ನವದೆಹಲಿ: ಆಧಾರ್ ಕಾರ್ಡ್ ಬಳಕೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ. ಈಗ ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆಯೂ ನಿಮ್ಮ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್(Download Aadhaar without Registered Mobile Number)ಮಾಡಬಹುದು. ಆಧಾರ್ ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಇದರ ಬಗ್ಗೆ ಮಾಹಿತಿ ನೀಡಿದೆ.
ವಿಶೇಷವಾಗಿ ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸದ ಜನರಿಗೆ ಸಹಾಯ ಮಾಡಲು UIDAI ಈ ಕ್ರಮವನ್ನು ತೆಗೆದುಕೊಂಡಿದೆ. ವಾಸ್ತವವಾಗಿ ಹಿಂದಿನ ಬಳಕೆದಾರರಿಗೆ ಆಧಾರ್ ಕಾರ್ಡ್(Aadhaar Card) ಡೌನ್‌ಲೋಡ್ ಮಾಡಲು ಆಧಾರ್‌ಗೆ ಲಿಂಕ್ ಮಾಡಲಾದ ನೋಂದಾಯಿತ ಮೊಬೈಲ್ ಸಂಖ್ಯೆಯ ಅಗತ್ಯವಿದೆ. ಮೊಬೈಲ್ ಸಂಖ್ಯೆ ಇಲ್ಲದೆ ನೀವು ಆಧಾರ್ ಕಾರ್ಡ್ ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿರಿ.
ಇದನ್ನೂ ಓದಿ: TVS iQube: ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೇವಲ 3,255 ರೂ.ಗಳ ಮಾಸಿಕ EMI ನಲ್ಲಿ ಖರೀದಿಸಬಹುದು
ಆಧಾರ್ ಡೌನ್‌ಲೋಡ್ ಮಾಡುವ ಸುಲಭ ಪ್ರಕ್ರಿಯೆ
1. ಇದಕ್ಕಾಗಿ ನೀವು ಮೊದಲು UIDAIನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಮತ್ತು ‘My Aadhaar’ ಅನ್ನು ಟ್ಯಾಪ್ ಮಾಡಿ.
2. ಈಗ 'ಆರ್ಡರ್ ಆಧಾರ್ ಪಿವಿಸಿ ಕಾರ್ಡ್' ಮೇಲೆ ಕ್ಲಿಕ್ ಮಾಡಿ.
3. ಈಗ ಇಲ್ಲಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
4. ಇಲ್ಲಿ ನೀವು ಆಧಾರ್ ಸಂಖ್ಯೆಯ ಬದಲಿಗೆ 16 ಅಂಕಿಗಳ ವರ್ಚುವಲ್ ಐಡೆಂಟಿಫಿಕೇಶನ್ ಸಂಖ್ಯೆ (VID) ಅನ್ನು ಸಹ ನಮೂದಿಸಬಹುದು.
5. ಈ ಪ್ರಕ್ರಿಯೆಯ ನಂತರ ನಿಮಗೆ ನೀಡಲಾದ security or captcha ಕೋಡ್ ಅನ್ನು ನಮೂದಿಸಿ.
6. ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಕಾರ್ಡ್ ಅನ್ನು ಡೌನ್‌ಲೋಡ್(Aadhaar Card Download) ಮಾಡಲು ಬಯಸಿದರೆ ‘My mobile number is not registered’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
7. ಈಗ ನಿಮ್ಮ ಪರ್ಯಾಯ ಸಂಖ್ಯೆ ಅಥವಾ ನೋಂದಾಯಿಸದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
8. ಈಗ ‘Send OTP’ ಕ್ಲಿಕ್ ಮಾಡಿ
9. ಈಗ ನೀವು ನಮೂದಿಸಿದ ಪರ್ಯಾಯ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ.
10. ನಂತರ ನೀವು ‘Terms and Conditions’ ಚೆಕ್‌ಬಾಕ್ಸ್ ಅನ್ನು ಕ್ಲಿಕ್ ಮಾಡಿ ಮತ್ತು ಅಂತಿಮವಾಗಿ ‘Submit’ ಕ್ಲಿಕ್ ಮಾಡಿ.
11. ಈಗ ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.
12. ಮರುಮುದ್ರಣದ ಪರಿಶೀಲನೆಗಾಗಿ ನೀವು Preview Aadhaar later ಆಯ್ಕೆಯನ್ನು ಇಲ್ಲಿ ಪಡೆಯುತ್ತೀರಿ.
13. ಇದರ ನಂತರ ನೀವು ‘Make Payment’ ಅನ್ನು ಆಯ್ಕೆ ಮಾಡಿರಿ.
ಇದನ್ನೂ ಓದಿ: Ministry of Labour : ಸರ್ಕಾರದ ಈ ಯೋಜನೆ ಮೂಲಕ ಕಾರ್ಮಿಕರಿಗೆ ಸಿಗಲಿದೆ ₹3000 : ಅದಕ್ಕೆ ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.