Gold price today : ಅಗ್ಗವಾಯಿತು ಬಂಗಾರ ! 10 ಗ್ರಾಂ ಚಿನ್ನದ ಬೆಲೆ ತಿಳಿಯಿರಿ

ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಮದುವೆಗೆ ಆಭರಣಗಳನ್ನು ಖರೀದಿಸಲು ಯೋಜಿಸುವ ಜನರಿಗೆ ಈ ಸಮಯವು ಪ್ರಯೋಜನಕಾರಿಯಾಗಿದೆ.

Written by - Ranjitha R K | Last Updated : Mar 31, 2022, 03:14 PM IST
  • ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ
  • ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಕುಸಿತ
  • ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ
Gold price today : ಅಗ್ಗವಾಯಿತು ಬಂಗಾರ !  10 ಗ್ರಾಂ ಚಿನ್ನದ ಬೆಲೆ ತಿಳಿಯಿರಿ title=
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ (file photo)

Gold price today : ಮದುವೆಯ ಸೀಸನ್ ಪ್ರಾರಂಭವಾಗಲಿದ್ದು, ಈ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಯ ಬಗ್ಗೆ ಒಳ್ಳೆಯ ಸುದ್ದಿ ಕೇಳಿ ಬರುತ್ತಿದೆ (Gold Price today). ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಮದುವೆಗೆ ಆಭರಣಗಳನ್ನು ಖರೀದಿಸಲು ಯೋಜಿಸುವ ಜನರಿಗೆ ಈ ಸಮಯವು ಪ್ರಯೋಜನಕಾರಿಯಾಗಿದೆ.  ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತದಿಂದಾಗಿ, ಗುರುವಾರ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ (Gold and Silver price). 

51 ಸಾವಿರ ರೂಪಾಯಿಗಿಂತ ಕಡಿಮೆಯಾಯಿತು ಚಿನ್ನದ ಬೆಲೆ :  
ಮಲ್ಟಿಕಮೊಡಿಟಿ ಎಕ್ಸ್‌ಚೇಂಜ್ (MCX) ಪ್ರಕಾರ, 24 ಕ್ಯಾರೆಟ್ ನ ವಾಯಿದಾ ಬೆಲೆಯು  47 ರೂ.ಯಷ್ಟು ಕಡಿಮೆಯಾಗಿದೆ (Gold future trading). ಈ ಹಿನ್ನೆಲೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 50,906 ರೂ.ಗೆ ಇಳಿದಿದೆ. ಈ ರೀತಿಯಾಗಿ, ಚಿನ್ನವು ತನ್ನ ದಾಖಲೆಯ ಮಟ್ಟಕ್ಕಿಂತ 10 ಗ್ರಾಂಗೆ ಸುಮಾರು 4,700 ರೂ.ಯಷ್ಟು ಇಳಿಕೆಯಾಗಿದೆ. 

ಇದನ್ನೂ ಓದಿ : ಟೋಲ್ ತೆರಿಗೆಯಲ್ಲಿ 10-15% ಹೆಚ್ಚಳ ; ಇಂದು ರಾತ್ರಿಯಿಂದ ಹೆದ್ದಾರಿ ಚಾಲನೆ ದುಬಾರಿ

ಬೆಳ್ಳಿಯ ಬೆಲೆಯಲ್ಲಿಯೂ  ಇಳಿಕೆ :  
ಮತ್ತೊಂದೆಡೆ, ಬೆಳ್ಳಿಯ ಬೆಲೆಗಳ ಬಗ್ಗೆ ಹೇಳುವುದಾದರೆ,  ಎಂಸಿಎಕ್ಸ್‌ನಲ್ಲಿ ಬೆಳ್ಳಿ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ (Silver rate).  ಪತ್ರಿ ಕೆ.ಜಿ ಬೆಳ್ಳಿಯ ಬೆಲೆ 537 ರೂಪಾಯಿ ಇಳಿಕೆಯಾಗಿ 66,869 ರೂಪಾಯಿಗಳಿಗೆ ತಲುಪಿದೆ. 

ಇನ್ನೂ ಕಡಿಮೆಯಾಗಬಹುದು ಚಿನ್ನದ ಬೆಲೆ : 
ಬೆಲೆ ಕುಸಿತದ ನಡುವೆ, ರಷ್ಯಾ ಮತ್ತು ಉಕ್ರೇನ್ ನಡುವಿನ ನಡೆಯುತ್ತಿರುವ ಯುದ್ಧದ ನಂತರ ಚಿನ್ನದ ಬೆಲೆಗಳು ಮತ್ತಷ್ಟು ಕಡಿಮೆಯಾಗಬಹುದು ಎಂದು ತಜ್ಞರು ಹೇಳುತ್ತಾರೆ (Russia Ukraine war). ಈ ಹಿಂದೆ ಕರೋನಾ ಸಾಂಕ್ರಾಮಿಕ (Coronavirus) ಸಮಯದಲ್ಲಿ, ಚಿನ್ನದ ಬೆಲೆ ತನ್ನ ದಾಖಲೆಯ ಮಟ್ಟವನ್ನು ತಲುಪಿತ್ತು. 

ಇದನ್ನೂ ಓದಿ :  Harley-Davidson 338R: ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್ ನೀಡಲಿದೆ Harley-Davidson's ಅಗ್ಗದ ಬೈಕ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News