Good News: ಸರ್ಕಾರದಿಂದ ಪ್ರತಿ ತಿಂಗಳು ಸಿಗಲಿದೆ 300 ಯೂನಿಟ್ ಉಚಿತ ವಿದ್ಯುತ್!
PM Surya Ghar Muft Bijli Yojana: ಕೇಂದ್ರ ಸರ್ಕಾರವು ಸುಮಾರು 1 ಕೋಟಿ ಮನೆಗಳಿಗೆ ʼಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆʼಯ ಮೂಲಕ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೆ ತರಲಿದೆ.
PM Surya Ghar Muft Bijli Yojana: ನರೇಂದ್ರ ಮೋದಿ ಅವರು 3ನೇ ಬಾರಿ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ದೇಶದ ಬೆಳವಣಿಗೆಗಾಗಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅವರ ಮತ್ತೊಂದು ಮಹಾತ್ವಾಕಾಂಕ್ಷಿ ʼಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆʼಯ ಮೂಲಕ 300 ಯೂನಿಟ್ ಉಚಿತ ವಿದ್ಯುತ್ ಒದಗಿಸುವುದಾಗಿದೆ. ಈ ಯೋಜನೆಯನ್ನು ಲೋಕಸಭಾ ಚುನಾವಣೆಗೂ ಮೊದಲು ಜಾರಿಗೆ ತರುವುದಾಗಿ ಮೋದಿ ಅವರು ತಿಳಿಸಿದ್ದರು.
ʼಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆʼಗಾಗಿ ಸುಮಾರು ₹75,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಈ ಮೊತ್ತದಲ್ಲಿ ಎಲ್ಲರಿಗೂ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಪ್ಲಾನ್ ಇದೆ. ಇದೀಗ ಮೋದಿಯವರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ʼಸೂರ್ಯ ಘರ್ ಯೋಜನೆʼಯನ್ನು ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. ಇದರಿಂದ ದೇಶದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ.
ಇದನ್ನೂ ಓದಿ: ಎಟಿಎಂ ಕಾರ್ಡ್ ಬಳಕೆದಾರರಿಗೆ ಬಿಗ್ ಶಾಕ್; ಇನ್ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕು!
ಕೇಂದ್ರ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ವಿಚಾರದಿಂದ ದೇಶದ ಜನತೆಗೆ ಖುಷಿಯಾಗಿದೆ. ಸುಮಾರು 1 ಕೋಟಿ ಮನೆಗಳಿಗೆ ಸೂರ್ಯ ಘರ್ ಯೋಜನೆಯ ಮೂಲಕ ಉಚಿತ ವಿದ್ಯುತ್ ನೀಡುವ ಗುರಿ ಹೊಂದಲಾಗಿದೆ. ನೀವೂ ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದಕೊಂಡರೆ ನಿಮ್ಮ ಮನೆಗಳಿಗೆ ಸೌರಫಲಕಗಳನ್ನು ಅಳವಡಿಸಲಾಗುತ್ತದೆ. ನಿಮಗೆ ಅಗತ್ಯವಿರುವಷ್ಟು ವಿದ್ಯುತ್ ಬಳಸಿ, ಉಳಿದಿದ್ದನ್ನು ಮಾರಾಟ ಸಹ ಮಾಡಬಹುದು. ಈ ಯೋಜನೆಯ ಸೌಲಭ್ಯ ಪಡೆಯುವುದಕ್ಕಿಂತ ಮೊದಲು ಕೆಲವು ವಿಚಾರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಿದೆ.
ಹಾಗಾದ್ರೆ ಕೇಂದ್ರ ಸರ್ಕಾರದ ಪ್ಲಾನ್ ಏನು? ʼಸೂರ್ಯ ಘರ್ ಯೋಜನೆಯ ಮೂಲಕ ನಿಮಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಸಿಗಲಿದೆ. ಒಂದು ವೇಳೆ ಹೊರಗಿನಿಂದ ನಿಮ್ಮ ಮನೆಯಲ್ಲಿ ಸೌರಫಲಕ ಅಳವಡಿಸಿದರೆ, 1 ಕಿಲೋ ವ್ಯಾಟ್‌ಗೆ ₹90 ಸಾವಿರ, 2 ಕಿಲೋವ್ಯಾಟ್‌ಗೆ 1.5 ಲಕ್ಷ, ಹಾಗೆಯೇ 3 ಕಿಲೋವ್ಯಾಟ್‌ಗೆ ₹2 ಲಕ್ಷ ರೂ. ಆಗಲಿದೆ. ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸಲಾಗುತ್ತದೆ.
ಇದನ್ನೂ ಓದಿ: HSRP deadline: ವಾಹನ ಮಾಲೀಕರಿಗೆ ಸರ್ಕಾರದಿಂದ ಗುಡ್ ನ್ಯೂಸ್!
ನೀವು ಸೂರ್ಯ ಘರ್ ಯೋಜನೆಯ ಮೂಲಕ ಸೌರಫಲಕ ಅಳವಡಿಸಿಕೊಂಡರೆ, 1 ಕಿಲೋವ್ಯಾಟ್‌ಗೆ ₹18 ಸಾವಿರ, 2 ಕಿಲೋವ್ಯಾಟ್‌ಗೆ ₹30 ಸಾವಿರ, 3 ಕಿಲೋವ್ಯಾಟ್‌ಗೆ ₹78 ಸಾವಿರ ಆಗಿದೆ. ಕೇಂದ್ರದ ಯೋಜನೆಯ ಮೂಲಕ ನಿಮಗೆ ಹೆಚ್ಚಿನ ಸಬ್ಸಿಡಿ ಸಿಗಲಿದೆ. ಸಬ್ಸಿಡಿ ಪಡೆಯಲು ಲೋಡ್ 85%ಗಿಂತ ಕಡಿಮೆ ಇರಬೇಕು. ಒಂದ್ಸಾರಿ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿದರೆ ಬಹಳಷ್ಟು ವರ್ಷಗಳ ಕಾಲ ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
1 ಗಂಟೆಗೆ 1 ಕಿಲೋವ್ಯಾಟ್‌ನಿಂದ 128 ಕಿಲೋವ್ಯಾಟ್‌ವರೆಗೂ ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ವೇಳೆ ನಿಮ್ಮ ಮನೆಗೆ 3 ಕಿಲೋವ್ಯಾಟ್ ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡರೆ, ವರ್ಷಕ್ಕೆ ₹30,240 ರೂ.ವರೆಗೂ ಉಳಿತಾಯವಾಗುತ್ತದೆ. ಸರ್ಕಾರದಿಂದ ನಿಮಗೆ ಸಿಗುವ ಸಬ್ಸಿಡಿ, ಇಲ್ಲಿ ಉಳಿತಾಯ ಮಾಡುವ ಹಣ ಎಲ್ಲವೂ ನಿಮಗೆ ಲಾಭದಾಯಕ ಆಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.