ತುರ್ಕಿ ದೇಶದಲ್ಲಿ ಚಿನ್ನದ ಬೆಟ್ಟವೊಂದು ಪತ್ತೆಯಾಗಿದೆ. ವರದಿಗಳ ಪ್ರಕಾರ ತುರ್ಕಿಯ ಸೆಂಟ್ರಲ್-ವೆಸ್ಟ್ ಸೋಗುಟ್ ನಲ್ಲಿ ಈ 99 ಟನ್ ಚಿನ್ನದ ಭಂಡಾರ ಪತ್ತೆಯಾಗಿದೆ. ಇದರ ಬೆಲೆ ಸುಮಾರು 600 ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.
ನವದೆಹಲಿ: ತುರ್ಕಿ ದೇಶದಲ್ಲಿ 99 ಟನ್ ಚಿನ್ನದ ಸಂಗ್ರಹ ಪತ್ತೆಯಾಗಿದೆ, ಈ ಚಿನ್ನದ ಬೆಲೆ ಹಲವು ದೇಶಗಳ ಜಿಡಿಪಿಗಿಂತ ಹೆಚ್ಚಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಚಿನ್ನ (Gold) ಪತ್ತೆಯಾದ ಕಾರಣ ಇದೀಗ ಈ ಚಿನ್ನದ ಬೆಲ್ಲೆಯ ಕುರಿತು ಇಡೀ ವಿಶ್ವದಲ್ಲಿಯೇ ಊಹಾಪೋಹಗಳು ಕೇಳಿಬರಲಾರಂಭಿಸಿವೆ. ಸದ್ಯ ಈ ಚಿನ್ನದ ಭಂಡಾರದ ಬೆಲೆ 600 ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿ- Sovereign Gold Bond:ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ಮತ್ತೆ ಸಿಗಲಿದೆ ಅವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ತುರ್ಕಿ ಸುದ್ದಿ ಸಂಸ್ಥೆ Anadolu ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ತುರ್ಕಿಯಲ್ಲಿ ರಸಗೊಬ್ಬರ ತಯಾರಿಕಾ ಕಂಪನಿ Gubertas, Agricultural Credit Cooperatives ಕಂಟ್ರಿ ಮುಖ್ಯಸ್ಥ ಫಾಹರಟೀನ್ ಪೊಯ್ ರಾಜ್ (Fahrettin Poyraz) ಜೊತೆ ಸೇರಿ ಈ ಚಿನ್ನದ ನಿಕ್ಷೇಪವನ್ನು ಪತ್ತೆಮಾಡಿದ್ದು, ಇದರ ಬೆಲೆ ಸುಮಾರು 600 ಕೋಟಿ ಡಾಲರ್ ಆಗಿದೆ ಎಂದು ಹೇಳಲಾಗಿದೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿನ್ನ ಪತ್ತೆಯಾದ ಸುದ್ದಿ ಪ್ರಕಟಗೊಳ್ಳುತ್ತಲೇ ಟರ್ಕಿಯ ಷೇರು ವಿನಿಮಯ ಕೇಂದ್ರ ಬೊರ್ಸಾ ಇಸ್ತಾಂಬುಲ್‌ನಲ್ಲಿ ಗುಬರ್ಟಾಸ್‌ನ ಷೇರುಗಳ ಬೆಲೆ ಶೇಕಡಾ 10 ರಷ್ಟು ಏರಿಕೆಯಾಗಿದೆ. ಮೊದಲ ಚಿನ್ನ ಹೊರತೆಗೆಯುವಿಕೆ ಎರಡು ವರ್ಷಗಳ ಕಾಲ ತೆಗೆದುಕೊಳ್ಳಲಿದ್ದು, ಇದು ಟರ್ಕಿಯ ಆರ್ಥಿಕತೆಯನ್ನು ಬಲಪಡಿಸಲಿದೆ ಎಂದು ಪೊಯ್ರಾಜ್ ತಿಳಿಸಿದೆ.
ಟರ್ಕಿಯ ಪಶ್ಚಿಮ-ಮಧ್ಯ ಸೊಗಟ್ನಲ್ಲಿ ಈ ಚಿನ್ನದ ನಿಕ್ಷೇಪ ದೊರೆತಿದೆ ಎಂದು Agricultural Credit Cooperativesನ ಕಂಟ್ರಿ ಮುಖ್ಯಸ್ಥ ಫಹ್ರೆಟಿನ್ ಪೊಯರಾಜ್ ಟರ್ಕಿಶ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
2020ರ ಆರ್ಥಿಕ ವರ್ಷದಲ್ಲಿ ತುರ್ಕಿ ಸುಮಾರು 38 ಟನ್ ಗಳಷ್ಟು ಚಿನ್ನ ಉತ್ಪಾದಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಕುರಿತು ಹೇಳಿಕೆ ನೀಡಿರುವ ದೇಶದ ಇಂಧನ ಸಚಿವ ಸೆಪ್ಟೆಂಬರ್ ವರೆಗೆ ಸುಮಾರು 100 ಟನ್ ಚಿನ್ನ ಉತ್ಪಾದಿಸುವ ಗುರಿ ಹೊಂದಲಾಗಿತ್ತು ಎಂದಿದ್ದಾರೆ. ಸದ್ಯ ಹೊಸದಾಗಿ ಪತ್ತೆಯಾಗಿರುವ ಚಿನ್ನದ ಬೆಲೆಯ ಕುರಿತು ಅಂದಾಜುಗಳನ್ನು ವ್ಯಕ್ತಪಡಿಸಲಾಗುತ್ತಿದ್ದು, ಇದು ಹಲವಾರು ದೇಶಗಳ GDPಗಿಂತಲೂ ಹೆಚ್ಚಾಗಿದೆ ಎನ್ನಲಾಗುತ್ತಿದೆ.
Worldometer ಪ್ರಕಾರ, ಮಾಲ್ಡೀವ್ಸ್ನ ಜಿಡಿಪಿ 487 ಮಿಲಿಯನ್ ಡಾಲರ್, ಬುರುಂಡಿ 317 ಮಿಲಿಯನ್. ಲೈಬೀರಿಯಾದಲ್ಲಿ ಜಿಡಿಪಿ $ 329 ಮಿಲಿಯನ್, ಭೂತಾನ್ ಜಿಡಿಪಿ $ 253 ಮಿಲಿಯನ್ ಡಾಲರ್ ಮತ್ತು ಲೆಸೊಥೊ ಜಿಡಿಪಿ $ 258 ಮಿಲಿಯನ್ ಗಳಷ್ಟಿದೆ . ಇವುಗಳಲ್ಲದೆ ಬಾರ್ಬಡೋಸ್, ಗಯಾನಾ, ಮಾಂಟೆನೆಗ್ರೊ ಮತ್ತು ಮಾರಿಟಾನಿಯಾದ ಆರ್ಥಿಕತೆಯೂ $ 600 ದಶಲಕ್ಷಕ್ಕಿಂತ ಕಮ್ಮಿಯಾಗಿದೆ.