Gold Rate : ಚಿನಿವಾರ ಪೇಟೆಯ ಶಾಕಿಂಗ್ ನ್ಯೂಸ್, ಬಂಗಾರ ಇನ್ನು ಬಲು ಭಾರ..! ಯಾಕೆ ಗೊತ್ತಾ..?
ಚಿನಿವಾರ ಪೇಟೆಯಿಂದ ಆಭರಣಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಬಂದಿದೆ. ಅರ್ಥ ಪಂಡಿತರ ಪ್ರಕಾರ ಮುಂದಿನ ದಿನಗಳಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 63 ಸಾವಿರ ರೂಪಾಯಿ ದಾಟಲಿದೆ.
ನವದೆಹಲಿ : ಭಾರತೀಯರಿಗೆ ಬಂಗಾರದ ಮೇಲೆ ಬಲು ಮೋಹ. ಹಾಗಾಗಿ ಆತ್ಮೀಯರನ್ನು, ಅತ್ಯಾಪ್ತರನ್ನು ಚಿನ್ನಾ, ಬಂಗಾರಿ ಅಂತ ಪ್ರೀತಿಯಿಂದ ಕರೆಯೋದು ಹೊಸತೇನಲ್ಲ. ಈ ದುಬಾರಿ ಲೋಹ ಮುಂದಿನ ವರ್ಷ ಇನ್ನಷ್ಟು ದುಬಾರಿಯಾಗಲಿದೆ.
ಚಿನಿವಾರ ಪೇಟೆಯಿಂದ ಆಭರಣಪ್ರಿಯರಿಗೊಂದು ಶಾಕಿಂಗ್ ನ್ಯೂಸ್ ಬಂದಿದೆ. ಅರ್ಥ ಪಂಡಿತರ ಪ್ರಕಾರ ಮುಂದಿನ ದಿನಗಳಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ (Gold Price) 63 ಸಾವಿರ ರೂಪಾಯಿ ದಾಟಲಿದೆ.
ALSO READ : Gold Reserve Detected: ತುರ್ಕಿಯಲ್ಲಿ ಪತ್ತೆಯಾದ ಚಿನ್ನದ ಬೆಟ್ಟ, ಬೆಲೆ ಹಲವು ದೇಶಗಳ GDPಗಿಂತಲೂ ಹೆಚ್ಚು
ಚಿನ್ನದ ದಾಖಲೆ ಎಂತದ್ದು ಗೊತ್ತಾ..?
ಈ ವರ್ಷ ಬಂಗಾರ ಬಹುತೇಕ ಏರುಮುಖದಲ್ಲಿಯೇ ನಾಗಾಲೋಟ ವಿಸ್ತರಿಸಿತ್ತು. 2019ರ ಆರಂಭದಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 39 ಸಾವಿರ ರೂಪಾಯಿ ಇತ್ತು. ಅದೇ ಹತ್ತು ಗ್ರಾಂ ಚಿನ್ನದ ಬೆಲೆ 56,000 ರೂಪಾಯಿ ಮುಟ್ಟಿದ್ದು, ಈ ವರ್ಷದ ಸರ್ವಕಾಲಿಕ ದಾಖಲೆ. ಹೊಸ ವರ್ಷ, ( New Year) ಅಂದರೆ 2021ರಲ್ಲಿ ತನ್ನ ದಾಖಲೆಯನ್ನು ಚಿನ್ನ ಮತ್ತೊಮ್ಮೆ ಮುರಿಯಲಿದೆ. ಹತ್ತು ಗ್ರಾಂ ಬೆಲೆ 63 ಸಾವಿರ ತಲುಪುವ ಸಾಧ್ಯತೆ ಹೆಚ್ಚಿದೆ.
ಚಿನ್ನದ ಬೆಲೆಗೆ ಯಾಕೆ ರಾಕೇಟ್ ವೇಗ..?
ಕಾರಣ 1 : ಚಿನ್ನ ಈಗ ಹೂಡಿಕೆ ದಾರರ ಡಾರ್ಲಿಂಗ್. ಷೇರು ಪೇಟೆ(Sensex), ಡಾಲರ್, ತೈಲ, ಭೂಮಿಯ ಬೆಲೆಗಳಲ್ಲಿ ತೀರಾ ಏರಿಳಿತ ಕಂಡು ಬರುತ್ತಿದೆ. ಈ ಸನ್ನಿವೇಶದಲ್ಲಿ ಹೂಡಿಕೆ ದಾರರಿಗೆ ಚಿನ್ನಅತಿ ಹೆಚ್ಚಿನ ಲಾಭ ತರುತ್ತಿದೆ. ಹಾಗಾಗಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾಗುತ್ತಿದೆ.
ಕಾರಣ 2 : ಚಿನ್ನದ ಮೇಲಿನ ಹೂಡಿಕೆ ಸೇಫ್. ಕರೋನಾ (COVID 19) ಕಾಲದಿಂದಾಗಿ ಸಾಮಾಜಿಕ ಮತ್ತು ಆರ್ಥಿಕ ಲೋಕದಲ್ಲಾದ ತಲ್ಲಣದಿಂದಾಗಿ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಎಂದೇ ಭಾವಿಸಲಾಗಿದೆ. ಚಿನ್ನ ಕೊಂಡರೆ ನಷ್ಟಆಗೋದಿಲ್ಲ ಅನ್ನೋದು ಖಾತ್ರಿಯಾಗಿದೆ.
ಕಾರಣ 3 : ಕರೋನಾ ಲಸಿಕೆ (Corona Vaccine) ಕೂಡಾ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಕರೋನಾ ಲಸಿಕೆ ಈಗಾಗಲೇ ಬಂದಿದೆ. ವ್ಯಾಕ್ಸಿನೇಶನ್ ಬೆನ್ನಲ್ಲೆ ಎಲ್ಲಾ ದೇಶಗಳ ಆರ್ಥಿಕ ಸ್ಥಿತಿಗತಿ ಬದಲಾಗಬಹುದೆಂಬ ಆಶಾವಾದ ಇದೆ. ಈ ಆಶಾವಾದವೂ ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ALSO READ : CBI Missing Gold: CBI ವಶದಲ್ಲಿದ್ದ 45 ಕೋಟಿ ರೂ.ಮೌಲ್ಯದ Gold ಮಾಯ, 103 ಕೆ.ಜಿ ಚಿನ್ನ ಸಿಗುತ್ತಿಲ್ಲವಂತೆ
ಚಿನ್ನದ ಬೆಲೆ ಹೆಚ್ಚಳಕ್ಕೆ ಪಂಡಿತರು ಏನೇ ಕಾರಣ ಕೊಡಲಿ. ಆದರೆ, ಸಾಮಾನ್ಯವರ್ಗದವರು ಇನ್ನು ಮುಂದೆ ಚಿನ್ನ ಖರೀದಿಸುವ ಮೊದಲು ಪಾಕೆಟ್ ಚೆಕ್ ಮಾಡಿಕೊಳ್ಳುವುದು ಉತ್ತಮ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.