ನವದೆಹಲಿ: ಮೇಡ್ ಇನ್ ಇಂಡಿಯಾ ಹಾಗೂ ಸ್ಟಾರ್ಟ್ ಅಪ್ ಇಂಡಿಯಾಗಾಗಿ ಅಭಿಯಾನಗಳು ನಡೆಯುತ್ತಿರುವ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ತಮ್ಮ ಬಿಸಿನೆಸ್ ಆರಂಭಿಸಲು ಒಲವು ತೋರುತ್ತಿದ್ದಾರೆ. ನಿಮ್ಮ ಐಡಿಯಾ ಎಷ್ಟೇ ಉತ್ತಮವಾಗಿದ್ದರೂ ಕೂಡ ವೆಬ್ ಸೈಟ್ ಇಲ್ಲದೆ ನಿಮ್ಮ ಬಿಸಿನೆಸ್ ಅಪರಿಪೂರ್ಣ ಎನಿಸಲಾರಂಭಿಸುತ್ತದೆ. ಆದರೆ, ಇದೀಗ ವೆಬ್ ಸೈಟ್ ತಯಾರಿಸಲು ನಿಮಗೆ ಹೆಚ್ಚು ಯೋಚಿಸುವ ಆವಶ್ಯಕತೆ ಇಲ್ಲ. ಏಕೆಂದರೆ ಇದೀಗ ನೀವು ಸ್ವತಃ ನಿಮ್ಮದೇ ಆದ ವೆಬ್ ಸೈಟ್ ತಯಾರಿಸಬಹುದಾಗಿದೆ ಮತ್ತು ಅದೂ ಕೂಡ ಉಚಿತವಾಗಿ.
ಸಿಂಪಲ್ ಪ್ರಶ್ನೆಗಳಿಗೆ ಉತ್ತರ ನೀಡಿ ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಿ, ಬರಲಿದೆ Google Task Mate App


COMMERCIAL BREAK
SCROLL TO CONTINUE READING

Google Sites ನಲ್ಲಿ ನೀವು ನಿಮ್ಮ ವೆಬ್ ಸೈಟ್ ಅನ್ನು ತಯಾರಿಸಬಹುದು
ಹೌದು, ಅದು ಸಂಪೂರ್ಣ ಉಚಿತವಾಗಿರಲಿದೆ. ಗೂಗಲ್ ಸೈಟ್ಸ್ ನಲ್ಲಿ ನೀವು ಯಾವುದೇ ರೀತಿಯ ಶುಲ್ಕ ಪಾವತಿಸದೇ ನಿಮ್ಮ ವೆಬ್ ಸೈಟ್ ಸಿದ್ಧಪಡಿಸಬಹುದು. ಇಲ್ಲಿ ವೆಬ್ ಸೈಟ್ ತಯಾರಿಸಲು ನಿಮ್ಮಿಂದ ಯಾವುದೇ ಶುಲ್ಕ ಪಡೆಯಲಾಗುವುದಿಲ್ಲ. ಅದರಲ್ಲೂ ವಿಶೇಷತೆ ಎಂದರೆ ಬಳಸಲು ಇದು ತುಂಬಾ ಸುಲಭವಾಗಿದೆ. ಇದಕ್ಕಾಗಿ ನಿಮ್ಮ ಬಳಿ ಒಂದು ಗೂಗಲ್ ಖಾತೆ ಇರುವ ಆವಶ್ಯಕತೆ ಇದೆ.  https://sites.google.com/new ಗೆ ಭೇಟಿ ನೀಡಿ ನೀವು ನಿಮ್ಮ ವೆಬ್ ಸೈಟ್ ತಯಾರಿಸುವ ಕೆಲಸ ಆರಂಭಿಸಿ .
WhatsApp,Facebook,Telegramಗಳು ನೀಡುವ ಈ ಸೇವೆ Google ಕೂಡ ಆರಂಭಿಸಿದೆ


ಖುದ್ದಾಗಿ ನೀವೇ ನಿಮ್ಮ ವೆಬ್ ಸೈಟ್ ಡಿಸೈನ್ ಮಾಡಿ
ಗೂಗಲ್ ಸೈಟ್ಸ್ ನ ಒಂದು ವಿಶೇಷತೆ ಎಂದರೆ ಇಲ್ಲಿ ನೀವು ವೆಬ್ ಸೈಟ್ ತಯಾರಿಸಲು ನಿಮಗೆ ವೆಬ್ ಡಿಸೈನರ್ ಅಥವಾ ವೆಬ್ ಪ್ರೊಗ್ರಾಮಿಂಗ್ ಮಾಹಿತಿ ಇರಬೇಕಾದ ಅವಶ್ಯಕತೆ ಇಲ್ಲ. ಗೂಗಲ್ ಸೈಟ್ಸ್ ನಲ್ಲಿ ಈ ಮೊದಲೇ ತಯಾರಿಸಲಾಗಿರುವ ಟೆಂಪ್ಲೆಟ್ಸ್ ಗಳನ್ನೂ ಬಳಸಿ ನೀವು ನಿಮ್ಮ ವೆಬ್ ಸೈಟ್ ಡಿಸೈನ್ ಮಾಡಬಹುದು.
ಎಚ್ಚರ! ಚೀನೀ ಸರ್ವರ್‌ ಸಂಪರ್ಕ ಹೊಂದಿರುವ 5 ಹಣಕಾಸು ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಗೂಗಲ್


ವೆಬ್ ಸೈಟ್ ತೆರೆಯಲು ಐದು ವಿವಿಧ ಕೆಟಗರಿಗಳನ್ನು ನೀಡಲಾಗಿದೆ
ಗೂಗಲ್ ಸೈಟ್ಸ್ ಒಟ್ಟು ಐದು ಕೆಟಗರಿಗಳಲ್ಲಿ ನಿಮಗೆ ನಿಮ್ಮ ವೆಬ್ ಸೈಟ್ ರಚಿಸುವ ಆಯ್ಕೆ ನೀಡುತ್ತದೆ. ಇಲ್ಲಿ ನೀವು ಪೋರ್ಟ್ ಫೋಲಿಯೋ, ಟೀಂ, ಇವೆಂಟ್, ಹೆಲ್ಪ್ ಸೆಂಟರ್ ಅಥವಾ ಪ್ರಾಜೆಕ್ಟ್ ಕೆಟಗರಿಗಳಲ್ಲಿ ನೀವು ನಿಮ್ಮ ವೆಬ್ ಸೈಟ್ ಅನ್ನು ತಯಾರಿಸಬಹುದು.
Alert! ಶೀಘ್ರದಲ್ಲೇ ನಿಮ್ಮ Gmail ಖಾತೆ ಬಂದ್ ಆಗಬಹುದು!


ನಿಮಗೆ ಇಷ್ಟವಾಗುವ ಫೋಟೋ ಅಥವಾ ಟೆಕ್ಸ್ಟ್ ಆಯ್ಕೆ ಮಾಡಬಹುದು
google sites ನಲ್ಲಿ ನೀವು ನಿಮ್ಮ ಇಚ್ಛೆಗೆ ಅನುಗುಣವಾಗಿ ನಿಮ್ಮ ವೆಬ್ ಸೈಟ್ ಗೆ ಟೆಕ್ಸ್ಟ್, ಬಣ್ಣ ಮತ್ತು ಥೀಮ್ ಗಳನ್ನು ಆಯ್ಕೆ ಮಾಡಬಹುದು. ಇದಲ್ಲದೆ ನೀವು ನಿಮ್ಮ ಮನಸ್ಸಿಗೆ ಅನುಗುಣವಾಗಿ ಫೋಟೋಗಳನ್ನು ಸಹ ನಿಮ್ಮ ವೆಬ್ ಸೈಟ್ ನಲ್ಲಿ ಹಾಕಬಹುದು.