GST Rules: ಅಕ್ಟೋಬರ್ 1 ರಿಂದ ಜಿಎಸ್ಟಿ ನಿಮಯಗಳಲ್ಲಿ ಭಾರಿ ಬದಲಾವಣೆ, ಸರ್ಕಾರ ಹೇಳಿದ್ದೇನು?

GST Rules News: 10 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ 1 ಅಕ್ಟೋಬರ್ 2022 ರಿಂದ ಇ-ಇನ್ವಾಯ್ಸ್ ಕಡ್ಡಾಯವಾಗಿರಲಿದೆ.  

Written by - Nitin Tabib | Last Updated : Aug 2, 2022, 06:53 PM IST
  • ಅಕ್ಟೋಬರ್‌ನಿಂದ ಜಿಎಸ್‌ಟಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ.
  • ಹೌದು, GST ಅಡಿಯಲ್ಲಿ, 10 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು,
  • ಅಕ್ಟೋಬರ್ 1 ರಿಂದ B2B ವಹಿವಾಟುಗಳಿಗೆ ಎಲೆಕ್ಟ್ರಾನಿಕ್ ಇನ್‌ವಾಯ್ಸ್ (ಇ-ಇನ್‌ವಾಯ್ಸ್) ಕಡ್ಡಾಯವಾಗಿರಲಿದೆ.
GST Rules: ಅಕ್ಟೋಬರ್ 1 ರಿಂದ ಜಿಎಸ್ಟಿ ನಿಮಯಗಳಲ್ಲಿ ಭಾರಿ ಬದಲಾವಣೆ, ಸರ್ಕಾರ ಹೇಳಿದ್ದೇನು? title=
GST Rules News

GST Rules News: ಅಕ್ಟೋಬರ್‌ನಿಂದ ಜಿಎಸ್‌ಟಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಹೌದು, GST ಅಡಿಯಲ್ಲಿ, 10 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು, ಅಕ್ಟೋಬರ್ 1 ರಿಂದ B2B ವಹಿವಾಟುಗಳಿಗಾಗಿ ಎಲೆಕ್ಟ್ರಾನಿಕ್ ಇನ್‌ವಾಯ್ಸ್ (ಇ-ಇನ್‌ವಾಯ್ಸ್) ಸಾದರುಪಡಿಸಬೇಕಾಗಲಿದೆ. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಸುತ್ತೋಲೆ ಹೊರಡಿಸುವ ಮೂಲಕ ಈ ಮಾಹಿತಿಯನ್ನು ನೀಡಿದೆ. ಸರಕು ಮತ್ತು ಸೇವಾ ತೆರಿಗೆ (GST) ಅಡಿಯಲ್ಲಿ 10 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ 1 ಅಕ್ಟೋಬರ್ 2022 ರಿಂದ ಇ-ಇನ್ವಾಯ್ಸ್ ಕಡ್ದಾಯವಾಗಿರಲಿದೆ.

ಇಲಾಖೆ ನೀಡಿದ ಮಾಹಿತಿ ಏನು?
ಕಳೆದ ಮಾರ್ಚ್‌ನಲ್ಲಿ 20 ರಿಂದ 50 ಕೋಟಿ ವಹಿವಾಟು ಹೊಂದಿರುವ ತೆರಿಗೆದಾರರಿಗೆ ನೋಂದಣಿ ಮತ್ತು ಲಾಗಿನ್ ಸೌಲಭ್ಯ ಸಕ್ರಿಯಗೊಳಿಸಲಾಗಿದೆ. ಇದೇ ವೇಳೆ ಏಪ್ರಿಲ್ 1, 2022 ರಿಂದ ಜಾರಿಗೆ ಬರುವಂತೆ, ಮಂಡಳಿಯು ಜಿಎಸ್‌ಟಿ ಇ-ಇನ್‌ವಾಯ್ಸಿಂಗ್‌ನ ಮಿತಿಯನ್ನು 50 ಕೋಟಿಗಳಿಂದ 20 ಕೋಟಿಗಳಿಗೆ ಇಳಿಕೆ ಮಾಡಿದೆ. ಕಳೆದ ವರ್ಷ ಏಪ್ರಿಲ್ 1 ರಿಂದ, 50 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ಬಿ 2 ಬಿ ಇನ್‌ವಾಯ್ಸ್‌ಗಳನ್ನು ನೀಡುತ್ತಿವೆ ಎಂಬುದು ಇಲ್ಲಿ ಗಮನಾರ್ಹ. ಆದರೆ ಇದೀಗ 10 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಇದನ್ನು ವಿಸ್ತರಿಸಲಾಗುತ್ತಿದೆ.

ಇದನ್ನೂ ಓದಿ-ಇಲ್ಲಿ ಪೆಟ್ರೋಲ್ ಗಿಂತ ದುಬಾರಿಯಾಯಿತು ಸಿಎನ್‌ಜಿ

ಯಾಕೆ ಈ ನಿರ್ಧಾರ?
ಭಾರತ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯ ನಿಯಮಗಳಲ್ಲಿ ನಿರಂತರವಾಗಿ ಬದಲಾವಣೆಗಳನ್ನು ತರುತ್ತಿದೆ. ತೆರಿಗೆ ವಂಚನೆಯನ್ನು ಕಡಿಮೆ ಮಾಡುವುದು ಇದರ ಹಿಂದಿನ ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಸಂಬಂಧಿಸಿದಂತೆ, 2020 ರ ಅಕ್ಟೋಬರ್‌ನಲ್ಲಿ, 500 ಕೋಟಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳು ತಮ್ಮ B2B ವಹಿವಾಟುಗಳಲ್ಲಿ ಇ-ಇನ್‌ವಾಯ್ಸ್‌ಗಳನ್ನು ನೀಡುವ ಅಗತ್ಯವಿದೆ ಎಂದು ಸರ್ಕಾರ ನಿರ್ಧರಿಸಿತ್ತು.

ಇದನ್ನೂ ಓದಿ-ಐಟಿಆರ್ ಇ-ವೆರಿಫೈ ಪ್ರಕ್ರಿಯೆಯನ್ನು 30 ದಿನಗಳೊಳಗೆ ಪೂರ್ಣಗೊಳಿಸಿ, ಇಲ್ಲವೇ ಭಾರೀ ನಷ್ಟ

ಪೋರ್ಟಲ್‌ಗೆ ಮಾಹಿತಿ ನೀಡಬೇಕು
ಪ್ರಸ್ತುತ ಈ ಮಿತಿ 20 ಕೋಟಿ ರೂ.ಗಳಾಗಿದ್ದು. CBDT ಮತ್ತೆ 10 ಕೋಟಿಗೆ ಇಳಿಕೆ ಮಾಡಲು ನಿರ್ಧರಿಸಿದೆ. ಸರಕು ಮತ್ತು ಸೇವಾ ತೆರಿಗೆ ಪಾವತಿದಾರರು ಇ-ಇನ್‌ವಾಯ್ಸ್ ಅನ್ನು ನೋಂದಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಕಳುಹಿಸಲು ಸಾಧ್ಯವಾಗಲಿದೆ.  ಇನ್‌ವಾಯ್ಸ್ ಅಡಿಯಲ್ಲಿ, ತೆರಿಗೆದಾರರು ತಮ್ಮ ಆಂತರಿಕ ವ್ಯವಸ್ಥೆಯ ಮೂಲಕ ಬಿಲ್ ಅನ್ನು ರಚಿಸಬೇಕು ಮತ್ತು ಅದನ್ನು ಆನ್‌ಲೈನ್ ಇನ್‌ವಾಯ್ಸ್ ನೋಂದಣಿ ಪೋರ್ಟಲ್‌ಗೆ (IRP) ವರದಿ ಮಾಡಬೇಕಾಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News