ಎಟಿಎಂ ಕಾರ್ಡ್ ಬಳಕೆದಾರರಿಗೆ ಬಿಗ್‌ ಶಾಕ್;‌ ಇನ್ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕು!

ATM Card Updates: ಕೆಲವು ಸಂದರ್ಭಗಳಲ್ಲಿ ಎಟಿಎಂ ಯಂತ್ರದಲ್ಲೇ ಹಣ ಸಿಲುಕಿಕೊಳ್ಳುವುದರಿಂದ ಅಥವಾ ಇಂಟರ್ನೆಟ್ ನಿಧಾನವಾಗುವುದರಿಂದ ಗ್ರಾಹಕರು ಹಣ ಸ್ವೀಕರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತಕ್ಷಣ ಹತ್ತಿರದ ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಿ ಮಾಹಿತಿ ನೀಡಬೇಕು ಅಥವಾ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡ ದೂರು ನೀಡಬೇಕು. 

Written by - Puttaraj K Alur | Last Updated : Jun 14, 2024, 07:36 PM IST
  • ಎಟಿಎಂ ಕಾರ್ಡ್ ಬಳಕೆದಾರರಿಗೆ ಎದುರಾಗಿದೆ ಬಿಗ್‌ ಶಾಕ್..!
  • ಇನ್ಮುಂದೆ ಗ್ರಾಹಕರು ಹೆಚ್ಚಿನ ಶುಲ್ಕ ಪಾವತಿಸಬೇಕು
  • ಮತ್ತೆ ಹೆಚ್ಚಾಗಲಿದೆ ವಿನಿಮಯ ಶುಲ್ಕದ ದರ?
ಎಟಿಎಂ ಕಾರ್ಡ್ ಬಳಕೆದಾರರಿಗೆ ಬಿಗ್‌ ಶಾಕ್;‌ ಇನ್ಮುಂದೆ ಹೆಚ್ಚಿನ ಶುಲ್ಕ ಪಾವತಿಸಬೇಕು! title=
ಹೆಚ್ಚಿನ ಶುಲ್ಕ ಪಾವತಿಸಬೇಕು!

ATM Card Updates: ಇತ್ತೀಚಿನ ದಿನಗಳಲ್ಲಿ ಎಟಿಎಂ ಬಳಕೆ ಸಾಮಾನ್ಯವಾಗಿದೆ. ಬಹುತೇಕ ಬ್ಯಾಂಕ್ ಖಾತೆದಾರರು ಹಣಕ್ಕಾಗಿ ಎಟಿಎಂ ಮಿಷನ್‌ಗಳಿಗೆ ಹೋಗುವುದು ಕಾಮನ್. ಆದರೆ ಇನ್ಮುಂದೆ ಮಿತಿಮೀರಿದ ವಹಿವಾಟುಗಳ ಮೇಲೆ ಶುಲ್ಕಗಳ ಹೆಚ್ಚಳವಾಗುತ್ತದೆ. ದೇಶದ ಎಟಿಎಂ ಆಪರೇಟರ್‌ಗಳು ಗ್ರಾಹಕರ ನಗದು ಹಿಂಪಡೆಯುವಿಕೆಯ ಮೇಲೆ ಪಾವತಿಸುವ ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್(RBI)ಗೆ ಮನವಿ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. 

ಎಟಿಎಂ ಉದ್ಯಮದ ಒಕ್ಕೂಟವು (CATMI) ಅಸ್ತಿತ್ವದಲ್ಲಿರುವ ವಿನಿಮಯ ಶುಲ್ಕವನ್ನು ಹೆಚ್ಚಿಸಲು RBI ಮತ್ತು ರಾಷ್ಟ್ರೀಯ ಪಾವತಿ ನಿಗಮವನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಒಂದು ಬ್ಯಾಂಕಿನ ATM ಕಾರ್ಡ್ ಅನ್ನು ಇನ್ನೊಂದು ಬ್ಯಾಂಕಿನ ATMನಲ್ಲಿ ಬಳಸುವುದನ್ನು ಇಂಟರ್‌ಚೇಂಜ್ ಎಂದು ಕರೆಯಲಾಗುತ್ತದೆ. ಸದ್ಯ 21 ರೂ. ಚಾರ್ಜ್ ಆದರೆ, ಇದೀಗ ಎಟಿಎಂ ನಿರ್ವಹಣಾ ಕಂಪನಿ 23 ರೂ. ಮಾಡಲು ಬಯಸಿದೆಯಂತೆ.

ಇದನ್ನೂ ಓದಿ: HSRP deadline: ವಾಹನ ಮಾಲೀಕರಿಗೆ ಸರ್ಕಾರದಿಂದ ಗುಡ್ ನ್ಯೂಸ್!

ಈ ಹಿಂದೆ 2 ವರ್ಷಗಳ ಹಿಂದೆ ವಿನಿಮಯ ಶುಲ್ಕದ ದರವನ್ನು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ ಎಟಿಎಂ ಉದ್ಯಮ ಒಕ್ಕೂಟವು ಶುಲ್ಕವನ್ನು ಇನ್ನಷ್ಟು ಹೆಚ್ಚಿಸುವಂತೆ ಮನವಿ ಮಾಡಿದೆ. ಎಟಿಎಂ ಕೇಂದ್ರಗಳಲ್ಲಿ ಹಣದ ಕೊರತೆಯಿಂದ ಖಾತೆಯ ಬ್ಯಾಲೆನ್ಸ್ ಕಟ್ ಆಗಿದ್ದರೆ.. ಅದಕ್ಕೆ ಕೆಲವು RBI ನಿಯಮಗಳಿವೆ.

ಕೆಲವು ಸಂದರ್ಭಗಳಲ್ಲಿ ಎಟಿಎಂ ಯಂತ್ರದಲ್ಲೇ ಹಣ ಸಿಲುಕಿಕೊಳ್ಳುವುದರಿಂದ ಅಥವಾ ಇಂಟರ್ನೆಟ್ ನಿಧಾನವಾಗುವುದರಿಂದ ಗ್ರಾಹಕರು ಹಣ ಸ್ವೀಕರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತಕ್ಷಣ ಹತ್ತಿರದ ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಿ ಮಾಹಿತಿ ನೀಡಬೇಕು ಅಥವಾ ಬ್ಯಾಂಕಿನ ಕಸ್ಟಮರ್ ಕೇರ್‌ಗೆ ಕರೆ ಮಾಡ ದೂರು ನೀಡಬೇಕು. 

RBI ನಿಯಮಗಳ ಪ್ರಕಾರ, ಗ್ರಾಹಕರ ದೂರಿನ 5 ದಿನಗಳಲ್ಲಿ ಬ್ಯಾಂಕ್‌ಗಳು ಹಣವನ್ನು ಹಿಂದಿರುಗಿಸುತ್ತವೆ. ಇಂತಹ ಮರುಪಾವತಿಯ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಬ್ಯಾಂಕ್ ಗ್ರಾಹಕರಿಗೆ ದಿನಕ್ಕೆ 100 ರೂ. ದಂಡವನ್ನು ಪಾವತಿಸುತ್ತದೆ.

ಇದನ್ನೂ ಓದಿಕೋಟ್ಯಂತರ ರೈತರಿಗೆ ಸಿಹಿ ಸುದ್ದಿ : ಇನ್ನು ಮೂರು ದಿನಗಳಲ್ಲಿ ಖಾತೆಗೆ ಬೀಳಲಿದೆ 2000 ರೂಪಾಯಿ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News