Aadhaar Card : ಆಧಾರ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚಕ್ ಮಾಡಬಹುದು : ಹೇಗೆ? ಇಲ್ಲಿದೆ ನೋಡಿ

Bank Balance Check : ಇಂದಿನ ಕಾಲದಲ್ಲಿ ದೇಶದಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಈ ಡಾಕ್ಯುಮೆಂಟ್ ಭಾರತದಲ್ಲಿನ ಅನೇಕ ಇತರ ಕೆಲಸಗಳಿಗೆ ಕಡ್ಡಾಯದ ದಾಖಲೆಯಾಗಲಿದೆ. ಅಲ್ಲದೆ, ಇದು ಬ್ಯಾಂಕ್ ಖಾತೆ ತೆರೆಯಲು ತುಂಬಾ ಮುಖ್ಯ ದಾಖಲೆಯಾಗಿದೆ.

Written by - Channabasava A Kashinakunti | Last Updated : Feb 6, 2023, 05:33 PM IST
  • ಆಧಾರ್ ಕಾರ್ಡ್
  • ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು
  • ಈ ಹಂತಗಳನ್ನು ಅನುಸರಿಸಿ
Aadhaar Card : ಆಧಾರ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚಕ್ ಮಾಡಬಹುದು : ಹೇಗೆ? ಇಲ್ಲಿದೆ ನೋಡಿ title=

Bank Balance Check : ಇಂದಿನ ಕಾಲದಲ್ಲಿ ದೇಶದಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಈ ಡಾಕ್ಯುಮೆಂಟ್ ಭಾರತದಲ್ಲಿನ ಅನೇಕ ಇತರ ಕೆಲಸಗಳಿಗೆ ಕಡ್ಡಾಯದ ದಾಖಲೆಯಾಗಲಿದೆ. ಅಲ್ಲದೆ, ಇದು ಬ್ಯಾಂಕ್ ಖಾತೆ ತೆರೆಯಲು ತುಂಬಾ ಮುಖ್ಯ ದಾಖಲೆಯಾಗಿದೆ. ಆಧಾರ್ ಸಹಾಯದಿಂದ ದೇಶದಲ್ಲಿ ಅನೇಕ ಕೆಲಸಗಳ ಆಗಲಿವೆ. ಆಧಾರ್ ಕಾರ್ಡ್ ಬಂದು ಜನರ ಜೀವನದಲ್ಲಿ ಬಹಳಷ್ಟು ಕೆಲಸಗಳನ್ನು ಸುಲಭಗೊಳಿಸಿದೆ. ಈಗ ನೀವು ಬ್ಯಾಂಕ್ ಬ್ಯಾಲೆನ್ಸ್ ತಿಳಿದುಕೊಳ್ಳಲು ಸಹ ಆಧಾರ್ ಸಾಕು, ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು.

ಆಧಾರ್ ಕಾರ್ಡ್

ನೀವು ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಮತ್ತು ಆನ್‌ಲೈನ್ ಬ್ಯಾಂಕಿಂಗ್ ವಹಿವಾಟ ಮಾಡದಿದ್ದರೆ, ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಅಥವಾ ಎಟಿಎಂ ಸಹಾಯದಿಂದ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ತಿಳಿದುಕೊಳ್ಳಬಹುದು. ಆದರೆ, ಈಗ ಯಾವುದೇ ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಅಗತ್ಯವಿದೆ. ಆಧಾರ್ ಕಾರ್ಡ್ ನಲ್ಲಿ ಹಲವು ಮಾಹಿತಿ ದಾಖಲಿಸಲಾಗಿದೆ. ಆಧಾರ್ ಕಾರ್ಡ್‌ನ ಸಹಾಯದಿಂದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಸಹ ಪರಿಶೀಲಿಸಬಹುದು ಎಂಬುದು ದೇಶದ ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಚಾರವಾಗಿದೆ.

ಇದನ್ನೂ ಓದಿ : PM Kisan : 12 ಕೋಟಿ ಪಿಎಂ ಕಿಸಾನ್ ರೈತರಿಗೆ ಸಿಹಿ ಸುದ್ದಿ : ಈ ದಿನ ನಿಮ್ಮ ಖಾತೆಗೆ ಹಣ

ಬ್ಯಾಂಕ್

ಈಗ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಆಧಾರ್ ಕಾರ್ಡ್ ಅನ್ನು ಸಹ ಬಳಸಬಹುದು. ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಖ್ಯೆಗೂ ಆಧಾರ್ ಕಾರ್ಡ್ ಲಿಂಕ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ ಕುಳಿತು ಆಧಾರ್ ಕಾರ್ಡ್ ಸಹಾಯದಿಂದ ಬ್ಯಾಂಕ್ ಬ್ಯಾಲೆನ್ಸ್ ಮಾಹಿತಿ ಪಡೆಯಬಹುದು. ಇದಕ್ಕಾಗಿ ಕೆಲವು ಹಂತಗಳನ್ನು ಅನುಸರಿಸಬೇಕು. ಆಧಾರ್ ಕಾರ್ಡ್ ಸಹಾಯದಿಂದ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲಿಸಬಹುದು.

ಈ ಹಂತಗಳನ್ನು ಅನುಸರಿಸಿ

- ನೋಂದಾಯಿತ ಮೊಬೈಲ್ ಸಂಖ್ಯೆಯಿಂದ *99*99*1# ಕರೆ ಮಾಡಿ.
- ಈಗ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ಇದಾದ ಬಳಿಕ ಮತ್ತೊಮ್ಮೆ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಪರಿಶೀಲನೆ ನಡೆಸಬೇಕಾಗುತ್ತದೆ.
- ಇದರ ನಂತರ ಬ್ಯಾಂಕ್ ಬ್ಯಾಲೆನ್ಸ್ ಜೊತೆಗೆ SMS ಸಹ ಸ್ವೀಕರಿಸಲಾಗುತ್ತದೆ.

ಇದನ್ನೂ ಓದಿ : ವಾಗ್ದಾನ ಮಾಡಿದ ಷೇರುಗಳ ಬಿಡುಗಡೆಗಾಗಿ $1,114 ಮಿಲಿಯನ್ ಮುಂಗಡ ಪಾವತಿಗೆ ಮುಂದಾದ ಅದಾನಿ ಗ್ರೂಪ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News