ನವದೆಹಲಿ: UPI Via Aadhaar - ದೇಶದ ಎಲ್ಲಾ ಬ್ಯಾಂಕ್‌ನ ಖಾತೆದಾರರಿಗೆ ಶೀಘ್ರದಲ್ಲಿಯೇ ಸಂತಸದ  ಸುದ್ದಿಯೊಂದು ಸಿಗಲಿದೆ. ಯಾವುದೇ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರುವ ಖಾತೆದಾರರು Unified Payments Interface (UPI) ಸೇವೆಯನ್ನು ಸಕ್ರಿಯಗೊಳಿಸಲು ಆಧಾರ್ (Aadhaar) ಮತ್ತು OTP ಎರಡನ್ನೂ ಬಳಸಲು ಸಾಧ್ಯವಾಗಲಿದೆ.

COMMERCIAL BREAK
SCROLL TO CONTINUE READING

ಸೆಪ್ಟೆಂಬರ್ 2021ರಲ್ಲಿ ಬಿಡುಗಡೆಯಾಗಿತ್ತು ಈ ವೈಶಿಷ್ಟ್ಯ
ಪ್ರಸ್ತುತ, UPI ಅನ್ನು ಸಕ್ರಿಯಗೊಳಿಸಲು ಖಾತೆದಾರರಿಗೆ ಡೆಬಿಟ್ ಕಾರ್ಡ್‌ನ ಆಯ್ಕೆಯನ್ನು ನೀಡಲಾಗಿದೆ. 'ಎಕನಾಮಿಕ್ ಟೈಮ್ಸ್‌'ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಈ ವೈಶಿಷ್ಟ್ಯವನ್ನು ಸೆಪ್ಟೆಂಬರ್ 2021 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಆರಂಭಿಸಿದೆ.

ಡಿಸೆಂಬರ್ 15ರಂದು ಆರಂಭಿಸುವ ಗುರಿ ಹೊಂದಲಾಗಿತ್ತು
ಆ ಸಂದರ್ಭದಲ್ಲಿ 15 ಡಿಸೆಂಬರ್ 2021ರೊಳಗೆ ಈ ಸೇವೆಯನ್ನು ಆರಂಭಿಸುವ ಗುರಿ ಹೊಂದಲಾಗಿತ್ತು. ಡೆಬಿಟ್ ಕಾರ್ಡ್ ಇಲ್ಲದ ಅಥವಾ ಕಾರ್ಡ್ ಆಕ್ಟಿವೇಟ್ ಇಲ್ಲದ ಗ್ರಾಹಕರು ಈಗ ಆಧಾರ್ ಮತ್ತು ಒಟಿಪಿಯೊಂದಿಗೆ UPI ಅನ್ನು ಸಕ್ರಿಯಗೊಳಿಸಬಹುದು ಎಂದು ET ವರದಿ ಹೇಳಿದೆ.


ಇದನ್ನೂ ಓದಿ-PF ಖಾತೆದಾರರಿಗೆ ಬಂಪರ್ ಆಫರ್ : ನಿಮಗೆ ಸಿಗಲಿದೆ ₹7 ಲಕ್ಷ, ಅದಕ್ಕೆ ಈ ಕೆಲಸ ಮಾಡಬೇಕಷ್ಟೆ

ಮಾರ್ಚ್ 15ರವರೆಗೆ ಅವಧಿ ವಿಸ್ತರಣೆ
NPCI ಅನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಜೊತೆಗೆ ಸಂಪರ್ಕಿಸುವ ಮೂಲಕ ಇದು ಸಾಧ್ಯವಾಗಿದೆ. ಅಂದರೆ, ಇದೀಗ ಡೆಬಿಟ್ ಕಾರ್ಡ್ ಅನ್ನು ಹೊರತುಪಡಿಸಿ, ಗ್ರಾಹಕರು OTP ದೃಢೀಕರಣವನ್ನು ಬಳಸಿಕೊಂಡು UPI ಅನ್ನು ಸಕ್ರಿಯಗೊಳಿಸಲು ಸಾಧ್ಯವಾಗಲಿದೆ. ಹೀಗಾಗಿ ಇದೀಗ ಈ ಹೊಸ ವ್ಯವಸ್ಥೆ ಜಾರಿಯ ದಿನಾಂಕವನ್ನು ಮಾರ್ಚ್ 15ರವರೆಗೆ ವಿಸ್ತರಿಸಲಾಗಿದೆ.


ಇದನ್ನೂ ಓದಿ-ರೈತರಿಗೆ ಸಂತಸದ ಸುದ್ದಿ : ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ ಈ ಸೌಲಭ್ಯ


ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಮೊಬೈಲ್‌ನಲ್ಲಿ UPI ಅಪ್ಲಿಕೇಶನ್ ಅನ್ನು ಬಳಸಿದಾಗ ಮತ್ತು ಅದೇ ಸಂಖ್ಯೆಯನ್ನು ಬ್ಯಾಂಕ್‌ನಲ್ಲಿ ನೋಂದಾಯಿಸಿದಾಗ ಮಾತ್ರ ಇದು ಸಾಧ್ಯವಾಗಲಿದೆ. ಹೆಚ್ಚಿನ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ, ಗ್ರಾಹಕರು ಡೆಬಿಟ್ ಕಾರ್ಡ್‌ನೊಂದಿಗೆ ಸಂಪರ್ಕಿಸಬೇಕು. ಅಂದರೆ, ಡಿಜಿಟಲ್ ಬ್ಯಾಂಕಿಂಗ್ ಪ್ರವೇಶವನ್ನು ಹೊಂದಿರುವವರು UPI ಬಳಸಬಹುದು.


ಇದನ್ನೂ ಓದಿ-Good News: ವಿಮಾನ ಯಾತ್ರಿಗಳಿಗೊಂದು ಗುಡ್ ನ್ಯೂಸ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.