Gold Price Today: ಚಿನ್ನದ ಬೆಲೆಗೆ ಸಂಬಂಧಿಸಿದಂತೆ ಒಂದು ಗುಡ್ ನ್ಯೂಸ್, 2200 ರೂ.ಗಳಷ್ಟು ಅಗ್ಗವಾಯ್ತು ತೊಲೆ ಚಿನ್ನ!
Gold Rate Today: ಚಿನ್ನದ ಬೆಲೆ ಅಂತಿಮವಾಗಿ ಮತ್ತೊಮ್ಮೆ 56,600 ರ ಶ್ರೇಣಿಗೆ ಮರಳಿದೆ. ಗೋಲ್ಡ್ ಫ್ಯೂಚರ್ ಈ ವಾರದ ಭವಿಷ್ಯದ ಮಾರುಕಟ್ಟೆಯಲ್ಲಿ ನಿರಂತರ ಒತ್ತಡವನ್ನು ಎದುರಿಸಿದೆ ಮತ್ತು ಶುಕ್ರವಾರ ತೀವ್ರ ಕುಸಿತ ಅನುಭವಿಸಿದೆ.
Gold Silver Rates: ಕಳೆದ ಹಲವು ವಾರಗಳಿಂದ ಗಗನ ಮುಖಿಯಾಗಿದ್ದ ಚಿನ್ನದ ಬೆಲೆ, ಅಂತಿಮವಾಗಿ 56,600 ರ ಶ್ರೇಣಿಗೆ ಮರಳಿದೆ. ಗೋಲ್ಡ್ ಫ್ಯೂಚರ್ ಈ ವಾರದ ಫ್ಯೂಚರ್ ಮಾರುಕಟ್ಟೆಯಲ್ಲಿ ನಿರಂತರ ಒತ್ತಡವನ್ನು ಅನುಭವಿಸಿದೆ ಮತ್ತು ಶುಕ್ರವಾರ ತೀವ್ರ ಕುಸಿತ ಕಂಡಿದೆ. ಇಂದು ಬೆಳಗ್ಗೆ ಮಲ್ಟಿ-ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ ಗೋಲ್ಡ್ ಫ್ಯೂಚರ್ (MCX ಗೋಲ್ಡ್) ರೂ 215 ಅಥವಾ 0.38% ರಷ್ಟು ಕುಸಿದು ರೂ 56,637 ಕ್ಕೆ ತಲುಪಿದೆ. ಹಿಂದಿನ ಅವಧಿಯಲ್ಲಿ ಇದು 56,852 ರೂ. ಗಳಷ್ಟಿತ್ತು. ನಿನ್ನೆಯ ಚಿನ್ನದ ಬೆಲೆಯನ್ನು ಗಮನಿಸಿದರೆ, ಅದು 57,200ರ ಆಸುಪಾಸಿನಲ್ಲಿ ತೆರೆದುಕೊಂಡಿತ್ತು. ಅಂದರೆ, ಒಂದು ದಿನದಲ್ಲಿ ಓಪನಿಂಗ್ ನಲ್ಲಿ 600 ರೂಪಾಯಿ ವ್ಯತ್ಯಾಸ ಉಂಟಾಗಿದೆ. ಇದೇ ವೇಳೆ ಇದನ್ನು ಚಿನ್ನದ ದಾಖಲೆಯ ಗರಿಷ್ಠ ಬೆಳೆಯಾಗಿರುವ ರೂ.57,800ಕ್ಕೆ ಹೋಲಿಸಿದರೆ, ಅದು 2,200 ರೂ.ಗಳಷ್ಟು ಅಗ್ಗವಾಗಿದೆ. ಇನ್ನೊಂದೆಡೆ ನಾವು ಸಿಲ್ವರ್ ಫ್ಯೂಚರ್ ಮಟ್ಟವನ್ನು ಗಮನಿಸಿದರೆ, ಅದೂ ಕೂಡ ಮತ್ತಷ್ಟು ಕುಸಿದಿದೆ. ಸಿಲ್ವರ್ ಫ್ಯೂಚರ್ 66,400 ಮಟ್ಟದಲ್ಲಿ MCX ನಲ್ಲಿ 630 ಅಥವಾ 0.94% ನಷ್ಟು ದೊಡ್ಡ ಕುಸಿತದೊಂದಿಗೆ ತೆರೆದುಕೊಂಡಿದೆ. ಹಿಂದಿನ ಅವಧಿಯಲ್ಲಿ ಅದು ರೂ.67,030 ಗಳಷ್ಟಿತ್ತು.
ಸರಾಫ್ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಮೇಲೆ ಒತ್ತಡ
ಗುರುವಾರ, ರಾಷ್ಟ್ರ ರಾಜಧಾನಿಯ ಸರಾಫ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 35 ರೂಪಾಯಿಗಳಷ್ಟು ಏರಿಕೆಯಾಗಿ 57,410 ರೂಪಾಯಿಗಳಿಗೆ ತಲುಪಿದೆ. ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಮಾಹಿತಿಯನ್ನು ನೀಡಿದೆ. ಕಳೆದ ವಹಿವಾಟಿನಲ್ಲಿ ಪ್ರತಿ 10 ಗ್ರಾಂ ಚಿನ್ನ 57,375 ರೂ.ಗಳಷ್ಟಿತ್ತು. ಆದರೆ, ಬೆಳ್ಳಿ ಬೆಲೆಯಲ್ಲಿ 5 ರೂಪಾಯಿ ಇಳಿಕೆಯಾಗಿ ಪ್ರತಿ ಕೆಜಿಗೆ 67,941 ರೂಪಾಯಿಗಳಿಗೆ ತಲುಪಿದೆ. ಈ ಕುರಿತು ಮಾತನಾಡಿರುವ ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವಿಸಸ್‌ನ ಕಮಾಡಿಟಿ ರಿಸರ್ಚ್‌ನ ಹಿರಿಯ ಉಪಾಧ್ಯಕ್ಷ ನವನೀತ್ ದಮಾನಿ, “ಫೆಡರಲ್ ರಿಸರ್ವ್ ಅಧಿಕಾರಿಗಳಿಂದ ವಿತ್ತೀಯ ನೀತಿಯ ಮೇಲೆ ಆಕ್ರಮಣಕಾರಿ ಸಂಕೇತಗಳ ಮಧ್ಯೆ ಚಿನ್ನವು ಶ್ರೇಣಿಯ ಸ್ಥಿರತೆಯೊಂದಿಗೆ ವಹಿವಾಟು ನಡೆಸುತ್ತಿದೆ. ಆಶ್ಚರ್ಯಕರ US ಉದ್ಯೋಗಗಳ ದತ್ತಾಂಶದ ನಂತರ, ಮುಂದಿನ ವಾರದಲ್ಲಿ ಜನವರಿಯ US ಗ್ರಾಹಕ ಬೆಲೆ ಸೂಚ್ಯಂಕ ಹಣದುಬ್ಬರ (CPI ಹಣದುಬ್ಬರ) ದತ್ತಾಂಶದ ಮೇಲೆ ಈಗ ಗಮನ ಹರಿಸಲಾಗುವುದು" ಎಂದು ಹೇಳಿದ್ದಾರೆ.
IBJA ನಲ್ಲಿ ಚಿನ್ನ-ಬೆಳ್ಳಿ ಬೆಲೆ
ನಾವು IBJA (ಇಂಡಿಯಾ ಬುಲಿಯನ್ ಮತ್ತು ಜ್ಯುವೆಲರ್ಸ್ ಅಸೋಸಿಯೇಟನ್ ಲಿಮಿಟೆಡ್) ನಲ್ಲಿ ವಿವಿಧ ಕ್ಯಾರೆಟ್‌ಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರವನ್ನು ಗಮನಿಸಿದರೆ, ಚಿನ್ನಾಭರಣಗಳ ಚಿಲ್ಲರೆ ಮಾರಾಟದ ದರವು ಈ ಕೆಳಗಿನಂತಿದೆ. ಈ ಚಿನ್ನದ ದರಗಳು ಪ್ರತಿ 1 ಗ್ರಾಂ ದರಗಲಾಗಿವೆ (GST ಮತ್ತು ಮೇಕಿಂಗ್ ಶುಲ್ಕಗಳನ್ನು ಅವುಗಳಿಗೆ ಸೇರಿಸಲಾಗಿಲ್ಲ)
ಇದನ್ನೂ ಓದಿ-Good News: ಕೇವಲ 4 ವರ್ಷಗಳಲ್ಲಿ 40 ಲಕ್ಷ ಗಳಿಕೆಗೆ ಕೇಂದ್ರ ಸರ್ಕಾರ ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಕೋಬೇಡಿ!
- ಉತ್ತಮ ಚಿನ್ನ (999) - 5,760
- 22KT - 5,621
- 20KT - 5,126
- 18KT - 4,665
- 14KT - 3,715
- ಬೆಳ್ಳಿ (999) - 67,483/ಕೆ.ಜಿ
ಇದನ್ನೂ ಓದಿ-Oil Price: ಪೆಟ್ರೋಲಿಯಂ ಉದ್ಯಮದಲ್ಲಿ ಹೊಸ ಧಮಾಕಾ ಮಾಡಲು ಹೊರಟ ಜಿಯೋ, ರೈತರಿಗೆ ಬಂಪರ್ ಲಾಭ!
ಚಿನ್ನದ ಅಂತಾರಾಷ್ಟ್ರೀಯ ಬೆಲೆ
ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುರಿತು ಮಾತನಾಡುವುದಾದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಕುಸಿತ ಕಂಡಿದೆ. US ಚಿನ್ನವು 0.56% ನಷ್ಟು ಕಡಿಮೆಯಾಗಿದ್ದು $1,878.50 ಪ್ರತಿ ಔನ್ಸ್ ಗೆ ಮಾರಾಟವಾಗುತ್ತಿದೆ. ಅದೇ ಸಮಯದಲ್ಲಿ, ಬೆಳ್ಳಿ 1.24% ನಷ್ಟದೊಂದಿಗೆ $ 22.14 ಮಟ್ಟದಲ್ಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.