ಸಿಟಿ ಯೂನಿಯನ್ ಬ್ಯಾಂಕ್ ಎಫ್‌ಡಿ ದರ ಏರಿಕೆ: ಭಾರತೀಯ ರಿಸರ್ವ್ ಬ್ಯಾಂಕ್ ಮೇ ಮತ್ತು ಜೂನ್ ತಿಂಗಳಲ್ಲಿ ಎರಡು ಬಾರಿ ರೆಪೊ ದರವನ್ನು ಹೆಚ್ಚಿಸಿದೆ. ಅಂದಿನಿಂದ, ಎಲ್ಲಾ ಬ್ಯಾಂಕುಗಳು ನಿರಂತರವಾಗಿ ತಮ್ಮ ಸಾಲವನ್ನು ದುಬಾರಿಗೊಳಿಸಿವೆ. ಈಗ ಗೃಹ ಸಾಲ, ಕಾರು ಸಾಲ, ಬಿಸಿನೆಸ್ ಲೋನ್ ಮುಂತಾದ ಜನರಿಗೆ ಎಲ್ಲಾ ರೀತಿಯ ಸಾಲಗಳು ದುಬಾರಿಯಾಗಿವೆ. ಇದರೊಂದಿಗೆ ಬ್ಯಾಂಕ್‌ಗಳು ತಮ್ಮ ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನೂ ಹೆಚ್ಚಿಸಿವೆ.  ಇತ್ತೀಚೆಗೆ ಸಿಟಿ ಯೂನಿಯನ್ ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿ ದರವನ್ನು ಹೆಚ್ಚಿಸಿದೆ.


COMMERCIAL BREAK
SCROLL TO CONTINUE READING

ಖಾಸಗಿ ಬ್ಯಾಂಕ್ ಆಗಿರುವ ಸಿಟಿ ಯೂನಿಯನ್ ಬ್ಯಾಂಕ್ ತನ್ನ 2 ಕೋಟಿ ರೂ.ಗಿಂತ ಕಡಿಮೆಯಿರುವ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ಈ ಹೊಸ ದರಗಳನ್ನು 20 ಜೂನ್ 2022 ರಂದು ಜಾರಿಗೆ ತರಲಾಗಿದೆ. ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡಾ 4 ರಿಂದ 5.25 ರಷ್ಟು ಬಡ್ಡಿದರವನ್ನು ನೀಡುತ್ತಿದೆ. ಅದೇ ಸಮಯದಲ್ಲಿ,  ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ. ಹಾಗಾದರೆ ಇತ್ತೀಚಿನ ದರಗಳನ್ನು ತಿಳಿಯೋಣ-


ಇದನ್ನೂ ಓದಿ- Meta Pay ಆಗಿ ಬದಲಾದ ಫೇಸ್‌ಬುಕ್ ಪೇ- ಇಲ್ಲಿದೆ ಇದರ ಪ್ರಯೋಜನಗಳು


2 ಕೋಟಿ ರೂ.ಗಿಂತ ಕಡಿಮೆಯಿರುವ ಎಫ್‌ಡಿಗಳ ಮೇಲೆ ಸಿಟಿ ಯೂನಿಯನ್ ಬ್ಯಾಂಕ್ ಬಡ್ಡಿದರ:


  • 7 ರಿಂದ 14 ದಿನಗಳು-4.00% ಬಡ್ಡಿ

  • 15 ದಿನಗಳಿಂದ 45 ದಿನಗಳು-4.10% ಬಡ್ಡಿ

  • 46 ದಿನಗಳಿಂದ 180 ದಿನಗಳು-4.20% ಬಡ್ಡಿ

  • 181 ದಿನಗಳಿಂದ 270 ದಿನಗಳು-4.25% ಬಡ್ಡಿ

  • 271 ದಿನಗಳಿಂದ 1 ವರ್ಷಕ್ಕೆ - 4.75% ಬಡ್ಡಿ

  • 365 ದಿನಗಳಿಂದ 399 ದಿನಗಳು - 5.25% ಬಡ್ಡಿ

  • 400 ದಿನಗಳು - 5.40% ಬಡ್ಡಿ

  • 401 ದಿನಗಳು - 699 ದಿನಗಳು - 5.35% ಬಡ್ಡಿ

  • 700 ದಿನಗಳು - 5.55% ಬಡ್ಡಿ

  • 701 ದಿನಗಳಿಂದ 3 ವರ್ಷಗಳು - 5.30% ಬಡ್ಡಿ

  • 3 ವರ್ಷದಿಂದ 10 ವರ್ಷಗಳು - 5.25% ಬಡ್ಡಿ


 
ಇದನ್ನೂ ಓದಿ- ಔಷಧಿಗಳ ಖರೀದಿ, ಮೆಡಿಕಲ್ ಕನ್ಸಲ್ ಟೆಶನ್ ಎರಡೂ ಅಗ್ಗ ..! ಎಸ್‌ಬಿಐ ನೀಡುತ್ತಿದೆ ಈ ವಿಶೇಷ ಸೌಲಭ್ಯ


ಸಿಟಿ ಯೂನಿಯನ್ ಬ್ಯಾಂಕ್ ಹೊರತುಪಡಿಸಿ, ಇನ್ನೂ ಅನೇಕ ಬ್ಯಾಂಕ್‌ಗಳು ಎಫ್‌ಡಿಗಳ ಮೇಲೆ ನೀಡಲಾಗುವ ಬಡ್ಡಿದರಗಳನ್ನು ಹೆಚ್ಚಿಸಲು ನಿರ್ಧರಿಸಿವೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿ ದರವನ್ನು ಹೆಚ್ಚಿಸಿವೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.