7th Pay Commission: ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ.! DAಯಲ್ಲಿ ಮತ್ತೆ ಗಹೆಚ್ಚಳ , ಎಷ್ಟಾಗಲಿದೆ ವೇತನ ?

 ಬಿಹಾರದ ನಿತೀಶ್ ಸರ್ಕಾರವು,  ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು 31 ಶೇ ದಿಂದ 34 ರಷ್ಟು ಹೆಚ್ಚಿಸಿದೆ.  ಕೇಂದ್ರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ದೊರೆತಿದೆ.

Written by - Ranjitha R K | Last Updated : Apr 5, 2022, 10:37 AM IST
  • ರಾಜ್ಯ ಸರಕಾರಿ ನೌಕರರಿಗೊಂದು ಸಂತಸದ ಸುದ್ದಿ.
  • ನೌಕರರ ಡಿಎ ಮತ್ತೊಮ್ಮೆ ಏರಿಕೆಯಾಗಿದೆ.
  • ಬಿಹಾರ ಸರ್ಕಾರದಿಂದ ನೌಕರರಿಗೆ ಭರ್ಜರಿ ಸುದ್ದಿ
7th Pay Commission: ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ.! DAಯಲ್ಲಿ ಮತ್ತೆ ಗಹೆಚ್ಚಳ , ಎಷ್ಟಾಗಲಿದೆ ವೇತನ ? title=
7th pay commission (file photo)

ನವದೆಹಲಿ :  7th Pay Commission: ರಾಜ್ಯ ಸರಕಾರಿ ನೌಕರರಿಗೊಂದು ಸಂತಸದ ಸುದ್ದಿ. ನೌಕರರ ಡಿಎ (DA) ಮತ್ತೊಮ್ಮೆ ಏರಿಕೆಯಾಗಿದೆ. ಉದ್ಯೋಗಿಗಳು ಜನವರಿ 1, 2022 ರಿಂದ ಈ ಹೆಚ್ಚಿದ ಭತ್ಯೆಯ ಲಾಭವನ್ನು ಪಡೆಯಲಿದ್ದಾರೆ.  ಹಣಕಾಸು ಇಲಾಖೆಯ ಈ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ರಾಜ್ಯದ ನೌಕರರ ಡಿಎ ಕೂಡ ಕೇಂದ್ರ ನೌಕರರ ಡಿಎಗೆ ಸಮನಾಗಲಿದೆ. 

ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ :
ಬಿಹಾರದ ನಿತೀಶ್ ಸರ್ಕಾರವು (Bihar Government)  ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (DA) 31 ಶೇ ದಿಂದ 34 ರಷ್ಟು ಹೆಚ್ಚಿಸಿದೆ.  ಕೇಂದ್ರ ಸಚಿವ ಸಂಪುಟದಲ್ಲಿ ಹಣಕಾಸು ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ದೊರೆತಿದೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯ ಸರ್ಕಾರದ ಮೇಲೆ ವಾರ್ಷಿಕ 1133 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಇದರೊಂದಿಗೆ, ಬಿಹಾರ ಆಕಸ್ಮಿಕ ನಿಧಿಯ ಮಿತಿಯನ್ನು ತಾತ್ಕಾಲಿಕವಾಗಿ 350 ಕೋಟಿಗಳಿಂದ 9500 ಕೋಟಿಗಳಿಗೆ ಮಾರ್ಚ್ 30 ರವರೆಗೆ ಹೆಚ್ಚಿಸಲಾಗಿದೆ. 

ಇದನ್ನೂ ಓದಿ : ಕರೋನಾ ಕಾಲದಲ್ಲಿ ನಿಲ್ಲಿಸಿದ್ದ ಈ ಸೇವೆಗಳನ್ನು ಮತ್ತೆ ಆರಂಭಿಸಿದ ಭಾರತೀಯ ರೈಲ್ವೆ

ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ :
ಸಭೆಯಲ್ಲಿ ಕೈಗಾರಿಕೆಗಳಿಗೆ ಸಮಂಜಸವಾದ ಬೆಲೆಯಲ್ಲಿ ಕಲ್ಲಿದ್ದಲು ಒದಗಿಸುವ ನಾಮನಿರ್ದೇಶಿತ ಏಜೆನ್ಸಿಗೆ ಮೂರು ವರ್ಷಗಳ ವಿಸ್ತರಣೆಯನ್ನು ನೀಡಲಾಗಿದೆ. ಇದೇ ವೇಳೆ ಅಗ್ನಿಶಾಮಕ ವಾಹನಗಳ ಖರೀದಿಗೆ 43 ಕೋಟಿಗೆ ಅನುಮೋದನೆ ನೀಡಲಾಗಿದೆ. ಇದಲ್ಲದೆ, ಮುಂಬೈ ಮೂಲದ ಹೂಡಿಕೆ ಆಯುಕ್ತರ ಕಚೇರಿಗೆ 2022-23ರ ಆರ್ಥಿಕ ವರ್ಷದಲ್ಲಿ ಮೂರು ಕೋಟಿ 23 ಲಕ್ಷ ಅನುಮೋದನೆ ನೀಡಲಾಗಿದೆ.

14 ಕಾರ್ಯಸೂಚಿಗಳನ್ನು ಮುದ್ರೆಯೊತ್ತಲಾಗಿದೆ :
ಬಿಹಾರ ಸಂಪುಟ ಸಭೆಯಲ್ಲಿ (Bihar Cabinet) ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸಭೆಯಲ್ಲಿ ಒಟ್ಟು 14 ಅಜೆಂಡಾಗಳಿಗೆ ಮುದ್ರೆ ಹಾಕಲಾಗಿದೆ. ಹೊಸ ಅಬಕಾರಿ ನೀತಿಯನ್ನು ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. ಅದೇ ವೇಳೆ, ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರವನ್ನೂ ತೆರಿಗೆ ಮುಕ್ತಗೊಳಿಸಲಾಗಿದೆ. 

ಇದನ್ನೂ ಓದಿ : Mahindra: ಹೊಸ ಎಲೆಕ್ಟ್ರಿಕ್ ಆಲ್ಫಾ ಸಿಎನ್‌ಜಿ ಆಟೋ ಬಿಡುಗಡೆ ಮಾಡಿದ ಮಹೀಂದ್ರಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News