Bill Gates In Love: 67 ನೇ ವಯಸ್ಸಿನಲ್ಲಿ ತನಗಿಂತ ಕಿರಿಯ ಮಹಿಳೆಯ ಜೊತೆಗೆ ಬಿಲ್ ಗೇಟ್ಸ್ ಡೇಟಿಂಗ್!

Bill Gates In Love Again: ಬಿಲ್ ಗೇಟ್ಸ್ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ವರದಿಗಳ ಪ್ರಕಾರ ಮೈಕ್ರೋಸಾಫ್ಟ್ ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್ ಮಾಜಿ ಒರಾಕಲ್ ಸಿಇಓ ಮಾರ್ಕ್ ಹರ್ಡ್ ಅವರ ವಿಧವೆ ಪತ್ನಿ ಪೌಲಾ ಹರ್ಡ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಕೆಲ ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಬಿಲ್ ಗೇಟ್ಸ್ ಗೆ ಪ್ರಸ್ತುತ 67 ವರ್ಷ ವಯಸ್ಸಾಗಿದ್ದರೆ, ಪೌಲಾ ಹರ್ಡ್ ಗೆ 60 ವರ್ಷ ವಯಸ್ಸಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.  

Written by - Nitin Tabib | Last Updated : Feb 9, 2023, 04:24 PM IST
  • ಬಿಲ್ ಗೇಟ್ಸ್ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಇಬ್ಬರೂ ವಿಚ್ಛೇದನ ಪಡೆದುಕೊಂಡಿರುವುದು ನಮ್ಮಲ್ಲೆರಿಗೂ ತಿಳಿದ ವಿಷಯವೇ ಆಗಿದೆ.
  • ವಿಚ್ಛೇದನವನ್ನು ಅಂತಿಮಗೊಳಿಸಿದ ಎರಡು ವರ್ಷಗಳ ನಂತರ ಅವರ ಈ ಸಂಬಂಧದ ಸುದ್ದಿ ಪ್ರಕಟಗೊಂಡಿದೆ.
  • 27 ವರ್ಷಗಳ ದಾಂಪತ್ಯ ಜೀವನದ ಬಳಿಕ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಮೇ 2021 ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದರು.
Bill Gates In Love: 67 ನೇ ವಯಸ್ಸಿನಲ್ಲಿ ತನಗಿಂತ ಕಿರಿಯ ಮಹಿಳೆಯ ಜೊತೆಗೆ ಬಿಲ್ ಗೇಟ್ಸ್ ಡೇಟಿಂಗ್! title=
ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದ ಬಿಲ್ ಗೇಟ್ಸ್

Bill Gates And Paula Hurd: ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಯಾವಾಗ ಬೇಕಾದರೂ ಪ್ರೀತಿಯಲ್ಲಿ ಬೀಳಬಹುದು. ವಯಸ್ಸು ನೋಡಿ ಪ್ರೀತಿ ಹುಟ್ಟುವುದಿಲ್ಲ ಎಂಬುದಕ್ಕೆ ಹಲವು ಉದಾಹರಣೆಗಳಿವೆ. ಈ ಹಿಂದೆಯೂ ಕೂಡ ಇಂತಹ ಹಲವು ಪ್ರಕರಣಗಳನ್ನು ಗಮನಿಸಲಾಗಿದೆ. ಇದೀಗ ಇದಕ್ಕೆ ಮತ್ತೊಂದು ಉದಾಹರಣೆ ಮುನ್ನೆಲೆಗೆ ಬಂದಿದೆ. ವಾಸ್ತವದಲ್ಲಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ತಮ್ಮ 67 ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ವರದಿಗಳ ಪ್ರಕಾರ, ಬಿಲ್ ಗೇಟ್ಸ್ 60 ವರ್ಷ ವಯಸ್ಸಿನ ಮಹಿಳೆಯೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಬಿಲ್ ಪ್ರೀತಿಯಲ್ಲಿ ಬಿದ್ದ ಮಹಿಳೆಗೂ ಕೂಡ ಯಾವುದೇ ರೀತಿಯ ಸಂಪತ್ತಿನ ಕೊರತೆಯಿಲ್ಲ.

ಮೈಕ್ರೋಸಾಫ್ಟ್
ಬಿಲ್ ಗೇಟ್ಸ್ ತಮ್ಮ ಜೀವನದಲ್ಲಿ ಮತ್ತೊಮ್ಮೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ವರದಿಗಳ ಪ್ರಕಾರ, ಮೈಕ್ರೋಸಾಫ್ಟ್ ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್,  ಮಾಜಿ ಒರಾಕಲ್ ಸಿಇಒ ಮಾರ್ಕ್ ಹರ್ಡ್ ಅವರ ವಿಧವೆ ಪೌಲಾ ಹರ್ಡ್ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಕೆಲ ಮಾಧ್ಯಮ ವರದಿಗಳಲ್ಲಿ ಈ ಮಾಹಿತಿ ಬಹಿರಂಗಪಡಿಸಲಾಗಿದೆ. ಬಿಲ್ ಗೇಟ್ಸ್‌ಗೆ 67 ವರ್ಷ ಮತ್ತು ಹರ್ಡ್‌ಗೆ 60 ವರ್ಷ ವಯಸ್ಸಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಕಳೆದ ತಿಂಗಳು ಆಸ್ಟ್ರೇಲಿಯನ್ ಓಪನ್‌ನಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ-Indian Railways: ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಒಂದು ಭಾರಿ ಸಂತಸದ ಸುದ್ದಿ

ಬಿಲ್ ಗೇಟ್ಸ್
ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್ ಇಬ್ಬರೂ ಟೆನಿಸ್ ಅನ್ನು ತುಂಬಾ ಇಷ್ಟಪಡುತ್ತಾರೆ. ಮಾರ್ಚ್ 2022 ರಲ್ಲಿ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಮೆಂಟ್‌ನ WTA ಸೆಮಿ-ಫೈನಲ್ ಪಂದ್ಯದ ವೇಳೆಯೂ ಕೂಡ  ಅವರು ಒಟ್ಟಿಗೆ ಕುಳಿತಿರುವುದು ಕಂಡುಬಂದಿದೆ. ಅದರ ಚಿತ್ರವೂ ಸಾಕಷ್ಟು ವೈರಲ್ ಆಗಿತ್ತು. ದಂಪತಿಗಳು ಕಳೆದ ಒಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ, ಆದರೆ ಅವರು ತಮ್ಮೀ ಸಂಬಂಧವನ್ನು ಸಾರ್ವಜನಿಕರ ಕಣ್ಣುಗಳಿಂದ ದೂರವಿಡುವಲ್ಲಿ ಯಶಸ್ವಿಯಾಗಿದ್ದಾರೆ. ಆದಾಗ್ಯೂ, ಹರ್ಡ್ ಕಳೆದ ತಿಂಗಳು ಗೇಟ್ಸ್‌ನೊಂದಿಗೆ ಸಿಡ್ನಿಗೆ ಬಂದಿದ್ದರು, ಅಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರು ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾಗಿದ್ದರು.

ಇದನ್ನೂ ಓದಿ-Ration Card Update: ಉಚಿತ ಪಡಿತರ ಪಡೆಯುವವರಿಗೆ ಬಂಬಾಟ್ ಲಾಟರಿ, ಸರ್ಕಾರದ ಹೊಸ ಆದೇಶ ಜಾರಿ

ಮೆಲಿಂಡಾಳಿಂದ ವಿಚ್ಛೇದನ ಪಡೆದಿದ್ದಾರೆ
ಬಿಲ್ ಗೇಟ್ಸ್ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಫ್ರೆಂಚ್ ಗೇಟ್ಸ್ ಇಬ್ಬರೂ ವಿಚ್ಛೇದನ ಪಡೆದುಕೊಂಡಿರುವುದು ನಮ್ಮಲ್ಲೆರಿಗೂ ತಿಳಿದ ವಿಷಯವೇ ಆಗಿದೆ. ವಿಚ್ಛೇದನವನ್ನು ಅಂತಿಮಗೊಳಿಸಿದ ಎರಡು ವರ್ಷಗಳ ನಂತರ ಅವರ ಈ ಸಂಬಂಧದ ಸುದ್ದಿ ಪ್ರಕಟಗೊಂಡಿದೆ. 27 ವರ್ಷಗಳ ದಾಂಪತ್ಯ ಜೀವನದ ಬಳಿಕ  ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಮೇ 2021 ರಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ್ದರು. ಅದೇ ವರ್ಷದ ಆಗಸ್ಟ್‌ನಲ್ಲಿ ಅವರ ವಿಚ್ಛೇದನವನ್ನು ಅಂತಿಮಗೊಳಿಸಲಾಯಿತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News