Cheapest Electric Scooter: ಎರಡು ಅಗ್ಗದ ಇಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಓಲಾ, ಬೆಲೆ ಕೇವಲ ಸ್ಪ್ಲೆಂಡರ್ ನಷ್ಟು ಮಾತ್ರ

Budget Friendly Electric Scooter By Ola: ಓಲಾ ಎಲೆಕ್ಟ್ರಿಕ್ ಎರಡು ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಕಂಪನಿಯು ತನ್ನ ಈಗಾಗಲೇ ಅಸ್ತಿತ್ವದಲ್ಲಿರುವ ಸ್ಕೂಟರ್‌ಗಳಾದ Ola S1 ಮತ್ತು Ola S1 ಏರ್‌ನ ಸಣ್ಣ ಬ್ಯಾಟರಿ ಪ್ಯಾಕ್ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Written by - Nitin Tabib | Last Updated : Feb 9, 2023, 07:16 PM IST
  • ಕಂಪನಿಯು ಮಾರುಕಟ್ಟೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ತನ್ನ ಸ್ಕೂಟರ್‌ಗಳಾದ
  • Ola S1 ಮತ್ತು Ola S1 ಏರ್‌ನ ಸಣ್ಣ ಬ್ಯಾಟರಿ ಪ್ಯಾಕ್ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
  • ಎರಡೂ ಸ್ಕೂಟರ್‌ಗಳು 2 kWh ಬ್ಯಾಟರಿ ಪ್ಯಾಕ್‌ನ ಆಯ್ಕೆಯನ್ನು ಹೊಂದಿವೆ.
Cheapest Electric Scooter: ಎರಡು ಅಗ್ಗದ ಇಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಓಲಾ, ಬೆಲೆ ಕೇವಲ ಸ್ಪ್ಲೆಂಡರ್ ನಷ್ಟು ಮಾತ್ರ title=
ಅಗ್ಗದ ಇಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಓಲಾ

Budget Friendly Electric Scooter By Ola: ಓಲಾ ಎಲೆಕ್ಟ್ರಿಕ್ ದೇಶದ ಅತಿದೊಡ್ಡ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದಕ ಮತ್ತು ಮಾರಾಟ ಕಂಪನಿಯಾಗಿದೆ. ಕಂಪನಿಯು ತನ್ನ ಉತ್ಪನ್ನ ಶ್ರೇಣಿಯ ಮೂಲಕ ಗ್ರಾಹಕರನ್ನು ನಿರಂತರವಾಗಿ ಆಕರ್ಷಿಸುತ್ತಿದೆ. ಇದೀಗ  ಕಂಪನಿಯು ತನ್ನ ಎರಡು ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಕಂಪನಿಯು ಮಾರುಕಟ್ಟೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ತನ್ನ ಸ್ಕೂಟರ್‌ಗಳಾದ Ola S1 ಮತ್ತು Ola S1 ಏರ್‌ನ ಸಣ್ಣ ಬ್ಯಾಟರಿ ಪ್ಯಾಕ್ ಆವೃತ್ತಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಎರಡೂ ಸ್ಕೂಟರ್‌ಗಳು 2 kWh ಬ್ಯಾಟರಿ ಪ್ಯಾಕ್‌ನ ಆಯ್ಕೆಯನ್ನು ಹೊಂದಿವೆ. ಕಂಪನಿಯು ಓಲಾ ಎಸ್1 ಏರ್ ಬೆಲೆಯನ್ನು ರೂ 84,999 ಕ್ಕೆ ನಿಗದಿಪಡಿಸಿದ್ದರೆ, OLA S1 ನ 2 kWh ರೂಪಾಂತರದ ಬೆಲೆಯನ್ನು ರೂ 99,999 (ಎಕ್ಸ್ ಶೋ ರೂಂ)ಗೆ ನಿಗದಿಪಡಿಸಿದೆ.

ಇದಲ್ಲದೆ, 3 kWh ಬ್ಯಾಟರಿ ಪ್ಯಾಕ್ ರೂಪಾಂತರದ ಬೆಲೆ ರೂ 99,999 (ಎಕ್ಸ್-ಶೋರೂಮ್) ಮತ್ತು ಕೊನೆಯದಾಗಿ ಟಾಪ್-ಆಫ್-ಲೈನ್ 4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ರೂಪಾಂತರವು ರೂ 1,09,999 ಬೆಲೆಗೆ ಲಭ್ಯವಿದೆ. Ola S1 ಏರ್ ಈಗ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾಗಿದೆ, ಇವುಗಳಲ್ಲಿ ಕೋರಲ್ ಗ್ಲಾಮ್, ನಿಯೋ ಮಿಂಟ್, ಪೋರ್ಸಿಲಿನ್  ವೈಟ್, ಜೆಟ್ ಬ್ಲಾಕ್ ಮತ್ತು ಲಿಕ್ವಿಡ್ ಸಿಲ್ವರ್‌ ಶಾಮೀಲಾಗಿವೆ.

Ola S1 ಎಲೆಕ್ಟ್ರಿಕ್ ಸ್ಕೂಟರ್ ಕೇವಲ 2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ, ಇದರ ಬೆಲೆ ರೂ 99,999 (ಎಕ್ಸ್ ಶೋ ರೂಂ) ಆಗಿದೆ. ಹೊಸ Ola S1 ರೂಪಾಂತರವು 11 ಬಣ್ಣಗಳ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳಲ್ಲಿ ಓಚರ್, ಮ್ಯಾಟ್ ಬ್ಲಾಕ್, ಕೋರಲ್ ಗ್ಲಾಮ್, ಮಿಲೇನಿಯಲ್ ಪಿಂಕ್, ಮಾರ್ಷ್ಮ್ಯಾಲೋ, ಪೋರ್ಸಿಲಿನ್ ವೈಟ್, ಮಿಡ್ನೈಟ್ ಬ್ಲೂ, ಜೆಟ್ ಬ್ಲಾಕ್, ಆಂಥ್ರಾಸೈಟ್ ಗ್ರೇ, ಲಿಕ್ವಿಡ್ ಸಿಲ್ವರ್ ಮತ್ತು ನಿಯೋ ಮಿಂಟ್ ಶಾಮೀಲಾಗಿವೆ.

ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ Ola S1 ನ ಹೊಸ ರೂಪಾಂತರಕ್ಕಾಗಿ ಬುಕಿಂಗ್ ವಿಂಡೋವನ್ನು ತೆರೆದಿದೆ. ವಿತರಣೆಗಳು ಮಾರ್ಚ್ 2023 ರಿಂದ ಆರಂಭಗೊಳ್ಳಲಿವೆ. ಆದರೆ, Ola S1 ಏರ್‌ಗಾಗಿ ಬುಕ್ಕಿಂಗ್‌ಗಳು ಈಗ ರೂ 999 ಕ್ಕೆ ಪ್ರಾರಂಭವಾಗಿವೆ ಮತ್ತು ಅದರ ಮಾರಾಟ, ಟೆಸ್ಟ್ ರೈಡ್‌ಗಳು ಮತ್ತು ವಿತರಣೆಗಳು ಜುಲೈ 2023 ರಿಂದ ಆರಂಭಗೊಳ್ಳಲಿವೆ.

ಇದನ್ನೂ ಓದಿ-Bill Gates In Love: 67 ನೇ ವಯಸ್ಸಿನಲ್ಲಿ ತನಗಿಂತ ಕಿರಿಯ ಮಹಿಳೆಯ ಜೊತೆಗೆ ಬಿಲ್ ಗೇಟ್ಸ್ ಡೇಟಿಂಗ್!

ದೀಪಾವಳಿ ಕಾಯ್ದಿರಿಸುವಿಕೆಯ ಸಮಯದಲ್ಲಿ S1 ಏರ್‌ನ 2.5 kWh ರೂಪಾಂತರವನ್ನು ಈ ಹಿಂದೆ ಬುಕ್ ಮಾಡಿದ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 3 kWh ರೂಪಾಂತರಕ್ಕೆ ಅಪ್‌ಗ್ರೇಡ್ ಮಾಡಲಾಗುವುದು ಎಂದು Ola ಎಲೆಕ್ಟ್ರಿಕ್ ಹೇಳಿದೆ.

ಇದನ್ನೂ ಓದಿ-Good News: ಕೇವಲ 4 ವರ್ಷಗಳಲ್ಲಿ 40 ಲಕ್ಷ ಗಳಿಕೆಗೆ ಕೇಂದ್ರ ಸರ್ಕಾರ ನೀಡುತ್ತಿದೆ ಈ ಅವಕಾಶ, ಮಿಸ್ ಮಾಡ್ಕೋಬೇಡಿ!

Ola S1 ಎಲೆಕ್ಟ್ರಿಕ್ ಸ್ಕೂಟರ್‌ನ ಹೊಸ ರೂಪಾಂತರವು 2kWh ಬ್ಯಾಟರಿ ಮತ್ತು 8.5 kW ಮೋಟಾರ್‌ನೊಂದಿಗೆ ಸಜ್ಜುಗೊಂಡಿದೆ. ಇದರ ಪೂರ್ಣ ಚಾರ್ಜ್ ನಲ್ಲಿ 91 ಕಿಮೀ (IDC ರೇಂಜ್) ರೇಂಜ್ ಕೊಡುತ್ತದೆ ಮತ್ತು ಇದರ ಗರಿಷ್ಠ ವೇಗ ಗಂಟೆಗೆ 90 ಕಿಮೀ.

ಇದನ್ನೂ ಓದಿ-PMK Update: ಫೆಬ್ರುವರಿ 10 ನೋಟ್ ಮಾಡಿಟ್ಟುಕೊಳ್ಳಿ, ಕಾರಣ ಇಲ್ಲಿದೆ!

ಇದೇ ವೇಳೆ Ola S1 ಏರ್‌ನ ಹೊಸ ರೂಪಾಂತರದಲ್ಲಿ 2 kWh ಬ್ಯಾಟರಿ ಪ್ಯಾಕ್‌ನೊಂದಿಗೆ 85 km ಪೂರ್ಣ ಚಾರ್ಜ್ IDC ರೇಂಜ್ ನೀಡುತ್ತದೆ. ಆದರೆ 3kWh ಮತ್ತು 4kWh ರೂಪಾಂತರಗಳು ಪೂರ್ಣ ಚಾರ್ಜ್ IDC ರೇಂಜ್ ಕ್ರಮವಾಗಿ 125 ಕಿಮೀ ಮತ್ತು 165 ಕಿ.ಮೀ ಎಂದು ಹೇಳಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News