ನವದೆಹಲಿ: SBI Floating ATM - ಎಸ್‌ಬಿಐ ತನ್ನ ಗ್ರಾಹಕರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಸುಧಾರಿಸಲು ನಿರಂತರ ಕೆಲಸ ಮಾಡುತ್ತಿದೆ. SBI ಗರಿಷ್ಠ 22,224 ಬ್ಯಾಂಕ್ ಶಾಖೆಗಳನ್ನು ಹೊಂದಿದೆ ಮತ್ತು 3906 ATM ಗಳನ್ನು ಹೊಂದಿದೆ. ಇದಕ್ಕೂ ಮೊದಲು, ಎಸ್‌ಬಿಐ 2004 ರಲ್ಲಿ ಕೇರಳದಲ್ಲಿ ಫ್ಲೋಟಿಂಗ್ ATM ಆರಂಭಿಸಿತ್ತು. ಈ ಫ್ಲೋಟಿಂಗ್ ಎಟಿಎಂ ಅನ್ನು ಕೇರಳ ಶಿಪ್ಪಿಂಗ್ ಮತ್ತು ಒಳನಾಡು ನ್ಯಾವಿಗೇಷನ್ ಕಾರ್ಪೋರೇಶನ್ (KSINC) ನ 'ಜಂಕರ್ ವಿಹಾರ'ದಲ್ಲಿ ತೆರೆಯಲಾಗಿದೆ. ಈ ತೇಲುವ ಎಟಿಎಂಗಳು ಈಗ ಪ್ರವಾಸಿಗರಿಗೆ ತಮ್ಮ ನಗದು ಅಗತ್ಯಗಳನ್ನು ಪೂರೈಸುವ ಜೊತೆಗೆ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿವೆ. SBIಇದೀಗ ಶ್ರೀನಗರದ ಜನರಿಗೆ ಅದ್ಭುತವಾದ ಉಡುಗೊರೆಯನ್ನು ನೀಡಿದೆ. ಆಗಸ್ಟ್ 16 ರಂದು, SBI ಶ್ರೀನಗರದ ಪ್ರಸಿದ್ಧ ದಾಲ್ ಸರೋವರದಲ್ಲಿ ಹೌಸ್ ಬೋಟ್ ನಲ್ಲಿ ಎಟಿಎಂ (SBI New ATM) ಅನ್ನು ತೆರೆದಿದೆ. ಈ ತೇಲುವ ಎಟಿಎಂ ತಿಳಿದುಕೊಳ್ಳೋಣ ಬನ್ನಿ.
SBI ವಿಶಿಷ್ಟ ಪ್ರಯತ್ನ
ಈ ಕುರಿತು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ SBI, 'ಸ್ಥಳೀಯರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಎಸ್‌ಬಿಐ ಶ್ರೀನಗರದ ದಾಲ್ ಸರೋವರದಲ್ಲಿ ಹೌಸ್ ಬೋಟ್‌ನಲ್ಲಿ ಎಟಿಎಂ ಅನ್ನು ತೆರೆದಿದೆ. ಜನಪ್ರಿಯ ದಾಲ್ ಸರೋವರದಲ್ಲಿ (Dal Lake ATM) ತೇಲುತ್ತಿರುವ ಎಟಿಎಂ ದೀರ್ಘಕಾಲದ ಅಗತ್ಯವನ್ನು ಪೂರೈಸುತ್ತದೆ ಮತ್ತು ಶ್ರೀನಗರದ ಆಕರ್ಷಣೆಗಳಿಗೆ ಹೆಚ್ಚುವರಿ ಆಕರ್ಷಣೆ ನೀಡಲಿದೆ' ಎಂದು ಹೇಳಿದೆ.
SBI opened an ATM on a Houseboat at #DalLake, Srinagar for the convenience of locals & tourists. It was inaugurated by the Chairman, SBI, on 16th August. The #FloatingATM in the popular Dal Lake fulfills a long-standing need & will be an added attraction to the charm of Srinagar. pic.twitter.com/nz3iddHIdp
— State Bank of India (@TheOfficialSBI) August 19, 2021
ಜನರಿಗೆ ಸಿಗಲಿದೆ ನೆಮ್ಮದಿ
SBI ನಡೆಸಿರುವ ಈ ಪ್ರಯತ್ನದಿಂದ ಹೌಸ್ ಬೋಟ್ ನಲ್ಲಿ ವಾಸಿಸುವ ಜನರಿಗೆ ಭಾರಿ ನೆಮ್ಮದಿ ಸಿಕ್ಕಂತಾಗಿದೆ. ಏಕೆಂದರೆ ಅವರು ಹಣವನ್ನು ಹಿಂಪಡೆಯಲು ಮುಖ್ಯ ನಗರಕ್ಕೆ ಬರಬೇಕಾಗುತ್ತದೆ. ಇದಲ್ಲದೆ ಪ್ರವಾಸಿಗರು ಎಟಿಎಮ್ ಬಳಿ ಇರುವ ಹೌಸ್‌ಬೋಟ್‌ಗಳಲ್ಲಿ ಉಳಿಯಲು ಬಯಸುತ್ತಿರುವುದರಿಂದ ಇದು ತಮಗೆ ಲಾಭ ತಂದಿದೆ ಎಂದು ಅವರು ಹೇಳುತ್ತಾರೆ.
ಇದನ್ನೂ ಓದಿ-SBI Alert! SBI ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ
'ಹಾಗೆ ನೋಡಿದರೆ, ಕಳೆದ ಕೆಲ ದಿನಗಳಿಂದ ಪ್ರವಾಸೋದ್ಯಮವು ವೇಗ ಪಡೆದುಕೊಳ್ಳುತ್ತಿದೆ. ಇದರಿಂದ ಪ್ರವಾಸಿಗರು ಕೂಡ ಬಹಳ ಸಂತೋಷದಿಂದ ಕಾಲಕಲೆಯುತ್ತಿದ್ದಾರೆ. ಅವರು ಕೇವಲ ಹಣವನ್ನು ಪಡೆಯಲು ಮಾತ್ರ ಬರುತ್ತಿಲ್ಲ. ಅವರ ಪಾಲಿಗೆ ಇದೊಂದು ಆಕರ್ಷಣೆಯ ಕೇಂದ್ರವಾಗಿದೆ. ಇದರೊಂದಿಗೆ ಪ್ರವಾಸಿಗರು ಹೊಸ ಅನುಭವ ಪಡೆಯುತ್ತಿದ್ದಾರೆ. ಇದು ಜನರಿಗೆ ಹೆಚ್ಚಿನ ಅನುಕೂಲವನ್ನು ತಂದಿದೆ. ಈ ಕ್ರಮವನ್ನು ಕೈಗೊಂಡ ಸ್ಟೇಟ್ ಬ್ಯಾಂಕ್‌ಗೆ ನಾವು ಕೃತಜ್ಞರಾಗಿದ್ದೇವೆ. ಇದಕ್ಕಾಗಿ ನಾವು ಈ ಮೊದಲು ರಸ್ತೆಗೆ ಇಳಿಯಬೇಕಾಗುತ್ತಿತ್ತು' ಎಂದು ಹೌಸ್ ಬೋಟ್ ಮಾಲೀಕರಾಗಿರುವ ಸಾಕೀಬ್ ಇಬ್ರಾಹಿಮ್ ಹೇಳುತ್ತಾರೆ.
ಇದನ್ನೂ ಓದಿ-SBI ನೀಡುತ್ತಿದೆ ವಿಶೇಷ ಸೌಲಭ್ಯ , ಗ್ರಾಹಕರ ಮನೆ ಬಾಗಿಲಿಗೆ ತಲುಪಲಿದೆ 20, 000 ರೂಪಾಯಿ
ಬೇಸಿಗೆ ಕಾಲದಲ್ಲಿ ಕಣಿವೆಗೆ ಸಾಕಷ್ಟು ಜನ ಪ್ರವಾಸಿಗರು ಭೇಟಿ ನೀಡುತ್ತಾರೆ
ಕೊರೊನಾ ಮಹಾಮಾರಿಯ ಕಾಲದ ನಂತರ ಬಂದ ಬೇಸಿಗೆಯಲ್ಲಿ ಕಣಿವೆಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಹಾಗೂ ಬಹುತೇಕ ಹೌಸ್ ಬೋಟ್ (SBI Houseboat ATM) ಹಾಗೂ ಹೋಟಲ್ ಗಳು ಬುಕ್ ಆಗಿದ್ದವು. ಹೌಸ್ ಬೋಟ್ ಮೇಲೆ ವಾಸಿಸುವ ಪ್ರವಾಸಿಗರಿಗೆ ಈ ಫ್ಲೋಟಿಂಗ್ ATMನಿಂದ ಭಾರಿ ಅನುಕೂಲವಾಗಿದೆ. ಅಷ್ಟೇ ಅಲ್ಲ ಅವರು ಫ್ಲೋಟಿಂಗ್ ATM ಜೊತೆಗೆ ಸೇಲ್ಫಿ ಕೂಡ ಕ್ಲಿಕ್ಕಿಸುತ್ತಿದ್ದಾರೆ. ಏಕೆಂದರೆ ಇದೊಂದು ವಿಶಿಷ್ಟ ಅನುಭವವಾಗಿದೆ.
ಇದನ್ನೂ ಓದಿ-SBI ಗ್ರಾಹಕರ ಗಮನಕ್ಕೆ! ನೀವು ATM Card ಹೊಂದಿದ್ದರೆ ಎಚ್ಚರ : ಬ್ಯಾಂಕ್ ಪ್ರಮುಖ ಮಾಹಿತಿಯೊಂದನ್ನ ನೀಡಿದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ