ನವದೆಹಲಿ: ದೇಶದಾದ್ಯಂತ ಇರುವ ಕೋಟ್ಯಾಂತರ ರೈತರು ಪಿಎಂ ಕಿಸಾನ್‌ನ 14ನೇ ಕಂತಿಗಾಗಿ ಕಾಯುತ್ತಿದ್ದಾರೆ. ಪಿಎಂ ಕಿಸಾನ್ 14 ನೇ ಕಂತಿನ ಮೊದಲು, ಕೇಂದ್ರ ಕೃಷಿ ಸಚಿವರು ಮಹತ್ವದ  ಘೋಷಣೆ ಮಾಡಿದ್ದಾರೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Business News In Kannada) ನೀವು ಸಹ 2000 ರೂಪಾಯಿಗಾಗಿ ಕಾಯುತ್ತಿದ್ದರೆ, ಈ ಹಣವನ್ನು ಈ ತಿಂಗಳು ಅಂದರೆ ಜುಲೈ 28 ರಂದು ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಹೇಳಿದ್ದಾರೆ, ಆದರೆ ಆ ಹಣವನ್ನು ಪಡೆಯಲು ನೀವು ಕೆಲ ಪ್ರಮುಖ ಕೆಲಸಗಳನ್ನು ಮಾಡಬೇಕಾಲಿದೆ ಎಂದು ಅವರು ಹೇಳಿದ್ದಾರೆ. ಯಾವ ಕೆಲಸ ಮಾಡಿದ ನಂತರವೇ 14ನೇ ಕಂತಿನ ಹಣ ನಿಮ್ಮ ಖಾತೆಗೆ ಬರುತ್ತದೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಎಚ್ಚರಿಕೆ ನೀಡಿದ ಸರ್ಕಾರ
ಕೇಂದ್ರ ಸರ್ಕಾರವು ರೈತರಿಗಾಗಿ ಪ್ರಾರಂಭಿಸಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ನಲ್ಲಿ ನಿರಂತರವಾಗಿ ಇ-ಕೆವೈಸಿ ಪೂರ್ಣಗೊಳಿಸಲು ಒತ್ತು ನೀಡಲಾಗುತ್ತಿದೆ. ಈ ಹಿಂದೆ ಇ-ಕೆವೈಸಿ ಮಾಡದ ರೈತರಿಗೆ ಸರ್ಕಾರ ಯೋಜನೆಯ ಕಂತಿನ ಹಣ ನೀಡಿಲ್ಲ, ಆದರೆ ಇನ್ನೂ ಅನೇಕ ರೈತರ ಇ-ಕೆವೈಸಿ ಪೂರ್ಣಗೊಳಿಸಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ವಿಶೇಷ ಅಭಿಯಾನವನ್ನೂ ಸಹ ನಡೆಸಲಾಗುತ್ತಿದೆ.


'ಫೇಸ್ ಅಥೆಂಟಿಕೇಶನ್' ಸೌಲಭ್ಯ ಪರಿಚಯಿಸಲಾಗಿದೆ
ಇದುವರೆಗೆ e-kyc ಮಾಡುವ ಸೌಲಭ್ಯವು OTP ಅಥವಾ 'ಬೆರಳಚ್ಚು' ಮೂಲಕ ಮಾತ್ರ ಲಭ್ಯವಿತ್ತು. ಆದರೆ ಇದೀಗ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕವೂ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಹೌದು, ಈ ಯೋಜನೆಯಡಿ ನೋಂದಾಯಿಸಿದ ರೈತರು ಇದೀಗ OTP ಅಥವಾ 'ಬೆರಳಚ್ಚು' ಇಲ್ಲದೆಯೇ ತಮ್ಮ ಮುಖವನ್ನು ಸ್ಕ್ಯಾನ್ ಮಾಡುವ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ಇದಕ್ಕಾಗಿ ಸರ್ಕಾರ ಮೊಬೈಲ್ ಅಪ್ಲಿಕೇಶನ್‌ನಲ್ಲಿ 'ಫೇಸ್ ಅಥೆಂಟಿಕೇಶನ್' ಸೌಲಭ್ಯವನ್ನು ಪರಿಚಯಿಸಿದೆ.


9 ಕೋಟಿ ರೈತರಿಗೆ ಹಣ ಸಿಗಲಿದೆ
ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ದೇಶದ 9 ಕೋಟಿ ರೈತರಿಗೆ ಪ್ರಧಾನಿ ಕಿಸಾನ್ ನಿಧಿಯ ಹಣವನ್ನು 14ನೇ ಕಂತಿನ ರೂಪದಲ್ಲಿ ನೀಡಲಾಗುವುದು ಎನ್ನಲಾಗಿದೆ. ಪ್ರಧಾನಿ ಮೋದಿ ಜುಲೈ 28 ರಂದು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ರೈತರ ಖಾತೆಗೆ 18 ಸಾವಿರ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಿದ್ದಾರೆ.


ಇದನ್ನೂ ಓದಿ-ಖಾತೆಯಲ್ಲಿ 10 ಸಾವಿರ ರೂ.ಗಳೂ ಬ್ಯಾಲೆನ್ಸ್ ಹೊಂದಿರದ ವ್ಯಕ್ತಿಗೆ 9 ಕೋಟಿ ನೀಡಿದ ಏ‌ಟಿ‌ಎಮ್!


ಪ್ರತಿ ವರ್ಷ 6000 ರೂಪಾಯಿ ನೀಡಲಾಗುತ್ತದೆ
ಕೇಂದ್ರ ಸರ್ಕಾರದಿಂದ ಪ್ರತಿ ವರ್ಷ ರೈತರಿಗೆ 6000 ರೂಪಾಯಿ ಆರ್ಥಿಕ ನೆರವು ಒದಗಿಸಲಾಗುತ್ತದೆ. ನೀವು ಈ ಹಣವನ್ನು ತಲಾ ರೂ.2000 ಮೂರು ಕಂತುಗಳಲ್ಲಿ ಪಡೆಯುತ್ತೀರಿ. ಈ ವರ್ಷ ಫೆಬ್ರುವರಿಯಲ್ಲಿ 13ನೇ ಕಂತಿನ ಹಣವನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಈಗ 14ನೇ ಕಂತಿನ ಹಣ ಜುಲೈ 28ರಂದು ವರ್ಗಾವಣೆಯಾಗಲಿದೆ.


ಇದನ್ನೂ ಓದಿ-ಕೃತಕ ಸಿಹಿಹಾರಕದಿಂದ ಕ್ಯಾನ್ಸರ್ ಬರುತ್ತದೆಯೇ? ಯೆಸ್..ಯೆಸ್.. ನೋ..ನೋ ಎಂದ ಡಬ್ಲೂಹೆಚ್ಓ!


ಅನರ್ಹ ರೈತರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ
ಪಿಎಂ ಕಿಸಾನ್ ಯೋಜನೆಯಲ್ಲಿ ಹೆಚ್ಚುತ್ತಿರುವ ಅಕ್ರಮಗಳ ನಡುವೆ, 1.86 ಲಕ್ಷ ಅನರ್ಹ ರೈತರನ್ನು ಲಾಭಾರ್ಥಿಗಳ ಪಟ್ಟಿಯಿಂದ ಕೈಬಿಡಲಾಗಿದೆ.  ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇ-ಕೆವೈಸಿ ಮತ್ತು ಭೂ ದಾಖಲೆಗಳ ಪರಿಶೀಲನೆಯನ್ನು ಸರ್ಕಾರ ಕಡ್ಡಾಯಗೊಳಿಸಿರುವುದರಿಂದ ಇದೀಗ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.