Edible Oil: ಸಂಕ್ರಾಂತಿ ಸಿಹಿ ಸುದ್ದಿ! 20 ರೂ. ಅಗ್ಗವಾದ ಖಾದ್ಯ ತೈಲ, ಈಗ ಹೊಸ ದರ ಎಷ್ಟು ಗೊತ್ತಾ
Retail Prices Of Edible Oils: ಹಲವು ತೈಲ ಕಂಪನಿಗಳು ಖಾದ್ಯ ತೈಲವನ್ನು 20 ರೂ.ವರೆಗೆ ಕಡಿತಗೊಳಿಸಿವೆ. ಇದರ ಲಾಭ ಗ್ರಾಹಕರಿಗೆ ಸಿಗಲಿದೆ.
Retail Prices Of Edible Oils: ಜಾಗತಿಕ ಮಾರುಕಟ್ಟೆಗೆ ಹೋಲಿಸಿದರೆ ದೇಶಾದ್ಯಂತ ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು (Retail Prices Of Edible Oils) ಒಂದು ವರ್ಷದಲ್ಲಿ ಭಾರೀ ಏರಿಕೆಯಾಗಿದೆ. ಆದರೆ ಅಕ್ಟೋಬರ್ 2021 ರಿಂದ ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ. 167 ಮೌಲ್ಯ ಸಂಗ್ರಹ ಕೇಂದ್ರಗಳ (Value Collection Centers) ಟ್ರೆಂಡ್ ಪ್ರಕಾರ, ದೇಶಾದ್ಯಂತ ಪ್ರಮುಖ ಚಿಲ್ಲರೆ ಮಾರುಕಟ್ಟೆಗಳಲ್ಲಿ ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು ಪ್ರತಿ ಕೆಜಿಗೆ 5-20 ರೂ. ಇಳಿಕೆಯಾಗಿದೆ.
ಖಾದ್ಯ ತೈಲಗಳ ಸರಾಸರಿ ಚಿಲ್ಲರೆ ಬೆಲೆ:
ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಮಂಗಳವಾರದ ಸರಾಸರಿ ಚಿಲ್ಲರೆ ಬೆಲೆ (Average Retail Price) ಶೇಂಗಾ ಎಣ್ಣೆ ಕೆಜಿಗೆ 180 ರೂ., ಸಾಸಿವೆ ಎಣ್ಣೆ ಕೆಜಿಗೆ 184.59 ರೂ., ಸೋಯಾ ಎಣ್ಣೆ ಕೆಜಿಗೆ 148.85 ರೂ., ಸೂರ್ಯಕಾಂತಿ ಎಣ್ಣೆ ಕೆಜಿಗೆ 162.4 ರೂ. ಮತ್ತು ತಾಳೆ ಎಣ್ಣೆ ಕೆಜಿಗೆ 128.5 ರೂ. ಆಗಿದೆ.
ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ?
ಅಕ್ಟೋಬರ್ 1, 2021 ರ ಬೆಲೆಗಳಿಗೆ ಹೋಲಿಸಿದರೆ ಕಡಲೆಕಾಯಿ ಮತ್ತು ಸಾಸಿವೆ ಎಣ್ಣೆಯ ಚಿಲ್ಲರೆ ಬೆಲೆಗಳು ಪ್ರತಿ ಕೆಜಿಗೆ 1.50-3 ರೂಪಾಯಿಗಳಷ್ಟು ಕಡಿಮೆಯಾಗಿದೆ ಎಂದು ಡೇಟಾ ತೋರಿಸಿದೆ, ಆದರೆ ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಬೆಲೆಗಳು ಈಗ ಕೆಜಿಗೆ 7-8 ರೂ.ವರೆಗೆ ಇಳಿಕೆ ಆಗಿದೆ.
ಇದನ್ನೂ ಓದಿ- PM Kisan: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಕೊನೆಗೊಂಡಿದೆ ಈ ಸೌಲಭ್ಯ
ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ, ಅದಾನಿ ವಿಲ್ಮರ್ ಮತ್ತು ರುಚಿ ಇಂಡಸ್ಟ್ರೀಸ್ ಸೇರಿದಂತೆ ಪ್ರಮುಖ ಖಾದ್ಯ ತೈಲ ಕಂಪನಿಗಳು ಖಾದ್ಯ ತೈಲ ದರವನ್ನು ಲೀಟರ್‌ಗೆ 15-20 ರೂ. ಇಳಿಕೆ ಮಾಡಿವೆ. ಇದಲ್ಲದೆ, ಜೆಮಿನಿ ಎಡಿಬಲ್ಸ್ & ಫ್ಯಾಟ್ಸ್ ಇಂಡಿಯಾ, ಹೈದರಾಬಾದ್, ಮೋದಿ ನ್ಯಾಚುರಲ್ಸ್, ದೆಹಲಿ, ಗೋಕುಲ್ ರೀ-ಫಾಯಿಲ್ ಮತ್ತು ಸಾಲ್ವೆಂಟ್, ವಿಜಯ್ ಸಾಲ್ವೆಕ್ಸ್, ಗೋಕುಲ್ ಆಗ್ರೋ ರಿಸೋರ್ಸಸ್ ಮತ್ತು ಎನ್‌ಕೆ ಪ್ರೋಟೀನ್‌ಗಳು ಖಾದ್ಯ ತೈಲಗಳ ಬೆಲೆಯನ್ನು (Prices Of Edible Oils) ಕಡಿಮೆ ಮಾಡಿದ ಇತರ ಕಂಪನಿಗಳಾಗಿವೆ.
ಖಾದ್ಯ ತೈಲಗಳ ಬೆಲೆ ಹೇಗೆ ಕಡಿಮೆಯಾಯಿತು?
ಸಚಿವಾಲಯದ ಪರವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಿದ್ದರೂ ರಾಜ್ಯ ಸರ್ಕಾರಗಳ ಸಕ್ರಿಯ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದ್ದರಿಂದ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಿದೆ. ಕಳೆದ ಒಂದು ವರ್ಷದಿಂದ ಗಗನಕ್ಕೇರುತ್ತಿದ್ದ ಖಾದ್ಯ ತೈಲದ ಬೆಲೆ ಅಕ್ಟೋಬರ್‌ನಿಂದ ಇಳಿಕೆಯತ್ತ ಮುಖ ಮಾಡಿದೆ. ಆಮದು ಸುಂಕವನ್ನು ಕಡಿತಗೊಳಿಸುವುದು ಮತ್ತು ಸಂಗ್ರಹಣೆಗೆ ಕಡಿವಾಣ ಹಾಕುವುದು ಮುಂತಾದ ಇತರ ಕ್ರಮಗಳು ಎಲ್ಲಾ ಖಾದ್ಯ ತೈಲಗಳ ದೇಶೀಯ ಬೆಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಮತ್ತು ಗ್ರಾಹಕರಿಗೆ ಸಮಾಧಾನ ತಂದಿದೆ. ಖಾದ್ಯ ತೈಲಗಳ ಆಮದಿನ ಮೇಲೆ ಭಾರೀ ಅವಲಂಬನೆಯಿಂದಾಗಿ, ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುವುದು ಮುಖ್ಯವಾಗಿದೆ.
ದೇಶೀಯ ಉತ್ಪಾದನೆಯು ತನ್ನ ದೇಶೀಯ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಕಾರಣ ಭಾರತವು ಖಾದ್ಯ ತೈಲಗಳ ಅತಿದೊಡ್ಡ ಆಮದುದಾರರಲ್ಲಿ ಒಂದಾಗಿದೆ. ದೇಶದಲ್ಲಿ ಖಾದ್ಯ ತೈಲಗಳ ಬಳಕೆಯ ಶೇಕಡಾ 56-60 ರಷ್ಟನ್ನು ಆಮದು ಮೂಲಕ ಪೂರೈಸಲಾಗುತ್ತದೆ.
ಜಾಗತಿಕ ಉತ್ಪಾದನೆಯಲ್ಲಿನ ಕಡಿತ ಮತ್ತು ರಫ್ತು ಮಾಡುವ ದೇಶಗಳಿಂದ ರಫ್ತು ತೆರಿಗೆ / ಲೆವಿ (Export Tax/Levy) ಹೆಚ್ಚಳದಿಂದಾಗಿ ಖಾದ್ಯ ತೈಲಗಳ ಅಂತರರಾಷ್ಟ್ರೀಯ ಬೆಲೆಗಳು ಒತ್ತಡದಲ್ಲಿವೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಆದ್ದರಿಂದ, ಖಾದ್ಯ ತೈಲಗಳ ದೇಶೀಯ ಬೆಲೆಗಳನ್ನು ಆಮದು ಮಾಡಿದ ತೈಲಗಳ ಬೆಲೆಗಳಿಂದ ನಿರ್ಧರಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.