ನವದೆಹಲಿ : SBI Debit Card EMI : ಈ ದಿನಗಳಲ್ಲಿ ಖರೀದಿ ನಂತರ ಅದನ್ನು ಇಎಂಐಗೆ ಪರಿವರ್ತಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ರೀತಿ ಮಾಡುವುದರಿಂದ ಅನೇಕ ಪ್ರಯೋಜನಗಳು ಸಿಗಲಿದೆ. ಮೊದಲನೆಯದಾಗಿ, ಒಟ್ಟು ಮೊತ್ತವನ್ನು ಒಮ್ಮೆಲೇ ಖರ್ಚು ಮಾಡಬೇಕಿಲ್ಲ. ಆದರೆ, EMI ಸೌಲಭ್ಯವು ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್‌ಗಳಲ್ಲಿ (Credit card) ಮಾತ್ರ ಲಭ್ಯವಿರುತ್ತದೆ. ಆದರೆ, ಪ್ರತಿಯೊಬ್ಬರೂ ಕ್ರೆಡಿಟ್ ಕಾರ್ಡ್ ಹೊಂದಿರುವುದಿಲ್ಲ. ಹೀಗಿರುವಾಗ, ದೇಶದ ಅತಿದೊಡ್ಡ ಬ್ಯಾಂಕ್ ಸೇಟ್ ಬ್ಯಾಂಕ್ ಆಫ್ ಇಂಡಿಯಾ ಡೆಬಿಟ್ ಕಾರ್ಡ್ (SBI Debit card) ಮೇಲೆ ಇಎಂಐ ಸೌಲಭ್ಯವನ್ನು ನೀಡುತ್ತಿದೆ. 


COMMERCIAL BREAK
SCROLL TO CONTINUE READING

SBI ಡೆಬಿಟ್ ಕಾರ್ಡ್ ಮೇಲೆ EMI ಆಫರ್ : 
ಎಸ್‌ಬಿಐ (SBI) ಪ್ರಕಾರ,  ಟಿವಿ, ಫ್ರಿಡ್ಜ್,  ಎಸಿ ಮುಂತಾದ ಗೃಹೋಪಯೋಗಿ ಉಪಕರಣಗಳನ್ನು ಬ್ಯಾಂಕಿನ ಡೆಬಿಟ್ ಕಾರ್ಡ್‌ನೊಂದಿಗೆ (Debit Card) ಖರೀದಿಸಿದರೆ ಅಥವಾ ಆನ್‌ಲೈನ್ ಶಾಪಿಂಗ್ ಮಾಡಿದರೆ, ಅದರ ಮೇಲೆ ಇಎಂಐ (EMI) ಆಯ್ಕೆ ಸಿಗುತ್ತದೆ. ಮಳಿಗೆಗಳಲ್ಲಿ ಖರೀದಿಸಿ, ಪಿಒಎಸ್ ಯಂತ್ರದ ಮೂಲಕ ಪಾವತಿಸಿದರೂ, ನಂತರ ಅದನ್ನು EMIಗೆ ಪರಿವರ್ತಿಸಿಕೊಳ್ಳಬಹುದು. ಹೀಗೆ ಮಾಡಿದರೆ ನಿಮ್ಮ ಖಾತೆಯಿಂದ ಒಮ್ಮೆಲೇ ದೊಡ್ಡ ಮೊತ್ತ ಕಡಿತಗೊಳ್ಳುವುದಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಇಎಂಐಗಳ ಸಂಖ್ಯೆಯನ್ನು ಆಯ್ಕೆ ಮಾಡಬಹುದು. ನೀವು ಅಮೆಜಾನ್ (Amazon), ಫ್ಲಿಪ್‌ಕಾರ್ಟ್‌ನಿಂದ ಆನ್‌ಲೈನ್‌ನಲ್ಲಿ ಶಾಪಿಂಗ್ (online shopping) ಮಾಡಿದರೂ ಸಹ, ಎಸ್‌ಬಿಐ ಡೆಬಿಟ್ ಕಾರ್ಡ್ ಮೂಲಕ ಪಾವತಿಸಿ, ಇಎಂಐ ಆಗಿ ಪರಿವರ್ತಿಸಬಹುದು.


ಇದನ್ನೂ ಓದಿ : Arecanut: ಕರ್ನಾಟಕದ ಪ್ರಮುಖ ಮಾರ್ಕೆಟ್‌ಗಳಲ್ಲಿ ಅಡಿಕೆ ಬೆಲೆ ಎಷ್ಟಿದೆ ಗೊತ್ತಾ..?


SBI ಈ ಆಫರ್ ಯಾರಿಗಾಗಿ?
SBI ಪ್ರಕಾರ, ಈ ಸೌಲಭ್ಯವು ಪೂರ್ವ-ಅನುಮೋದಿತ ಆಧಾರಿತವಾಗಿದೆ (pre approved based). ಅಂದರೆ, SBIನ ಎಲ್ಲಾ ಗ್ರಾಹಕರು ಈ ಸೌಲಭ್ಯವನ್ನು ಪಡೆಯುವುದಿಲ್ಲ. ಆಯ್ದ ಕೆಲವೇ ಗ್ರಾಹಕರು ಮಾತ್ರ ಡೆಬಿಟ್ ಕಾರ್ಡ್‌ನಿಂದ EMI ಪರಿವರ್ತನೆಯ ಆಫರ್ ಪಡೆಯುತ್ತಾರೆ. ಆದ್ದರಿಂದ, ಶಾಪಿಂಗ್ ಮಾಡುವ ಮುನ್ನ, ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ (Debit card) ಇಎಂಐ ಸೌಲಭ್ಯವಿದೆಯೇ ಎಂಬುದನ್ನು ಖಚಿ ತಪಡಿಸಿಕೊಳ್ಳಿ. 


ಕಾರ್ಡ್ ಇಎಂಐ ಸೌಲಭ್ಯವನ್ನು ಹೊಂದಿದೆಯೇ ಎಂದು ತಿಳಿಯುವುದು ಹೇಗೆ ?
ನಿಮ್ಮ ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಸೌಲಭ್ಯವಿದೆಯೇ ಅಥವಾ ಇಲ್ಲವೇ ಎಂದು ತಿಳಿಯಬೇಕಾದರೆ, ನಿಮ್ಮ ನೋಂದಾಯಿತ ಮೊಬೈಲ್ ಫೋನ್‌ನಲ್ಲಿ  DCEMI ಎಂದು ಬರೆದು, ಅದನ್ನು 567676 ಗೆ  ಕಳುಹಿಸಿ. ಆಗ ನಿಮಗೆ ಡೆಬಿಟ್ ಕಾರ್ಡ್ EMI ಸೌಲಭ್ಯ ಸಿಗುತ್ತದೆಯೇ ಇಲ್ಲವೋ ಎನ್ನುವುದು ಗೊತ್ತಾಗುವುದು. 


ಇದನ್ನೂ ಓದಿ : Pan-Aadhaar Link : ಈ ದಿನಾಂಕದೊಳಗೆ PAN Card ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ 10 ಸಾವಿರ ರೂ. ದಂಡ!


SBI ಡೆಬಿಟ್ ಕಾರ್ಡ್ EMIಯ ಪ್ರಯೋಜನಗಳು 
ನಿಮ್ಮ ಎಸ್‌ಬಿಐ ಡೆಬಿಟ್ ಕಾರ್ಡ್‌ನಲ್ಲಿ ನೀವು ಇಎಂಐ ಸೌಲಭ್ಯ ಹೊಂದಿದ್ದರೆ, 1 ಲಕ್ಷ ರೂ.ವರೆಗೆ ಶಾಪಿಂಗ್ ಮಾಡಬಹುದು. ನಂತರ ಅದನ್ನು ಪಾವತಿಸಲು, 6, 9, 12 ಮತ್ತು 18 ತಿಂಗಳ EMI ಆಯ್ಕೆಯನ್ನು ಪಡೆಯಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಯಾವುದೇ ಆಯ್ಕೆಯನ್ನು ಆರಿಸಿಕೊಳ್ಳಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.