Gold Price: ಮತ್ತಷ್ಟು ಅಗ್ಗವಾದ ಚಿನ್ನ, ಬೆಳ್ಳಿ ಬೆಲೆಯೂ ಇಳಿಕೆ!

Gold Price Update: ಚಿನ್ನದ ಬೆಲೆ ಕುರಿತು ಹೊಸ ಅಪ್ಡೇಟ್ ಪ್ರಕಟವಾಗಿದ್ದು, ಚಿನ್ನದ ಬೆಲೆ ಮತ್ತೆ ಜಾರಿದೆ. ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ನೀವು ಸಹ ಖರೀದಿಸಲು ಯೋಜಿಸುತ್ತಿದ್ದರೆ ಇತ್ತೀಚಿನ ದರಗಳನ್ನು ಪರಿಶೀಲಿಸಿ.  

Written by - Nitin Tabib | Last Updated : Feb 17, 2023, 08:51 PM IST
  • ಅಂತರಾಷ್ಟ್ರೀಯ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ,
  • ಅಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
  • ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1,821 ಡಾಲರ್‌ನಲ್ಲಿ ಮುಂದುವರಿದಿವೆ.
Gold Price: ಮತ್ತಷ್ಟು ಅಗ್ಗವಾದ ಚಿನ್ನ, ಬೆಳ್ಳಿ ಬೆಲೆಯೂ ಇಳಿಕೆ! title=
ಚಿನ್ನದ ಬೆಲೆ ಕುರಿತು ಹೊಸ ಅಪ್ಡೇಟ್ ಪ್ರಕಟ

Gold-Silver Price: ಚಿನ್ನದ ಬೆಲೆ ಕುರಿತು ಹೊಸ ಅಪ್ಡೇಟ್ ಪ್ರಕಟಗೊಂಡಿದೆ. ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇಂದು ಚಿನ್ನದ ಬೆಲೆ 55,900 ರೂ.ಗೆ ಬಂದು ತಲುಪಿದೆ. ಇದೇ ವೇಳೆ, ಬೆಳ್ಳಿಯ ಬೆಲೆ 65,000 ರೂ.ಗೆ ಬಂದು ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಈ ಬಗ್ಗೆ ಮಾಹಿತಿ ನೀಡಿದೆ. ಇಂದು 10 ಗ್ರಾಂ ಚಿನ್ನದ ದರ ಎಷ್ಟು ಎಂದು ತಿಳಿದುಕೊಳ್ಳೋಣ ಬನ್ನಿ.

ಅಗ್ಗವಾದ ಚಿನ್ನ ಮತ್ತು ಬೆಳ್ಳಿ ಬೆಲೆ
ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆ 285 ರೂಪಾಯಿಗಳಷ್ಟು ಕುಸಿದು 10 ಗ್ರಾಂಗೆ 55,950 ರೂಪಾಯಿಗಳಿಗೆ ತಲುಪಿದೆ. ಇದೇ ವೇಳೆ, ಕಳೆದ ವಹಿವಾಟಿನ ದಿನದಂದು, ಚಿನ್ನದ ಬೆಲೆ 10 ಗ್ರಾಂಗೆ 56,235 ರೂ.ನಷ್ತಿತ್ತು. ಇದಲ್ಲದೇ ಬೆಳ್ಳಿಯೂ ಇಂದು ಅಗ್ಗವಾಗಿದೆ. ಬೆಳ್ಳಿಯ ಬೆಲೆಯೂ 620 ರೂಪಾಯಿ ಇಳಿಕೆ ಕಂಡು ಪ್ರತಿ ಕೆಜಿಗೆ 65,005 ರೂಪಾಯಿಗಳಿಗೆ ತಲುಪಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಅಗ್ಗವಾದ ಚಿನ್ನದ ಬೆಲೆ
ಇದಲ್ಲದೇ ಅಂತರಾಷ್ಟ್ರೀಯ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ, ಅಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 1,821 ಡಾಲರ್‌ನಲ್ಲಿ ಮುಂದುವರಿದಿವೆ. ಇನ್ನೊಂದೆಡೆ, ಬೆಳ್ಳಿಯ ಬೆಲೆ ಕೂಡ ಪ್ರತಿ ಔನ್ಸ್ಗೆ $ 21.29 ಮಟ್ಟದಲ್ಲಿದೆ.

ಇದನ್ನೂ ಓದಿ-PM Kisan Yojana Update: 13 ನೇ ಕಂತಿಗೂ ಮುನ್ನ ರೈತರ ಖಾತೆಗೆ ಬರಲಿವೆ ರೂ.3000!

ತಜ್ಞರ ಅಭಿಪ್ರಾಯವೇನು?
ನಿರೀಕ್ಷೆಗಿಂತ ಉತ್ತಮವಾದ ಯುಎಸ್ ಆರ್ಥಿಕ ಪರಿಸ್ಥಿತಿಯ ಅಂಕಿಅಂಶಗಳು ಹಾಗೂ ಫೆಡರಲ್ ರಿಸರ್ವ್ ಅಧಿಕಾರಿಗಳ ನಿರಂತರ ಆಕ್ರಮಣಕಾರಿ ಹೇಳಿಕೆಗಳಿಂದ ಚಿನ್ನದ ಬೆಲೆ ಕುಸಿಯುತ್ತಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ.

ಇದನ್ನೂ ಓದಿ-SBI ಪ್ರಸ್ತುತಪಡಿಸಿದೆ ಒಂದು ಜಬರ್ದಸ್ತ್ ಯೋಜನೆ, ಹೂಡಿಕೆಯ ಮೇಲೆ ಶೇ.7.6 ರಷ್ಟು ಬಡ್ಡಿಯ ಲಾಭ!

ನಿಮ್ಮ ನಗರದಲ್ಲಿ ದರಗಳನ್ನು ಈ ರೀತಿ ಪರಿಶೀಲಿಸಿ
ನೀವೂ ಕೂಡ ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಪರಿಶೀಲಿಸಲು ಬಯಸುತ್ತಿದ್ದರೆ. ಇಂಡಿಯನ್ ಸರಾಫ್ ಮತ್ತು ಜ್ಯುವೆಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವ ಸಂಖ್ಯೆಯಿಂದ ಸಂದೇಶವನ್ನು ಕಳುಹಿಸುತ್ತೀರೋ ಅದೇ ಸಂಖ್ಯೆಗೆ ನಿಮಗೆ ಸಂದೇಶವು ಬರುತ್ತದೆ.

ಇದನ್ನೂ ಓದಿ-ಇನ್ಮುಂದೆ ನೀವು ನಿಮ್ಮ ಕೂದಲುಗಳಿಂದಲೂ ಆದಾಯ ಗಳಿಸಬಹುದು, ತಿಂಗಳಿಗೆ ರೂ. 25,000 ಗಳಿಸುವ ಐಡಿಯಾ ಇಲ್ಲಿದೆ!

ಚಿನ್ನ ಖರೀದಿಸುವ ಮುನ್ನ ಇದು ನೆನಪಿರಲಿ
ನೀವು ಕೂಡ ಮಾರುಕಟ್ಟೆಯಲ್ಲಿ ಚಿನ್ನವನ್ನು ಖರೀದಿಸಲು ಹೊರಟಿದ್ದರೆ, ಹಾಲ್‌ಮಾರ್ಕ್ ನೋಡಿದ ನಂತರವೇ ಚಿನ್ನವನ್ನು ಖರೀದಿಸಿ. ಚಿನ್ನದ ಶುದ್ಧತೆಯನ್ನು ಪರಿಶೀಲಿಸಲು ನೀವು ಸರ್ಕಾರಿ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. 'ಬಿಐಎಸ್ ಕೇರ್ ಆ್ಯಪ್' ಮೂಲಕ ನೀವು ಚಿನ್ನದ ಶುದ್ಧತೆ ನಿಜವೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಬಹುದು ಮತ್ತು ಅದೇ ಆಪ್ ಮೂಲಕವೂ ದೂರು ನೀಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News