GST Council 49th Meeting: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್‌ನ 49ನೇ ಸಭೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ಪರೀಕ್ಷೆಗಳ ಮೇಲೆ ಜಿಎಸ್‌ಟಿ ವಿಧಿಸದಿರಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಈ ನಿರ್ಧಾರದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ದೊಡ್ಡ ಸಮಾಧಾನ ಸಿಕ್ಕಂತಾಗಿದೆ. ಜಿಎಸ್‌ಟಿ ಕೌನ್ಸಿಲ್‌ನ 49 ನೇ ಸಭೆಯ ಮುಕ್ತಾಯದ ಬಳಿಕ  ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಸ್ತುತ ಪರೀಕ್ಷಾ ಶುಲ್ಕದ ಮೇಲೆ 18% GST ವಿಧಿಸಲಾಗುತ್ತದೆ
ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕದ ಜೊತೆಗೆ ಶೇ.18ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ಪರೀಕ್ಷೆಗಳ ಮೇಲೆ ಜಿಎಸ್‌ಟಿ ವಿಧಿಸದಿರುವ ಸರ್ಕಾರದ ನಿರ್ಧಾರದಿಂದ, ಇದೀಗ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕದ ಮೇಲೆ ಜಿಎಸ್‌ಟಿ ಪಾವತಿಸಬೇಕಾಗಿಲ್ಲ.-


ಇದನ್ನೂ ಓದಿ-SBI ಪ್ರಸ್ತುತಪಡಿಸಿದೆ ಒಂದು ಜಬರ್ದಸ್ತ್ ಯೋಜನೆ, ಹೂಡಿಕೆಯ ಮೇಲೆ ಶೇ.7.6 ರಷ್ಟು ಬಡ್ಡಿಯ ಲಾಭ!


ದ್ರವರೂಪದ ಬೆಲ್ಲ ಮತ್ತು ಪೆನ್ಸಿಲ್ ಶಾರ್ಪನರ್ ಮೇಲಿನ ಜಿಎಸ್‌ಟಿ ತಗ್ಗಿಸಲು ನಿರ್ಧಾರ
ಜಿಎಸ್‌ಟಿ ಕೌನ್ಸಿಲ್ ಕಾಕಂಬಿ ಅಂದರೆ ದ್ರವರೂಪದ ಬೆಲ್ಲ, ಪೆನ್ಸಿಲ್ ಶಾರ್ಪನರ್ ಮತ್ತು ಆಯ್ದ ಟ್ರ್ಯಾಕಿಂಗ್ ಸಾಧನಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಜಿಎಸ್‌ಟಿ ಕೌನ್ಸಿಲ್ ಕಾಕಂಬಿ ಮೇಲಿನ  ಜಿಎಸ್‌ಟಿಯನ್ನು ಶೂನ್ಯಗೊಳಿಸಿದೆ. ಪ್ರಸ್ತುತ ಅದರ ಮೇಲೂ ಕೂಡ ಶೇ. 18ರಷ್ಟು GST ಅನ್ವಯಿಸುತ್ತದೆ. ಈಗ ಅದನ್ನು ಶೂನ್ಯಕ್ಕೆ ಇಳಿಸಲಾಗಿದೆ. ಅದನ್ನು ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಿದರೆ, ಅದರ ಮೇಲೆ ಶೇ.5. ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.


ಇದನ್ನೂ ಓದಿ-Gold Price: ಮತ್ತಷ್ಟು ಅಗ್ಗವಾದ ಚಿನ್ನ, ಬೆಳ್ಳಿ ಬೆಲೆಯೂ ಇಳಿಕೆ!


ಇದಲ್ಲದೇ, ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪೆನ್ಸಿಲ್ ಮತ್ತು ಶಾರ್ಪನರ್‌ಗಳ ಮೇಲಿನ ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಪೆನ್ಸಿಲ್ ಮತ್ತು ಶಾರ್ಪನರ್‌ಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.18 ರಿಂದ ಶೇ.12ಕ್ಕೆ ಇಳಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.


ಇದನ್ನೂ ಓದಿ-PM Kisan Yojana Update: 13 ನೇ ಕಂತಿಗೂ ಮುನ್ನ ರೈತರ ಖಾತೆಗೆ ಬರಲಿವೆ ರೂ.3000!


ಪಾನ್, ಮಸಾಲಾ, ಗುಟ್ಖಾ ಬಗ್ಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ನಿಗದಿತ ದಿನಾಂಕದ ನಂತರ ವಾರ್ಷಿಕ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲು ವಿಳಂಬ ಶುಲ್ಕವನ್ನು ತರ್ಕಬದ್ಧಗೊಳಿಸಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಹಣಕಾಸು ಹೇಳಿದ್ದಾರೆ. ಪಾನ್ ಮಸಾಲಾ ಮತ್ತು ಗುಟ್ಕಾ ಉದ್ಯಮದಲ್ಲಿನ ತೆರಿಗೆ ವಂಚನೆಯನ್ನು ತಡೆಯಲು ಒಡಿಶಾ ಹಣಕಾಸು ಸಚಿವ ನಿರಂಜನ್ ಪೂಜಾರಿ ಅಧ್ಯಕ್ಷತೆಯಲ್ಲಿ ರಚಿಸಲಾದ ಮಂತ್ರಿಗಳ ಗುಂಪಿನ (GoM) ವರದಿಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಹಣಕಾಸು ಸಚಿವೆ ಮಾಹಿತಿ ನೀಡಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.