ನವದೆಹಲಿ: ಆಗಸ್ಟ್ ತಿಂಗಳಲ್ಲಿ ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ, ರಕ್ಷಾಬಂಧನ ಸೇರಿದಂತೆ ಹಲವು ಹಬ್ಬಗಳಿವೆ. ಹಬ್ಬದ ಸೀಸನ್‌ನಲ್ಲಿ ಸಾರ್ವಜನಿಕರಿಗೆ ಶುಭ ಸುದ್ದಿಯೊಂದು ಸಿಗಲಿದೆ. ಜನ ಸಾಮಾನ್ಯರಿಗೆ ಪರಿಹಾರ ನೀಡಲು ಸರ್ಕಾರ ಯೋಜನೆ ರೂಪಿಸಿದ್ದು ಹಬ್ಬದ ಋತುವಿನಲ್ಲಿ ಅಡುಗೆ ಅನಿಲ ದರವು ಮೊದಲಿಗಿಂತ ಅಗ್ಗವಾಗಲಿದೆ ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಹಬ್ಬದ ಋತುವಿನಲ್ಲಿ ಬೇಡಿಕೆಯ ಹೊರತಾಗಿಯೂ, ಖಾದ್ಯ ತೈಲವು ಅಗ್ಗವಾಗಬಹುದು. ಇದಕ್ಕಾಗಿ ಸರ್ಕಾರ ಆಮದುದಾರರು, ಉತ್ಪಾದಕರು ಮತ್ತು ಮಾರುಕಟ್ಟೆ ಕಂಪನಿಗಳ ಸಭೆ ಕರೆದಿದೆ. ಗುರುವಾರ ಅಂದರೆ ಆಗಸ್ಟ್ 4ರಂದು ಈ ನಿಟ್ಟಿನಲ್ಲಿ ಆಹಾರ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಬಹುದು ಎಂದು ಹೇಳಲಾಗುತ್ತಿದೆ. 


ಇದನ್ನೂ ಓದಿ- Cheapest SUV : 6 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ SUV ಕಾರು.! ಇದರ ಐದು ಪ್ರಮುಖ ವೈಶಿಷ್ಟ್ಯಗಳಿವು


ನಮ್ಮ ಜೀ ವಾಹಿನಿಯ ಅಂಗಸಂಸ್ಥೆ ಆದ ಜೀ ಬ್ಯುಸಿನೆಸ್‌ಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆಯಲ್ಲೂ ಇಳಿಕೆಯಾಗಿದೆ. ಸರ್ಕಾರವು ಅಂತರಾಷ್ಟ್ರೀಯ ಬೆಲೆಗಳಲ್ಲಿನ ಇಳಿಕೆಯ ಲಾಭವನ್ನು ಸಾಮಾನ್ಯ ಜನರಿಗೆ ತಲುಪಿಸಲು ಒತ್ತು ನೀಡುತ್ತಿದೆ. ಕಳೆದ ತಿಂಗಳು ಖಾದ್ಯ ತೈಲದಲ್ಲಿ 30 ರೂಪಾಯಿ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಖಾದ್ಯ ತೈಲದ ಬೆಲೆಯನ್ನು ಮತ್ತಷ್ಟು ಕಡಿತಗೊಳಿಸಬಹುದು. ಇದರೊಂದಿಗೆ ಜನಸಾಮಾನ್ಯರಿಗೆ ಹಬ್ಬದ ಕೊಡುಗೆ ನೀಡುವ ನಿರೀಕ್ಷೆ ಇದೆ. 


ಇದನ್ನೂ ಓದಿ- ಪೆಟ್ರೋಲ್-ಡೀಸೆಲ್ ಬಳಿಕ ಸಿಎನ್‌ಜಿ ದರ ಏರಿಕೆ


ಖಾದ್ಯ ತೈಲ ದರ 10-12 ರೂಪಾಯಿ ಇಳಿಕೆ ಆಗುವ ನಿರೀಕ್ಷೆ:
ಆಹಾರ ಇಲಾಖೆ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಭೆಯಲ್ಲಿ ಖಾದ್ಯ ತೈಲದ ಬೆಲೆಯನ್ನು 10 ರಿಂದ 12 ರೂಪಾಯಿಗಳಷ್ಟು ಕಡಿಮೆ ಮಾಡಬಹುದು. ತೈಲ ಉತ್ಪಾದಕರು ಮತ್ತು ಮಾರುಕಟ್ಟೆ ಕಂಪನಿಗಳು ಖಾದ್ಯ ತೈಲದ ಬೆಲೆಯನ್ನು ಇನ್ನಷ್ಟು ಕಡಿತಗೊಳಿಸಬಹುದು ಎಂದು ಭರವಸೆ ವ್ಯಕ್ತಪಡಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.