ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ದೇಶವಾಸಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ.  ಇದರಿಂದ ಭಾರತದಾದ್ಯಂತ ಲಕ್ಷಾಂತರ ಜನರಿಗೆ ಪ್ರಯೋಜನವಾಗಲಿದೆ. ನೀವು ಸಹ ಆಧಾರ್ ಕಾರ್ಡ್ ಹೊಂದಿದ್ದು ಇದುವರೆಗೂ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ ಇದೀಗ ಆಧಾರ್ ಪೋರ್ಟಲ್‌ನಲ್ಲಿ ನೀವು ಕೆಲಸವನ್ನು ಉಚಿತವಾಗಿ ಮಾಡಬಹುದಾಗಿದೆ. 


COMMERCIAL BREAK
SCROLL TO CONTINUE READING

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಆಧಾರ್ ಪೋರ್ಟಲ್‌ನಲ್ಲಿ ತಮ್ಮ ದಾಖಲೆ ವಿವರಗಳನ್ನು ನವೀಕರಿಸಲು ನೀಡಬೇಕಿದ್ದ 50 ರೂಪಾಯಿ ಶುಲ್ಕವನ್ನು ಮನ್ನಾ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನಿರ್ಧರಿಸಿದೆ. ಆಧಾರ್ ಕಾರ್ಡ್ ಹೊಂದಿರುವವರಿಗೆ ಮುಂದಿನ ಮೂರು ತಿಂಗಳವರೆಗೆ ಅಂದರೆ ಮಾರ್ಚ್ 15 ರಿಂದ ಜೂನ್ 14, 2023 ರವರೆಗೆ ಈ ಉಚಿತ ಸೇವೆ ಲಭ್ಯವಾಗಲಿದೆ ಎಂದು ತಿಳಿಸಿದೆ. 


ಆದಾಗ್ಯೂ, ಈ ಜನ-ಕೇಂದ್ರಿತ ಕ್ರಮವು ಡಿಜಿಟಲ್ ಇಂಡಿಯ ಉಪಕ್ರಮದ ಭಾಗವಾಗಿದ್ದು  myAadhaar ಪೋರ್ಟಲ್ ಮೂಲಕ ಬದಲಾವಣೆಗಳನ್ನು ಮಾಡುವವರಿಗೆ ಮಾತ್ರ ಲಭ್ಯವಿರುತ್ತದೆ. ಆದರೆ ಭೌತಿಕವಾಗಿ ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ನವೀಕರಣ ಮಾಡಲು ಬಯಸುವವರು ಈಗಲೂ ಕೂಡ 50 ರೂಪಾಯಿಗಳನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಅರ್ಥಾತ್, ಯುಐಡಿಎಐ ಆಧಾರ್ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಉಚಿತವಾಗಿ ನವೀಕರಿಸಲು ಅನುಮತಿಸಲು ನಿರ್ಧರಿಸಿದೆ. 


ಇದನ್ನೂ ಓದಿ- ಮಾರ್ಚ್ ಅಂತ್ಯದವರೆಗೆ ಈ ಕೆಲಸ ಮಾಡದಿದ್ದರೆ ನಿಷ್ಕ್ರಿಯಗೊಳ್ಳಲಿದೆ ನಿಮ್ಮ ಪ್ಯಾನ್ ಕಾರ್ಡ್


ವಾಸ್ತವವಾಗಿ, 2016 ರ ಆಧಾರ್ ನೋಂದಣಿ ಮತ್ತು ನವೀಕರಣ ನಿಯಮಗಳನ್ವಯ, ಆಧಾರ್ ಸಂಖ್ಯೆ ಹೊಂದಿರುವವರು ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷಗಳ ನಂತರ ಒಮ್ಮೆಯಾದರೂ ತಮ್ಮ ಪೋಷಕ ದಾಖಲೆಗಳನ್ನು ನವೀಕರಿಸಬಹುದು. ಈ ಸೇವೆಯು ಆಧಾರ್ ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿ ಲಭ್ಯವಾಗಲಿದೆ. ಒಂದೊಮ್ಮೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ಆಧಾರ್ ಅನ್ನು ನವೀಕರಿಸಲು ಬಯಸಿದರೆ ಅದಕ್ಕಾಗಿ ನಿಗದಿತ 50 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 


ನೀವು ಆಧಾರ್ ಕಾರ್ಡ್ ಬಳಕೆದಾರರಾಗಿದ್ದರೆ ಜನಸಂಖ್ಯಾ ವಿವರಗಳನ್ನು (ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇತ್ಯಾದಿ) ನವೀಕರಿಸಲು ಬಯಸಿದರೆ ಅಥವಾ ಬದಲಾವಣೆ ಅಗತ್ಯವಿದ್ದರೆ ನೀವು ಆನ್‌ಲೈನ್‌ನಲ್ಲಿ ಈ ಮಾಹಿತಿಗಳನ್ನು ನವೀಕರಿಸಬಹುದಾಗಿದೆ. ಇದಕ್ಕಾಗಿ, ಸಾಮಾನ್ಯ ಶುಲ್ಕಗಳು ಅನ್ವಯಿಸುತ್ತವೆ. 


ಇದನ್ನೂ ಓದಿ- Aadhaar Card : ಆಧಾರ್ ಕಾರ್ಡ್‌ನಲ್ಲಿರುವ ನಿಮ್ಮ ಫೋಟೋ ಚೆನ್ನಾಗಿಲ್ಲವೇ? ಈ ರೀತಿ ಚೇಂಜ್ ಮಾಡಿ!


ಆನ್‌ಲೈನ್‌ನಲ್ಲಿ ಆಧಾರ್ ವಿವರಗಳನ್ನು ನವೀಕರಿಸಲು ಇಲ್ಲಿವೆ ಸುಲಭ ಹಂತಗಳು:
* ನೀವು ನಿಮ್ಮ ಆಧಾರ್ ಅನ್ನು ನವೀಕರಿಸಲು ಬಯಸಿದರೆ ಅದಕ್ಕಾಗಿ ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು https://myaadhaar.uidai.gov.in/ ನಲ್ಲಿ ಲಾಗಿನ್ ಮಾಡಬೇಕು.
* ನೋಂದಾಯಿತ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ. ನಂತರ 'ಡಾಕ್ಯುಮೆಂಟ್ ಅಪ್‌ಡೇಟ್' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇದರಲ್ಲಿ ನಿವಾಸಿಯ ಅಸ್ತಿತ್ವದಲ್ಲಿರುವ ವಿವರಗಳನ್ನು ಪ್ರದರ್ಶಿಸಲಾಗುತ್ತದೆ.
* ಯಾವುದೇ ಬದಲಾವಣೆಯನ್ನು ಮಾಡುವ ಮೊದಲು ಆಧಾರ್ ಹೊಂದಿರುವವರು ವಿವರಗಳನ್ನು ಪರಿಶೀಲಿಸುವ ಅಗತ್ಯವಿದೆ ಮತ್ತು ಸರಿಯಾಗಿ ಕಂಡುಬಂದರೆ, ಮುಂದಿನ ಹೈಪರ್-ಲಿಂಕ್ ಅನ್ನು ಕ್ಲಿಕ್ ಮಾಡಿ.
* ಮುಂದಿನ ಪರದೆಯಲ್ಲಿ, ನಿವಾಸಿಯು ಡ್ರಾಪ್-ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ಪುರಾವೆ ಡಾಕ್ಯುಮೆಂಟ್‌ಗಳನ್ನು ಆರಿಸಬೇಕಾಗುತ್ತದೆ ಮತ್ತು ಅವರ ದಾಖಲೆಗಳನ್ನು ನವೀಕರಿಸಲು ಅದರ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು.
* ಈ ಹಂತಗಳು ಪೂರ್ಣಗೊಂಡ ಬಳಿಕ ನವೀಕರಿಸಿದ ಮತ್ತು ಸ್ವೀಕಾರಾರ್ಹ PoA ಮತ್ತು PoI ದಾಖಲೆಗಳ ಪಟ್ಟಿ ಯುಐಡಿಎಐನ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.