ಸಿಂಪಲ್ ಪ್ರಶ್ನೆಗಳಿಗೆ ಉತ್ತರ ನೀಡಿ ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಿ, ಬರಲಿದೆ Google Task Mate App

Task Mate App ನಲ್ಲಿ ಬಳಕೆದಾರರು ಕೆಲ ಸಿಂಪಲ್ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಲಿದೆ. ಈ ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಬಳಕೆದಾರರು ಹಣ ಸಂಪಾದಿಸಬಹುದು. ವಿಶೇಷತೆ ಎಂದರೆ ಇದಕ್ಕಾಗಿ ಬಳಕೆದಾರರು ಯಾವುದೇ ರೀತಿಯ ಶುಲ್ಕ ಪಾವತಿಸುವ ಆವಶ್ಯಕತೆ ಇಲ್ಲ. ಪ್ರಸ್ತುತ ಈ ಆಪ್ ಕೇವಲ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರೆ, ಶೀಘ್ರದಲ್ಲಿಯೇ ಇದನ್ನು ಎಲ್ಲಾ ಬಳಕೆದಾರರಿಗಾಗಿ ರೋಲ್ ಔಟ್ ಮಾಡಲಾಗುವುದು.

Last Updated : Nov 24, 2020, 12:43 PM IST
  • ಸಿಂಪಲ್ ಪ್ರಶ್ನೆಗಳ ಉತ್ತರ ಕಂಡು ಹಿಡಿದು ಹಣ ಗಳಿಸಿ.
  • ಶೀಘ್ರದಲ್ಲಿಯೇ ಗೂಗಲ್ ನಿಂದ ಬರಲಿದೆ Google Task Mate
  • ಪ್ರಸ್ತುತ ಇದು ಬೀಟಾ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ.
ಸಿಂಪಲ್ ಪ್ರಶ್ನೆಗಳಿಗೆ ಉತ್ತರ ನೀಡಿ ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಿ, ಬರಲಿದೆ Google Task Mate App title=

ನವದೆಹಲಿ: ಕಳೆದ ಕೆಲ ಸಮಯದಿಂದ ಭಾರತದಲ್ಲಿ ಹಣ ಗಳಿಕೆಯ ಹಲವು ಆಪ್ ಗಳು ಬಿಡುಗಡೆಯಾಗಿವೆ. ಈ ಹಿನ್ನೆಲೆಯಲ್ಲಿ ಇದೀಗ ಗೂಗಲ್ ಕೂಡ ಶೀಘ್ರದಲ್ಲಿಯೇ ಇಂತಹ ಆಪ್ ವೊಂದನ್ನು ಬಿಡುಗಡೆ ಮಾಡಲಿದೆ. ಈ ಆಪ್ ಬಳಸಿ ಬಳಕೆದಾರರು ಮನೆಯಲ್ಲಿಯೇ ಇದ್ದುಕೊಂಡು ಹಣ ಗಳಿಕೆ ಮಾಡಬಹುದು. Task Mate ಎಂದು ಹೆಸರಿಸಲಾಗಿರುವ ಈ ಆಪ್ ನಲ್ಲಿ ಬಳಕೆದಾರರು ಕೆಲ ಸಿಂಪಲ್ ಪ್ರಶ್ನೆಗಳಿಗೆ ಉತ್ತರ ನೀಡಿ ಹಣ ಸಂಪಾದಿಸಬಹುದು. ಈ ಆಪ್ ವಿಶೇಷತೆ ಎಂದರೆ ಇದರಲ್ಲಿ ಉತ್ತರ ನೀಡಲು ಬಳಕೆದಾರರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ. ಪ್ರಸ್ತುತ ಈ ಆಪ್ ಅನ್ನು ಕೇವಲ ಬೀಟಾ ಬಳಕೆದಾರರಿಗೆ ಮಾತ್ರ ಬಿಡುಗಡೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲೂ ಎಲ್ಲಾ ಬಳಕೆದಾರರಿಗೆ ರೋಲ್ ಔಟ್ ಮಾಡಲಾಗುವುದು ಎಂದು ಗೂಗಲ್ ಹೇಳಿದೆ.

ವರದಿಯೊಂದರ ಪ್ರಕಾರ Google Task Mate ನಲ್ಲಿ ನೀಡಲಾಗುವ ಟಾಸ್ಕ್ ಅಷ್ಟೊಂದು ಕಷ್ಟಕರವಾಗಿರುವುದಿಲ್ಲ. ಈ ಟಾಸ್ಕ್ ಗಳನ್ನು ಸಿಟ್ಟಿಂಗ್ ಅಥವಾ ಫೀಲ್ಡ್ ಎಂಬ ಎರಡು ಕೆಟಗರಿಗಳಾಗಿ ವಿಂಗಡಿಸಲಾಗುವುದು. ಸಿಟ್ಟಿಂಗ್ ಟಾಸ್ಕ್ ನಲ್ಲಿ transcribing, recording spoken sentences ಜೊತೆಗೆ  ಬಳಕೆದಾರರು ಇಂಗ್ಲಿಷ್ ನಿಂದ ಸ್ಥಳೀಯ ಭಾಷೆಗೆ ಭಾಷಾಂತರಿಸುವ ಟಾಸ್ಕ್ ನೀಡಲಾಗುವ ಸಾಧ್ಯತೆ ಇದೆ. ಫೀಲ್ಡ್ ಟಾಸ್ಕ್ ನಲ್ಲಿ ಬಳಕೆದಾರರು ಶಾಪ್ ಹೊರಗಡೆ ನಿಂತು ಅದರ ಭಾವಚಿತ್ರ ಕ್ಲಿಕ್ಕಿಸಿ ಮ್ಯಾಪಿಂಗ್ ವಿವರಗಳನ್ನು ಸರಿಪಡಿಸಲು ಹೇಳುವ ಸಾಧ್ಯತೆ ಇದೆ.

ಮಾಹಿತಿ ಸಿಗಲಿದೆ
Google Task Mate ನಲ್ಲಿ ಆಪ್ ಬಳಕೆದಾರರಿಗೆ ಅವರು ಯಾವ ಹಂತಕ್ಕೆ ತಲುಪಿದ್ದಾರೆ ಮತ್ತು ಎಷ್ಟು ಟಾಸ್ಕ್ ಗಳನ್ನು ಪೂರೈಸಿದ್ದಾರೆ, ಎಷ್ಟು ಟಾಸ್ಕ್ ಗಳು ಸರಿಯಾಗಿದ್ದವು ಎಂಬುದರ ಮಾಹಿತಿ ಕೂಡ ಸಿಗಲಿದೆ. ಇದರ ಜೊತೆಗೆ ಇದುವರೆಗೆ ಅವರು ಎಷ್ಟು ಹಣ ಸಂಪಾದಿಸಿದ್ದಾರೆ ಎಂಬುದು ಸಹ ತಿಳಿಯಲಿದೆ. ಇದರ ದೊಡ್ಡ ವಿಶೇಷತೆ ಎಂದರೆ ಬಳಕೆದಾರರು ತಮ್ಮ ಟಾಸ್ಕ್ ಅನ್ನು ಎಲ್ಲಿಂದ ಬೇಕಾದರೂ ಪೂರ್ಣಗೊಳಿಸಬಹುದು.

ಹಣ ಹೇಗೆ ಪಡೆಯಬೇಕು?
ಟಾಸ್ಕ್ ಪೂರ್ಣಗೊಂಡ ಬಳಿಕ ಬಳಕೆದಾರರು ತಮ್ಮ ಕರೆನ್ಸಿಯಲ್ಲಿ ಹಣವನ್ನು ಪಡೆಯಬಹುದು. ಅಂದರೆ ಒಂದು ವೇಳೆ ಭಾರತೀಯ ಬಳಕೆದಾರ ಟಾಸ್ಕ್ ನಲ್ಲಿ ಗೆದ್ದರೆ, ಅವರಿಗೆ ರೂಪಾಯಿ ರೂಪದಲ್ಲಿ ಹಣ ಸಿಗಲಿದೆ. ಇದಕ್ಕಾಗಿ ಬಳಕೆದಾರರು ಇ-ವ್ಯಾಲೆಟ್  ಹಾಗೂ ಅಕೌಂಟ್ ನಂಬರ್ ಪೇಮೆಂಟ್ ಪಾರ್ಟ್ನರ್ ಬಳಿ ತಮ್ಮ ಹೆಸರು ನೋಂದಾಯಿಸಬೇಕಾಗಲಿದೆ. ಒಮ್ಮೆ ಪ್ರೋಸೆಸ್ ಮುಗಿದ ಬಳಿಕ ಬಳಕೆದಾರರು ಕ್ಯಾಶ್ ಔಟ್ ಮೇಲೆ ಕ್ಲಿಕ್ಕಿಸಿ ತಮ್ಮ ಹಣ ಪಡೆಯಬಹುದು.

Trending News