ಆಗಿದೆ. ಇದಲ್ಲದೇ 20ಕ್ಯಾರೆಟ್ ಚಿನ್ನದ ಸರಾಸರಿ ಬೆಲೆ 43808 ರೂ. ಆಗಿರುತ್ತದೆ. ಇದರೊಂದಿಗೆ 18 ಕ್ಯಾರೆಟ್ ಬೆಲೆ 39428 ರೂ.ಗೆ ತಲುಪಿದೆ. 14 ಕ್ಯಾರೆಟ್ ಚಿನ್ನದ ದರ ಕೇವಲ 30666 ರೂ.ಗೆ ಇಳಿದಿದೆ. 


ಚಿನ್ನ ಮತ್ತು ಬೆಳ್ಳಿ ಖರೀದಿಸಲು ಉತ್ತಮ ಸಮಯ :
ನೀವು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ಉತ್ತಮ ಸಮಯವಾಗಿದೆ.  ರಷ್ಯಾ-ಉಕ್ರೇನ್ ಯುದ್ಧದಿಂದಾಗಿ (Russia Ukraine war), ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರ ಕುಸಿತದ ವಾತಾವರಣವಿದೆ. ಆದರೆ,  ಈ ಮಧ್ಯೆ, ಮಾರುಕಟ್ಟೆಯ ಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ.


ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ.! DAಯಲ್ಲಿ ಮತ್ತೆ ಗಹೆಚ್ಚಳ , ಎಷ್ಟಾಗಲಿದೆ ವೇತನ ?


ನಿಮ್ಮ ನಗರದಲ್ಲಿನ ಚಿನ್ನದ ಬೆಲೆಯನ್ನು ಈ ರೀತಿ ಪರಿಶೀಲಿಸಬಹುದು :
ಅಬಕಾರಿ ಸುಂಕ, ರಾಜ್ಯ ತೆರಿಗೆ ಮತ್ತು ಮೇಕಿಂಗ್ ಚಾರ್ಜ್‌ನ ಪಾಲನ್ನು ಹೊಂದಿರುವುದರಿಂದ ಚಿನ್ನದ ಆಭರಣಗಳ ಬೆಲೆ ದೇಶಾದ್ಯಂತ ಬದಲಾಗುತ್ತದೆ. ನಿಮ್ಮ ನಗರದಲ್ಲಿ ಚಿನ್ನದ ಬೆಲೆಯನ್ನು ಪರಿಶೀಲಿಸಲು ನೀವು ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(IBJA) ಸಹಾಯವನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು. ಮಿಸ್ಡ್ ಕಾಲ್ ನೀಡಿದ ಕೂಡಲೇ ನಿಮ್ಮ ಮೊಬೈಲ್ ಗೆ ಇತ್ತೀಚಿನ ಚಿನ್ನದ ದರದ ಸಂದೇಶ ಬರುತ್ತದೆ.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.