PM Kisan: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಕೊನೆಗೊಂಡಿದೆ ಈ ಸೌಲಭ್ಯ

PM Kisan Samman Yojana: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಲ್ಲಿ, ಡೇಟಾವನ್ನು ಸುರಕ್ಷಿತವಾಗಿರಿಸುವ ಉದ್ದೇಶಕ್ಕಾಗಿ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡಿದೆ. 

Written by - Yashaswini V | Last Updated : Jan 14, 2022, 08:05 AM IST
  • ಏಳನೇ ಬಾರಿಗೆ ಪಿಎಂ ಕಿಸಾನ್ ಯೋಜನೆಯಲ್ಲಿ ಬದಲಾವಣೆ
  • ರೈತರ ಡೇಟಾವನ್ನು ಸುರಕ್ಷಿತವಾಗಿರಿಸುವ ಉದ್ದೇಶ
  • ಈಗ ಬೇರೆಯವರ ಸ್ಥಿತಿಯನ್ನು ಪರಿಶೀಲಿಸಲು ಇತರರಿಗೆ ಸಾಧ್ಯವಾಗುವುದಿಲ್ಲ
PM Kisan: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಕೊನೆಗೊಂಡಿದೆ ಈ ಸೌಲಭ್ಯ title=
Big change in PM Kisan scheme

PM Kisan Samman Yojana: ಪಿಎಂ ಕಿಸಾನ್: ನೀವು ಅಥವಾ ನಿಮ್ಮ ಕುಟುಂಬದ ಯಾರಾದರೂ ಪ್ರಧಾನ ಮಂತ್ರಿಯ ಕಿಸಾನ್ ಸಮ್ಮಾನ್ ನಿಧಿಯನ್ನು (PM Kisan Samman Yojana) ಸ್ವೀಕರಿಸಲಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. ಈ ಯೋಜನೆಯಲ್ಲಿ ಒಳಗೊಂಡಿರುವ ಒಂದು ಸೇವೆಯನ್ನು ಸರ್ಕಾರವು ಸ್ಥಗಿತಗೊಳಿಸಿದೆ. ಇದು 12 ಕೋಟಿಗೂ ಹೆಚ್ಚು ಜನರ ಮೇಲೆ ನೇರ ಪರಿಣಾಮ ಬೀರುವುದು ಖಚಿತ. ಈ ಸೇವೆಯನ್ನು ಮುಚ್ಚಿದ ನಂತರ, ಫಲಾನುಭವಿಗಳು ತಮ್ಮ ಸ್ಥಿತಿಯನ್ನು ಪರಿಶೀಲಿಸಲು ಕಷ್ಟಪಡುತ್ತಾರೆ.

ಪ್ರಮುಖ ಮಾಹಿತಿಯನ್ನು ಸುರಕ್ಷಿತವಾಗಿರಿಸುವ ಉದ್ದೇಶ:
ಆದಾಗ್ಯೂ, ಪಿಎಂ ಕಿಸಾನ್ ಯೋಜನೆಗೆ (PM Kisan Yojana) ಸಂಬಂಧಿಸಿದ ಫಲಾನುಭವಿಗಳ ಪ್ರಮುಖ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಈ ಸೌಲಭ್ಯವನ್ನು ಸ್ಥಗಿತಗೊಳಲಾಗಿದೆ ಎಂದು ಹೇಳಲಾಗುತ್ತಿದೆ. ಇದರ ನಂತರ ರೈತರ ಡೇಟಾ ಸುರಕ್ಷಿತವಾಗಿರುತ್ತದೆ ಆದರೂ, ರೈತರಿಗೆ ಕೆಲವು ಕೆಲಸಗಳಿಗೆ ತೊಂದರೆಯೂ ಇರಲಿದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ (PM Kisan Samman Yojana) ಮತ್ತೆ ಬದಲಾವಣೆ ಮಾಡಲಾಗಿದೆ . ಇದು ಈ ವರ್ಷದ ದೊಡ್ಡ ಬದಲಾವಣೆ. ಈ ಬದಲಾವಣೆಯ ಪರಿಣಾಮವು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ  (PM Kisan Portal) ನೋಂದಾಯಿಸಲಾದ ಎಲ್ಲಾ ರೈತರ ಮೇಲೆ ಇರುತ್ತದೆ . ಇದುವರೆಗೆ 12 ಕೋಟಿ 44 ಲಕ್ಷಕ್ಕೂ ಹೆಚ್ಚು ರೈತರು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. 

ಇದನ್ನೂ ಓದಿ- PM Kisan FPO Yojana : ರೈತರಿಗೆ ಸಹಾಯ ಮಾಡಲು ಸರ್ಕಾರ 15 ಲಕ್ಷ ರೂ. ನೀಡುತ್ತಿದೆ! ಹೇಗೆ ಇಲ್ಲಿದೆ ನೋಡಿ 

ಏನು ಬದಲಾಗಿದೆ?
ಪಿಎಂ ಕಿಸಾನ್ ಯೋಜನೆಯಲ್ಲಿ ನೋಂದಾಯಿಸಿದ ನಂತರ ರೈತರು (Farmers) ತಮ್ಮ ಸ್ಥಿತಿಯನ್ನು ಪರಿಶೀಲಿಸಬಹುದು. ಅರ್ಜಿಯ ಸ್ಥಿತಿ, ಬ್ಯಾಂಕ್ ಖಾತೆಯಲ್ಲಿ ಎಷ್ಟು ಕಂತು ಬಂದಿದೆ ಇತ್ಯಾದಿ. ಈ ಹಿಂದೆ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ, ಯಾವುದೇ ರೈತರು ಆಧಾರ್ ಸಂಖ್ಯೆ, ಮೊಬೈಲ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸುವ ಮೂಲಕ ಮಾಹಿತಿಯನ್ನು (PM Kisan Status Check) ತೆಗೆದುಕೊಳ್ಳಬಹುದಾಗಿತ್ತು. ಆದರೆ ಈ ಬದಲಾವಣೆಯ ನಂತರ, ಪಿಎಂ ಕಿಸಾನ್ ಪೋರ್ಟಲ್‌ನಲ್ಲಿನ ಮೊಬೈಲ್ ಸಂಖ್ಯೆಯಿಂದ ಸ್ಥಿತಿಯನ್ನು ನೋಡಲು ಸಾಧ್ಯವಾಗುವುದಿಲ್ಲ. ಈಗ ಸ್ಥಿತಿ ಮಾಹಿತಿಯು ಆಧಾರ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯಿಂದ ಮಾತ್ರ ಲಭ್ಯವಿರುತ್ತದೆ.

ಏಕೆ ಬದಲಾವಣೆ?
ಮೊಬೈಲ್ ಸಂಖ್ಯೆಯಿಂದ ಸ್ಥಿತಿಯನ್ನು ಪರಿಶೀಲಿಸುವಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅನೇಕ ಜನರು ತಮ್ಮನ್ನು ಹೊರತುಪಡಿಸಿ ಇತರರ ಸ್ಥಿತಿಯನ್ನು ಸುಲಭವಾಗಿ ನೋಡುತ್ತಿದ್ದರು. ಇಷ್ಟು ಮಾತ್ರವಲ್ಲದೆ ಬೇರೆಯವರು ಕೂಡ ರೈತರ ಬಗ್ಗೆ ಸಾಕಷ್ಟು ಮಾಹಿತಿ ಪಡೆಯುತ್ತಿದ್ದರು. ಆದರೆ ಈ ಬದಲಾವಣೆಯ ನಂತರ ಅದು ಇನ್ನು ಮುಂದೆ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ- PM Kisan 10ನೇ ಕಂತಿನ ಹಣ ನಿಮ್ಮಗೆ ಬಂದಿಲ್ಲವೆ? ತಕ್ಷಣವೇ ಈ ಕೆಲಸ ಮಾಡಿ, ಹಣ ಬರುತ್ತೆ!

12.50 ಮಿಲಿಯನ್ ಜನರ ಮೇಲೆ ಪರಿಣಾಮ:
ಸರ್ಕಾರ ಮಾಡಿದ ಈ ಬದಲಾವಣೆಯ ನಂತರ 12.44 ಕೋಟಿ ಜನರ ಮೇಲೆ ನೇರ ಪರಿಣಾಮ ಬೀರಲಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ 7 ಬದಲಾವಣೆಗಳು ಸಂಭವಿಸಿವೆ. ಕೆಲ ದಿನಗಳ ಹಿಂದೆ ಫಲಾನುಭವಿಗಳು ಇ-ಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಈಗ ಅದನ್ನು ತಡೆಹಿಡಿಯಲಾಗಿದೆ.

ವಾಸ್ತವವಾಗಿ, ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಘೋಷಿಸಲಾಗಿದೆ. ಫೆಬ್ರವರಿ 10 ರಿಂದ ಮೊದಲ ಹಂತದ ಮತದಾನ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ (PM Kisan Samman Yojana) ಇ-ಕೆವೈಸಿ ಮಾಡುವುದನ್ನು ತಡೆಹಿಡಿಯಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News